
ಮಾರಿಯೋ ದ್ರಾಘಿ
ರೋಮ್: ಅರ್ಥಶಾಸ್ತ್ರಜ್ಞ ಮಾರಿಯೋ ದ್ರಾಘಿ ಇಟಲಿಯ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಸಂಸತ್ತಿನ ಅತಿದೊಡ್ಡ ಗುಂಪಿನ ಹಾಗೂ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ವಾರ ಸರ್ಕಾರವು ವಿಶ್ವಾಸ ಮತದ ಅಗ್ನಿ ಪರೀಕ್ಷೆ ಎದುಸರಿಲಿದೆ.
ಇಟಲಿ ಇನ್ನೂ ಸಾಂಕ್ರಾಮಿಕ ರೋಗವನ್ನು ಜೊತೆಗೆ ಅದರಿಂದ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೇಶದಲ್ಲಿ ಕೊರೋನಾ ಸೋಂಕಿಗೆ ಈವರೆಗೆ 93,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.