ಭಾಷಣದ ವೇಳೆ ಮಾಸ್ಕ್ ಮರೆತ ಜರ್ಮನ್ ಚಾನ್ಸಿಲರ್; ವೈರಲ್ ವಿಡಿಯೋಗೆ 10 ಲಕ್ಷ ವ್ಯೂಸ್!

ಭಾಷಣದ ವೇಳೆ ಮಾಸ್ಕ್ ಮರೆತು ಬಂದು ಕುರ್ಚಿಯಲ್ಲಿ ಕುಳಿತ ಜರ್ಮನ್ ಚಾನ್ಸೆಲರ್ ಎಂಜೆಲಾ ಮಾರ್ಕೆಲ್ ತಬ್ಬಿಬಾದ ಘಟನೆ ನಡೆದಿದೆ.

Published: 22nd February 2021 12:39 PM  |   Last Updated: 22nd February 2021 12:40 PM   |  A+A-


Angela Merkel panics

ಮಾಸ್ಕ್ ಮರೆತ ಜರ್ಮನ್ ಚಾನ್ಸಿಲರ್

Posted By : Srinivasamurthy VN
Source : Reuters

ಬರ್ಲಿನ್: ಭಾಷಣದ ವೇಳೆ ಮಾಸ್ಕ್ ಮರೆತು ಬಂದು ಕುರ್ಚಿಯಲ್ಲಿ ಕುಳಿತ ಜರ್ಮನ್ ಚಾನ್ಸೆಲರ್ ಎಂಜೆಲಾ ಮಾರ್ಕೆಲ್ ತಬ್ಬಿಬಾದ ಘಟನೆ ನಡೆದಿದೆ.

ಬರ್ಲಿನ್ ನಲ್ಲಿ ನಡೆದ ಅಧಿವೇಶನದಲ್ಲಿ ಮಾಸ್ಕ್ ಮರೆತಿದ್ದಕ್ಕೆ ಚಾನ್ಸೆಲರ್ ಎಂಜೆಲಾ ಮಾರ್ಕೆಲ್ ಒಂದು ಕ್ಷಣ ತಬ್ಬಿಬ್ಬಾದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. 

ಶುಕ್ರವಾರ ಎಂಜೆಲಾ ಮಾರ್ಕೆಲ್ ಸಂಸತ್ ಉದ್ದೇಶಿಸಿ ಮಾತನಾಡಿದರು. ಭಾಷಣದ ವೇಳೆ ತಮ್ಮ ಮಾಸ್ಕ್ ಅನ್ನು ತೆಗೆದು ಭಾಷಣದ ಟೇಬಲ್ ಮೇಲಿಟ್ಟದ್ದ ಮಾರ್ಕೆಲ್ ಭಾಷಣದ ಬಳಿಕ ಅದನ್ನು ಮರೆತು ತಮ್ಮ ಸ್ಥಾನಕ್ಕೆ ಬಂದು ಆಸೀನರಾದರು. ಬಳಿಕ ಕೆಲವೇ ಕ್ಷಣಗಳಲ್ಲಿ ತಾವು ಮಾಸ್ಕ್ ಮರೆತ ವಿಚಾರ ತಿಳಿದು ತಬ್ಬಿಬ್ಬಾದರು. ಕೂಡಲೇ ಎದ್ದು ಭಾಷಣದ ಪೋಡಿಯಂ ಬಳಿ ದೌಡಾಯಿಸಿದರು. ಈ ವೇಳೆ ಭಾಷಣದ ಡೆಸ್ಕ್ ಅನ್ನು ಸ್ಯಾನಿಟೈಸ್ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಅದನ್ನು ತೆಗೆದುಕೊಟ್ಟರು.

ಮಾಸ್ಕ್ ಸ್ವೀಕರಿಸಿ ಧರಿಸಿದ ಎಂಜೆಲಾ ಮಾರ್ಕೆಲ್ ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳೀಯ ನ್ಯೂಸ್ ಏಜೆನ್ಸಿ ಈ ವೀಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ. ಅಂತೆಯೇ ಈ ವೀಡಿಯೋ 10 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ ಎನ್ನಲಾಗಿದೆ.

ಜರ್ಮನಿಯಲ್ಲಿ ಕೊರೊನಾ ಸೋಂಕಿನ 2ನೇ ಅಲೆಯ ನಡುವೆಯೇ ಸಂಸತ್ ಅಧಿವೇಶನ ಆರಂಭವಾಗಿದ್ದು, ಎಲ್ಲ ಸದಸ್ಯ ಮತ್ತು ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.  ಎಂಜೆಲಾ ಮಾರ್ಕೆಲ್ ಅವರ ಈ ವಿಡಿಯೋ ಮಾಸ್ಕ್ ಧಾರಣೆ ಎಷ್ಟು ಮುಖ್ಯ ಎಂಬುದನ್ನು ತೋರಿಸುವಂತಿದೆ.
 

Stay up to date on all the latest ಅಂತಾರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp