ವುಹಾನ್ ನಲ್ಲಿ ಕೊರೋನಾ ಸೋಂಕು ಪ್ರಸರಣಕ್ಕೆ ಮೊಲಗಳು ಕಾರಣ: ವಿಶ್ವ ಆರೋಗ್ಯ ಸಂಸ್ಥೆ

ಮಾರಕ ಕೊರೋನಾ ಸೋಂಕಿಗೆ ಮೂಲವಾದ ವುಹಾನ್ ನಲ್ಲಿ ಸೋಂಕು ಪ್ರಸರಣಕ್ಕೆ ಮೊಲಗಳು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Published: 19th February 2021 03:07 PM  |   Last Updated: 19th February 2021 04:03 PM   |  A+A-


Rabbits in Wuhan

ವುಹಾನ್ ವೆಟ್ ಮಾರ್ಕೆಟ್

Posted By : Srinivasamurthy VN
Source : PTI

ಬೀಜಿಂಗ್: ಮಾರಕ ಕೊರೋನಾ ಸೋಂಕಿಗೆ ಮೂಲವಾದ ವುಹಾನ್ ನಲ್ಲಿ ಸೋಂಕು ಪ್ರಸರಣಕ್ಕೆ ಮೊಲಗಳು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಡೀ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಮಾರಕ ಕೊರೋನಾ ವೈರಸ್ ನ ಮೂಲ ತಿಳಿಯಲು ಮೊದಲು ಸೋಂಕು ಪತ್ತೆಯಾದ ಚೀನಾದ ವುಹಾನ್ ಗೆ ತೆರಳಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡ ನೀಡಿರುವ ಮಾಹಿತಿ ಮೇರೆಗೆ ಸೋಂಕು ಪ್ರಸರಣಕ್ಕೆ ಮೊಲಗಳು ಕಾರಣ ಎಂದು ಹೇಳಲಾಗಿದೆ. ಈ ಕುರಿತಂತೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದು, ತಜ್ಞರು ನೀಡಿರುವ ವರದಿಯಲ್ಲಿ ವುಹಾನ್ ನಲ್ಲಿ ಮಾರಕ ಕೊರೋನಾ ಸೋಂಕು ಪ್ರಸರಣವಾಗಲು ವುಹಾನ್ ನ ವೆಟ್ ಮಾರ್ಕೆಟ್ ನಲ್ಲಿದ್ದ ಫೆರೆಟ್ ಬ್ಯಾಡ್ಜರ್ ಗಳು ಮತ್ತು ಮೊಲಗಳು ಕಾರಣ ಎಂದು ಅಭಿಪ್ರಾಯಪಡಲಾಗಿದೆ. 

ಈ ಎರಡು ಪ್ರಾಣಿಗಳ ಮೂಲಕ ವೈರಸ್ ಮಾನವರ ದೇಹ ಹೊಕ್ಕಿದೆ ಎಂದು ಹೇಳಲಾಗಿದ್ದು, ಅದಾಗ್ಯೂ ವೆಟ್ ಮಾರ್ಕೆಟ್ ಗೆ ಪೂರೈಕೆಯಾಗುತ್ತಿದ್ದ ಇತರೆ ಪ್ರಾಣಿಗಳ ಕುರಿತೂ ಅಧ್ಯಯನ ಮುಂದುವರೆದಿದ್ದು, ಮಾರುಕಟ್ಟೆಗೆ ಸರಬರಾಜಾಗುತ್ತಿದ್ದ ಸತ್ತ ಮತ್ತು ಜೀವಂತ ಪ್ರಾಣಿಗಳ ಹಿನ್ನಲೆ ಮತ್ತು ಸಂಪೂರ್ಣ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. 

ಇನ್ನು ಯೂರೋಪ್ ನಲ್ಲಿ ಕೋವಿಡ್ ಸೋಂಕು ಪ್ರಸರಣಕ್ಕೆ ಮಿಂಕ್ ಫಾರ್ಮ್ ಗಳು ಕಾರಣ ಎಂದು ಈ ಹಿಂದೆ ಚೀನಾ ಹೇಳಿತ್ತು. ಈ ಕುರಿತಂತೆ ಅಧ್ಯಯನ ನಡೆಸಿದ್ದ ಚೀನಾ ವಿಜ್ಞಾನಿಗಳು, ಮಾನವರು ಮತ್ತು ಮಿಂಕ್ ಗಳ ನಡುವೆ ಸೋಂಕು ಪ್ರಸರಣವಾದ ಕುರಿತು ಮಾಹಿತಿ ನೀಡಿದ್ದರು. ಹೀಗಾಗಿ ಮಿಂಕ್ ಫಾರ್ಮ್ ಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದೂ ಚೀನಾ ಆಗ್ರಹಿಸಿತ್ತು. 

ಕಳೆದ ವಾರ ಕೋವಿಡ್ ಸೋಂಕಿನ ಮೂಲ ಶೋಧಕ್ಕಾಗಿ ಚೀನಾಗೆ ಆಗಮಿಸಿದ್ದ ವಿಶ್ವ ಆರೋಗ್ಯ ಸಂಸ್ಥೆಯ ತಂಡ ತನ್ನ ನಾಲ್ಕು ವಾರಗಳ ಅಧ್ಯಯನವನ್ನು ಪೂರ್ಣಗೊಳಿಸಿತ್ತು. ಬಳಿಕ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ್ದ ತಂಡ ವುಹಾನ್ ವೈರಸ್ ಲ್ಯಾಬ್ ನಿಂದ್ ವೈರಸ್ ಸೋರಿಕೆಯಾಗಿಲ್ಲ. ಬದಲಿಗೆ ವುಹಾನ್ ನ ವೆಟ್ ಮಾರ್ಕೆಟ್ ನಲ್ಲಿ ಸೋಂಕು ಪ್ರಸರಣವಾದ ಕುರಿತು ಶಂಕೆ ಇದೆ. ಮಾರ್ಕೆಟ್ ಗೆ ತರಲಾಗಿದ್ದ ಬಾವಲಿಗಳಿಂದ ಸೋಂಕು ಪ್ರಸರಣವಾಗಿದೆ. ಬಾವಲಿಗಳಲ್ಲಿದ್ದ ವೈರಸ್ ಮತ್ತೊಂದು ಮಾಧ್ಯಮದ ಮೂಲಕ ಮಾನವರಿಗೆ ಹಬ್ಬಿದೆ ಎಂದು ಹೇಳಿತ್ತು. 
 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp