
ಸೇತುವೆ ಕುಸಿತ
ಕಠ್ಮಂಡು: ಭೂತಾನ್ ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತದಲ್ಲಿ ಮೂವರು ಭಾರತೀಯ ಕಾರ್ಮಿಕರು ದುರ್ಮರಣ ಹೊಂದಿದ್ದು ಇನ್ನು ಆರು ಮಂದಿ ನಾಪತ್ತೆಯಾಗಿದ್ದಾರೆ.
ವಾಂಗ್ಚು ಸೇತುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಭೂತನ್ ರಾಜಧಾನಿ ತಿಮ್ಫುವಿನ ನೈಋತ್ಯ ಭಾಗದಿಂದ ಸುಮಾರು 60 ಕಿ.ಮೀ ದೂರದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆ ಸಂಪೂರ್ಣ ನಿರ್ಮಾಣವಾಗಿತ್ತು. ಅಂತಿಮ ಹಂತದ ಕೆಲಸ ಮಾಡುವ ಸಲುವಾಗಿ 9 ಮಂದಿ ಕಾರ್ಮಿಕರು ಸೇತುವೆ ಮೇಲೆ ನಿಂತಿದ್ದಾಗ ಸೇತುವೆ ಕುಸಿದುಬಿದ್ದಿದೆ.
ಭೂತಾನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ಹಾ ಜಿಲ್ಲೆಯನ್ನು ಪಾರೊದೊಂದಿಗೆ ಸಂಪರ್ಕಿಸಲು ಈ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು.
ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರಿಗೆ ಭೂತಾನ್ ಪ್ರಧಾನಿ ಲೋಟೋ ತ್ಸೆರಿಂಗ್ ಸಂತಾಪ ಸೂಚಿಸಿದ್ದಾರೆ.