ಮಂಗಳನ ಅಂಗಳದಲ್ಲಿ ರೋವರ್ ಯಶಸ್ವಿಯಾಗಿ ಇಳಿಸಿದ್ದು ಭಾರತೀಯ ಮೂಲದ ವಿಜ್ಞಾನಿ ಸ್ವಾತಿ ಮೋಹನ್

ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಪರ್ಸೀವರೆನ್ಸ್ ರೋವರ್‌ ನೌಕೆ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ಐತಿಹಾಸಿಕ ಕ್ಷಣಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದ್ದು, ಮಾರ್ಸ್ 2020 ಕಾರ್ಯಾಚರಣೆಯ ಮಾರ್ಗದರ್ಶನ....

Published: 19th February 2021 06:30 PM  |   Last Updated: 19th February 2021 06:30 PM   |  A+A-


swati

ಸ್ವಾತಿ ಮೋಹನ್

Posted By : Lingaraj Badiger
Source : PTI

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಪರ್ಸೀವರೆನ್ಸ್ ರೋವರ್‌ ನೌಕೆ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ಐತಿಹಾಸಿಕ ಕ್ಷಣಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದ್ದು, ಮಾರ್ಸ್ 2020 ಕಾರ್ಯಾಚರಣೆಯ ಮಾರ್ಗದರ್ಶನ, ಸಂಚರಣೆ ಮತ್ತು ನಿಯಂತ್ರಣ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಸ್ವಾತಿ ಮೋಹನ್ ಎಂಬುದು ಹೆಮ್ಮೆಯ ವಿಚಾರ.

ರೋವರ್ ಯಶಸ್ವಿಯಾಗಿ ಲ್ಯಾಂಡ್ ಆಗಿರುವುದನ್ನು ಖಚಿತಪಡಿಸಿದ ಸ್ವಾತಿ ಮೋಹನ್ ಅವರು, ಪರ್ಸೀವರೆನ್ಸ್ ಮಂಗಳ ಗ್ರಹದ ಮೇಲ್ಮೈಯಲ್ಲಿ ಸುರಕ್ಷಿತವಾಗಿರುತ್ತದೆ ಮತ್ತು ಹಿಂದಿನ ಜೀವನದ ಕುರುಹುಗಳನ್ನು ಹುಡುಕಲು ಪ್ರಾರಂಭಿಸಲು ಸಿದ್ಧವಾಗಿದೆ" ಎಂದು ಹೇಳಿದ್ದಾರೆ.

ಭಾರತದಲ್ಲಿ ಹುಟ್ಟಿ, ಉತ್ತರ ವರ್ಜೀನಿಯಾ ಮತ್ತು ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ ಬೆಳೆದ ಸ್ವಾತಿ ಅವರು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಏರೋನಾಟಿಕ್ಸ್ / ಗಗನಯಾತ್ರಿಗಳಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಿಂದ ಎಂ.ಎಸ್ ಮತ್ತು ಪಿಎಚ್ ಡಿ ಪಡೆದಿದ್ದಾರೆ.

ಸ್ವಾತಿ ಅವರು ನಾಸಾದೊಂದಿಗಿನ ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಕ್ಯಾಸಿನಿ ಮಿಷನ್ ಟು ಸ್ಯಾಟರ್ನ್ ಮತ್ತು ಗ್ರೇಲ್ (ಒಂದು ಜೋಡಿ ರಚನೆಯು ಬಾಹ್ಯಾಕಾಶ ನೌಕೆಯನ್ನು ಚಂದ್ರನಿಗೆ ಹಾರಿಸಿದೆ) ನಂತಹ ಅನೇಕ ಕಾರ್ಯಗಳಲ್ಲಿ ಕೆಲಸ ಮಾಡಿದ್ದಾರೆ.

ಸದ್ಯ ಅನ್ವೇಷಣಾ ಕಾರ್ಯಕ್ರಮದ ಭಾಗವಾಗಿ ಮಂಗಳಗ್ರಹಕ್ಕೆ ಕಳುಹಿಸಿರುವ ಪರ್ಸೀವರೆನ್ಸ್ ರೋವರ್‌ ರೆಡ್ ಪ್ಲಾನೆಟ್‌ನಲ್ಲಿ ಇಳಿಯುವ ಮೂಲಕ ನಾಸಾದ ಯೋಜನೆ ಒಂದು ಹಂತದ ಯಶಸ್ಸು ಕಂಡಿದೆ. ಮುಂದಿನ ದಿನಗಳಲ್ಲಿ ರೋವರ್‌ ಮಂಗಳ ಗ್ರಹದ ಮೇಲ್ಮೈನಲ್ಲಿರುವ ಮಾಹಿತಿಗಳನ್ನು ಭೂಮಿಗೆ ಕಳುಹಿಸಲಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp