ಪಾಕಿಸ್ತಾನದಲ್ಲೇ ಇರುತ್ತೇನೆ, ವಿದೇಶಕ್ಕೆ ಹೋಗುವುದಿಲ್ಲ: ಪಿಎಂಎಲ್ ನಾಯಕಿ ಮರ್ಯಮ್ ನವಾಜ್
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪುತ್ರಿ ಮರ್ಯಮ್ ನವಾಜ್ ತಾವು ತಮ್ಮ ತಂದೆಯೊಂದಿಗೆ ಇರುವುದಕ್ಕೆ ಲಂಡನ್ ಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
Published: 15th February 2021 11:21 PM | Last Updated: 15th February 2021 11:21 PM | A+A A-

ಪಿಎಂಎಲ್ ನಾಯಕಿ ಮರ್ಯಮ್ ನವಾಜ್
ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪುತ್ರಿ ಮರ್ಯಮ್ ನವಾಜ್ ತಾವು ತಮ್ಮ ತಂದೆಯೊಂದಿಗೆ ಇರುವುದಕ್ಕೆ ಲಂಡನ್ ಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಸರ್ಕಾರ ಲಂಡನ್ ಗೆ ಹೋಗುವಂತೆ ಅವಕಾಶ ನೀಡಿದರೂ ತಾವು ಪಾಕಿಸ್ತಾನ ಬಿಟ್ಟು ಹೋಗುವುದಿಲ್ಲ ಎಂದು ಮರ್ಯಮ್ ನವಾಜ್ ಹೇಳಿದ್ದಾರೆ. ಸರ್ಕಾರದ ಭಾಗವಾಗಿರುವವರು ಯಾರಾದರೂ ಲಂಡನ್ ಗೆ ಹೋಗುವಂತೆ ಅವಕಾಶ ನೀಡಿದರೂ ನಾನು ಹೋಗುವುದಿಲ್ಲ ಎಂದು ಹೇಳಿದ್ದಾರೆ.
"ಮರ್ಯಮ್ ಅವರನ್ನು ವಿದೇಶಕ್ಕೆ ಹೋಗುವುದಕ್ಕೆ ಬಿಟ್ಟರೆ, ಸರ್ಕಾರದ ವಿರುದ್ಧದ ಚಳುವಳಿ ಕ್ಷೀಣಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ ಆದರೆ ಏನೇ ಆಗಲಿ ನಾನು ನನ್ನ ದೇಶವನ್ನು ಬಿಟ್ಟು ಹೋಗುವುದಿಲ್ಲ ವಿದೇಶಕ್ಕೆ ಹೋಗುವುದಕ್ಕೆ ನಿರ್ಬಂಧ ವಿಧಿಸಿರುವ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದುಹಾಕುವುದಕ್ಕೆ ನಾನು ಕೇಳುವುದಿಲ್ಲ ಎಂದು ಮರ್ಯಮ್ ಸ್ಪಷ್ಟಪಡಿಸಿದ್ದಾರೆ.
ಸಣ್ಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದ್ದು, ಅದು ಪಾಕಿಸ್ತಾನದಲ್ಲಿ ಸಾಧ್ಯಾವಗುವುದಿಲ್ಲದ ಕಾರಣ ನಾನು ವಿದೇಶಕ್ಕೆ ಹೋಗಬೇಕಿದೆ. ಆದರೂ ನಾನು ಪಾಕಿಸ್ತಾನವನ್ನು ತೊರೆಯುವುದಿಲ್ಲ, ಇಲ್ಲೇ ಜೀವಿಸಿ, ಇಲ್ಲೇ ಮಡಿಯುವೆ ಎಂದು ಮರ್ಯಮ್ ಹೇಳಿದ್ದಾರೆ.