ಶ್ರೀಲಂಕಾ ಸಂಸತ್ತಿನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣ ರದ್ದು: ವರದಿಗಳು

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಮುಂಬರುವ ಕೊಲಂಬೊ ಭೇಟಿ ವೇಳೆಯಲ್ಲಿ, ಸಂಸತ್ತಿನಲ್ಲಿ ಅವರ ಭಾಷಣ ಕಾರ್ಯಕ್ರಮವನ್ನು ಶ್ರೀಲಂಕಾ ರದ್ದುಪಡಿಸಿದೆ ಎಂದು ಮಾಧ್ಯಮಗಳು ತಿಳಿಸಿವೆ. 

Published: 18th February 2021 02:50 PM  |   Last Updated: 18th February 2021 06:35 PM   |  A+A-


Imrankhan1

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

Posted By : Nagaraja AB
Source : PTI

ಕೊಲಂಬೊ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಮುಂಬರುವ ಕೊಲಂಬೊ ಭೇಟಿ ವೇಳೆಯಲ್ಲಿ, ಸಂಸತ್ತಿನಲ್ಲಿ ಅವರ ಭಾಷಣ ಕಾರ್ಯಕ್ರಮವನ್ನು ಶ್ರೀಲಂಕಾ ರದ್ದುಪಡಿಸಿದೆ ಎಂದು ಮಾಧ್ಯಮಗಳು ತಿಳಿಸಿವೆ. 

ನಿಗದಿತ ವೇಳಾಪಟ್ಟಿಯಂತೆ ಇಮ್ರಾನ್ ಖಾನ್ ಶ್ರೀಲಂಕಾಕಕ್ಕೆ  ಭೇಟಿ ನೀಡಲಿದ್ದಾರೆ ಎಂದು  ಸಂಸತ್ತಿನ ಅಧಿಕಾರಿ ನರೇಂದ್ರ ಫರ್ನೆಂಡೊ  ಸಂಸತ್ತಿಗೆ ತಿಳಿಸಿರುವುದಾಗಿ ಕೊಲಂಬೊ ಗೆಜೆಟ್ ವೆಬ್ ಸೈಟ್ ವರದಿ ಮಾಡಿದೆ. 

ಆದಾಗ್ಯೂ, ಇಮ್ರಾನ್ ಖಾನ್ ಅವರ ಉದ್ದೇಶಿಸಿತ ಸಂಸತ್ ಕಟ್ಟಡ ಭೇಟಿ ಇರುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಸಂಸತ್ತಿಗೆ ತಿಳಿಸಿದೆ. ಇಮ್ರಾನ್ ಖಾನ್ ಇದೇ 22 ರಂದು ಎರಡು ದಿನಗಳ ಕಾಲ ಶ್ರೀಲಂಕಾಕ್ಕೆ  ಅಧಿಕೃತ ಭೇಟಿ ನೀಡಲಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಶ್ರೀಲಂಕಾಕ್ಕೆ ಭೇಟಿ ನೀಡಲಿರುವ ಮೊದಲ ವಿದೇಶಿ ರಾಷ್ಟ್ರದ ಮುಖ್ಯಸ್ಥ ಇಮ್ರಾನ್ ಖಾನ್ ಆಗಿದ್ದು, ರಾಷ್ಟ್ರಾಧ್ಯಕ್ಷ ಜಿ. ರಾಜಪಕ್ಷ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಷ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ದಿನೇಶ್ ಗುಣವರ್ದೆನಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನ ಮನವಿ ಮೇರೆಗೆ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಭಾಷಣ ಮಾಡಲಿದ್ದಾರೆ ಎನ್ನಲಾಗುತಿತ್ತು. ಆದರೆ, ಅದು ತದನಂತರ ರದ್ದಾಗಿದೆ. ಇದಕ್ಕೆ ಶ್ರೀಲಂಕಾ ಮಾಧ್ಯಮಗಳು ವಿವಿಧ ಕಾರಣ ನೀಡಿರುವುದಾಗಿ ಪಾಕಿಸ್ತಾನದ ಡಾನ್ ಪತ್ರಿಕೆ ಗುರುವಾರ ವರದಿ ಮಾಡಿದೆ.

ಫೆಬ್ರವರಿ 24 ರಂದು ಇಮ್ರಾನ್ ಭಾಷಣ ಮಾಡಬೇಕಿತ್ತು. ಆದರೆ,  ಇಮ್ರಾನ್ ಖಾನ್ ಭಾಷಣ ವೇಳೆ ಕಾಶ್ಮೀರ ವಿಚಾರ ಹಾಗೂ ಶ್ರೀಲಂಕಾರದಲ್ಲಿನ ಮುಸ್ಲಿಂರ ಹಕ್ಕುಗಳ ಬಗ್ಗೆ ಮಾತನಾಡುವ ಸಾಧ್ಯತೆ ಹೆಚ್ಚಿದ್ದರಿಂದ  ಅವರ ಭಾಷಣವನ್ನು ರದ್ದುಪಡಿಸಲಾಗಿದೆ. ಶ್ರೀಲಂಕಾ ಸರ್ಕಾರದ ನಿರ್ಧಾರವನ್ನು ಇಮ್ರಾನ್ ಖಾನ್ ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ಶ್ರೀಲಂಕಾ ಸಂಸತನ್ನುದ್ದೇಶಿಸಿ ಮಾತನಾಡಿದ್ದರು.


Stay up to date on all the latest ಅಂತಾರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp