ಶಾಂತಿಪಾಲನಾ ಪಡೆಗೆ 2 ಲಕ್ಷ ಡೋಸ್ ಕೋವಿಡ್ ಲಸಿಕೆ: ಭಾರತಕ್ಕೆ ಧನ್ಯವಾದ ಹೇಳಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ 2 ಲಕ್ಷ ಡೋಸ್‌ ಕೋವಿಡ್‌-19ರ ಲಸಿಕೆಗಳ ಕೊಡುಗೆ ಘೋಷಿಸಿದ ಭಾರತಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಕೃತಜ್ಞತೆ ಸಲ್ಲಿಸಿದ್ದಾರೆ.

Published: 18th February 2021 03:44 PM  |   Last Updated: 18th February 2021 03:44 PM   |  A+A-


These vials will be transported to various Regional Vaccine Centres from Tuesday evening onwards.

ಲಸಿಕೆಗಳನ್ನು ತುಂಬಿಟ್ಟ ಬಾಕ್ಸ್ ಗಳು

Posted By : Srinivasamurthy VN
Source : PTI

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ 2 ಲಕ್ಷ ಡೋಸ್‌ ಕೋವಿಡ್‌-19ರ ಲಸಿಕೆಗಳ ಕೊಡುಗೆ ಘೋಷಿಸಿದ ಭಾರತಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತಂತೆ ವಿಶ್ವಸಂಸ್ಥೆ ವಕ್ತಾರರು ಮಾಹಿತಿ ನೀಡಿದ್ದು, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ 2 ಲಕ್ಷ ಡೋಸ್‌ ಕೋವಿಡ್‌-19ರ ಲಸಿಕೆಗಳ ಕೊಡುಗೆ ಘೋಷಿಸಿದ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಅಂತೆಯೇ ಲಸಿಕೆಯ ಡೋಸ್‌ಗಳನ್ನು ಸಮರ್ಪಕವಾಗಿ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ವಿಶ್ವಸಂಸ್ಥೆಯ ಎಂದು ಪ್ರಧಾನ ಕಾರ್ಯದರ್ಶಿ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ 121 ದೇಶಗಳ 94,484 ಸಿಬ್ಬಂದಿ ಇದ್ದು, ಇವರು ವಿಶ್ವದ 12 ಕಡೆಗಳಲ್ಲಿ ಶಾಂತಿಪಾಲನಾ ಕಾರ್ಯದಲ್ಲಿ ತೊಡಗಿದ್ದಾರೆ. ಭಾರತ ಘೋಷಿಸಿರುವ ಲಸಿಕೆಯಿಂದಾಗಿ ಈ ಸಿಬ್ಬಂದಿಗೆ ಎರಡು ಬಾರಿ ಲಸಿಕೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ್ದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು, ಕಠಿಣ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ 2 ಲಕ್ಷ ಕೋವಿಡ್‌ ಲಸಿಕೆಯನ್ನು ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದ್ದರು. ಭಾರತದ ಈ ಕ್ರಮವನ್ನು ವಿವಿಧ ದೇಶಗಳ ರಾಯಭಾರಿಗಳು ಸ್ವಾಗತಿಸಿದ್ದರು. 

ವಿಶ್ವಸಂಸ್ಥೆಯ ಕೆನಡಾದ ಖಾಯಂ ಪ್ರತಿನಿಧಿ ಬಾಬ್ ರೇ ಈ ಕುರಿತು ಟ್ವೀಟ್ ಮಾಡಿ, ಇದು ವಿಶ್ವಸಂಸ್ಥೆಯ 95,000 ಶಾಂತಿ ಪಾಲಕರಿಗೆ ಲಸಿಕೆ ನೀಡುವ ಬಗ್ಗೆ ಭಾರತ ಸರ್ಕಾರವು ನೀಡಿದ ಮಹತ್ವದ ಮತ್ತು ಉದಾರ ಘೋಷಣೆಯಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ವಿಶ್ವಸಂಸ್ಥೆಯ ರುವಾಂಡಾದ ಖಾಯಂ ಪ್ರತಿನಿಧಿ  ವ್ಯಾಲೆಂಟೈನ್ ರುಗ್ವಾಬಿಜಾ ಅವರು, 'ವಿಶ್ವಸಂಸ್ಥೆ ಶಾಂತಿ ಪಾಲಕರಿಗೆ ಲಸಿಕೆಗಳ ಉಡುಗೊರೆಯಾಗಿ ನೀಡಿದ  ಭಾರತದ ನಡೆ ಶ್ಲಾಘನೀಯ. ಲಸಿಕೆ ಹಾಕುವುದು ಜಾಗತಿಕ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಅತಿದೊಡ್ಡ ಭದ್ರತಾ ಅಂಶವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 


Stay up to date on all the latest ಅಂತಾರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp