ಸಂಸತ್ತು ವಿಸರ್ಜಿಸುವ ಕೆ.ಪಿ. ಶರ್ಮಾ ನಡೆ ವಿರುದ್ಧಧ ಹೋರಾಟಕ್ಕೆ ಭಾರತ, ಚೀನಾ ಬೆಂಬಲ ಕೋರಿದ ಪ್ರಚಂಡ!

ಸಂಸತ್ತು ವಿಸರ್ಜಿಸುವ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವಂತೆ ಭಾರತ ಮತ್ತು ಚೀನಾ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ತಮ್ಮ ಪಕ್ಷ ಮನವಿ ಮಾಡಿದೆ ಎಂದು ಒಲಿ ವಿರೋಧಿ ಬಣದ ಮುಖಂಡ ಪುಷ್ಪ ಕಮಲ್ ದಹಲ್ ಪ್ರಚಂಡ ಮಂಗಳವಾರ ಹೇಳಿದ್ದಾರೆ.

Published: 09th February 2021 08:40 PM  |   Last Updated: 09th February 2021 08:40 PM   |  A+A-


Head_of_Communist_Party_of_Nepal_Maoist_Pushpa_Kamal_Dahal_Prachanda1

ಪುಷ್ಪ ಕಮಲ್ ದಹಲ್ ಪ್ರಚಂಡ

Posted By : Nagaraja AB
Source : The New Indian Express

ಕಠ್ಮಂಡು: ಸಂಸತ್ತು ವಿಸರ್ಜಿಸುವ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವಂತೆ ಭಾರತ ಮತ್ತು ಚೀನಾ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ತಮ್ಮ ಪಕ್ಷ ಮನವಿ ಮಾಡಿದೆ ಎಂದು ಒಲಿ ವಿರೋಧಿ ಬಣದ ಮುಖಂಡ ಪುಷ್ಪ ಕಮಲ್ ದಹಲ್ ಪ್ರಚಂಡ ಮಂಗಳವಾರ ಹೇಳಿದ್ದಾರೆ.

ಪ್ರಚಂಡ ಜೊತೆಗಿನ ಅಧಿಕಾರದ ಗುದ್ದಾಟದ ನಡುವೆ ಅಶ್ಚರ್ಯಕರ ನಡೆಯೊಂದರಲ್ಲಿ ಒಲಿ  ಪ್ರತಿನಿಧಿಗಳ ಸದನವನ್ನು ವಿಸರ್ಜಿಸಿದ ನಂತರ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ. 275 ಸದಸ್ಯರ ಸದನವನ್ನು ವಿಸರ್ಜಿಸುವ ಒಲಿ ಅವರ ಕ್ರಮ ಆಡಳಿತರೂಢ ನ್ಯಾಷನಲ್ ಕಮ್ಯೂನಿಸ್ಟ್ ಪಕ್ಷದ ಕೆಲ ಮುಖಂಡರ ಪ್ರತಿಭಟನೆಗೆ ಕಾರಣವಾಯಿತು.

ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಕ್ರೂಢಿಕರಿಸಲು ಹೌಸ್ ಆಫ್ ರೆಪ್ರೆಸೆಂಟೆಟಿವ್ ನ್ನು ಪುನರ್ ಸ್ಥಾಪಿಸಬೇಕಾಗಿದೆ. ಶಾಂತಿಯುತವಾಗಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ ಎಂದು ಆಯ್ದ ಅಂತಾರಾಷ್ಟ್ರೀಯ ಮಾಧ್ಯಮಗಳೊಂದಿಗೆ ಪ್ರಚಂಡ ಸಂವಾದ ನಡೆಸಿದ್ದಾರೆ.

ನಾಳೆ ಕಠ್ಮಂಡುವಿನಲ್ಲಿ ಆಯೋಜಿಸಲಾಗಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತನಾಡಿರುವ ಪ್ರಚಂಡ,  ಹೌಸ್ ಆಫ್  ರೆಪ್ರೆಸೆಂಟೆಟಿವ್ ನ್ನು ವಿಸರ್ಜಿಸುವ ಪ್ರಧಾನಿ ಒಲಿ ಶರ್ಮಾ ಅವರ ಅಸಂವಿಧಾನಿಕ ಮತ್ತು ಪ್ರಜಾಸತಾತ್ಮಕ ವಿರೋಧಿ ನಡೆಗೆ ಸುಪ್ರೀಂಕೋರ್ಟ್ ಅನುಮೋದನೆ ನೀಡುವುದಿಲ್ಲ ಎಂಬ ನಂಬಿಕೆಯಿದೆ ಎಂದಿದ್ದಾರೆ. ಒಂದು ವೇಳೆ ಹೌಸ್ ಆಫ್ ರೆಪ್ರೆಸೆಂಟೆಟಿವ್ ನ್ನು ಪುನರ್ ಸ್ಥಾಪಿಸದಿದ್ದಲ್ಲಿ ದೇಶ ಗಂಭೀರ ರಾಜಕೀಯ ಬಿಕ್ಕಟ್ಟಿನಲ್ಲಿ ಮುಳುಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಒಲಿ ಶರ್ಮಾ ಅವರ ನಡೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಲಿದ್ದು, ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ  ಭಾರತ, ಚೀನಾ, ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕಾ ಸೇರಿದಂತೆ ಅಂತಾರಾಷ್ಟ್ರೀಯ ದೇಶಗಳಿಂದ ನೆರವನ್ನು ಬಯಸುವುದಾಗಿ ಪ್ರಚಂಡ ಹೇಳಿದರು. ಸಂಸತ್ತನ್ನು ವಿಸರ್ಜಿಸಿ, ಹೊಸದಾಗಿ ಚುನಾವಣೆಗೆ ಕರೆ ನೀಡಿರುವ ಒಲಿ ಅವರ ನಿರ್ಧಾರ ಆಂತರಿಕ ವಿಚಾರವಾಗಿದೆ ಎಂದು ಭಾರತ ಪ್ರತಿಕ್ರಿಯಿಸಿದೆ. 

Stay up to date on all the latest ಅಂತಾರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp