14 ವರ್ಷದ ಬಾಲಕಿಯನ್ನು ಮದುವೆಯಾದ 50 ವರ್ಷದ ಪಾಕ್ ಸಂಸದ: ತನಿಖೆಗೆ ಆದೇಶ 

ಬಲೋಚಿಸ್ತಾನ್ ನಿಂದ ಚುನಾಯಿತರಾಗಿದ್ದ ನ್ಯಾಷನಲ್ ಆಸೆಂಬ್ಲಿಯ ಸದಸ್ಯ ಮತ್ತು ಉಲೇಮಾ-ಇ- ಇಸ್ಲಾಂ ಮುಖಂಡ 
ಮೌಲಾನಾ ಸಲಾಹುದ್ದೀನ್ ಅಯುಬಿ 14 ವರ್ಷದ ಬಾಲಕಿಯೊಂದಿಗೆ ಮದುವೆಯಾಗಿರುವ ಬಗ್ಗೆ ಪಾಕಿಸ್ತಾನದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Published: 23rd February 2021 02:38 PM  |   Last Updated: 23rd February 2021 02:43 PM   |  A+A-


Casual_Image1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಚಿತ್ರಾಲ್: ಬಲೋಚಿಸ್ತಾನ್ ನಿಂದ ಚುನಾಯಿತರಾಗಿದ್ದ ನ್ಯಾಷನಲ್ ಆಸೆಂಬ್ಲಿಯ ಸದಸ್ಯ ಮತ್ತು ಉಲೇಮಾ-ಇ- ಇಸ್ಲಾಂ ಮುಖಂಡ ಮೌಲಾನಾ ಸಲಾಹುದ್ದೀನ್ ಅಯುಬಿ 14 ವರ್ಷದ ಬಾಲಕಿಯೊಂದಿಗೆ ಮದುವೆಯಾಗಿರುವ ಬಗ್ಗೆ ಪಾಕಿಸ್ತಾನದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಹಿಳೆಯರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯೊಂದು ದೂರು ದಾಖಲಿಸಿದ ಬಳಿಕ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆ ಬಾಲಕಿ ಜುಗೂರ್  ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ಶಾಲಾ ದಾಖಲಾತಿ ಪ್ರಕಾರ ಜನ್ಮ ದಿನ ಅಕ್ಟೋಬರ್ 28, 2006 ಆಗಿದೆ. ಆಕೆಗೆ  ಮದುವೆಯ ವಯಸ್ಸಾಗಿಲ್ಲ ಎಂಬುದನ್ನು ತೋರಿಸುತ್ತಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.ಪಾಕ್ ಮಾಧ್ಯಮಗಳ ಪ್ರಕಾರ ನ್ಯಾಷನಲ್ ಆಸೆಂಬ್ಲಿ ಸದಸ್ಯ ಮೌಲಾನಾ ಸಲಾಹುದ್ದೀನ್ ಅಯುಬಿ ಅವರ ವಯಸ್ಸು 50ಕ್ಕೂ ಹೆಚ್ಚಾಗಿದೆ. 

ಸ್ವಯಂ ಸೇವಾ ಸಂಸ್ಥೆಯೊಂದು ಕೆಲವು ದಿನಗಳ ಹಿಂದೆ ದಾಖಲಿಸಿದ್ದ ದೂರಿನ ಅನ್ವಯ ಪೊಲೀಸರು ಬಾಲಕಿ ಮನೆಗೆ ತೆರಳಿ, ವಿಚಾರಣೆ ನಡೆಸಿದ್ದಾರೆ. ಆದರೆ, ಆಕೆಯ ತಂದೆ ಮದುವೆ ಆಗಿಲ್ಲ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ವೊಂದನ್ನು ನೀಡಲಾಗಿದೆ ಎಂದು ಚಿತ್ರಾಲ್ ಪೊಲೀಸ್ ಠಾಣೆ ಎಸ್ ಹೆಚ್ ಒ ಇನ್ಸ್ ಪೆಕ್ಟರ್ ಸಜ್ಜಾದ್ ಅಹ್ಮದ್ ಹೇಳಿದ್ದಾರೆ.

ಪಾಕಿಸ್ತಾನದ ಕಾನೂನು ಪ್ರಕಾರ 16 ವರ್ಷಕ್ಕಿಂತ ಕೆಳಗಿನ ಬಾಲಕಿಯರ ವಿವಾಹಕ್ಕೆ ಅವಕಾಶ ಇಲ್ಲ. ಆದಾಗ್ಯೂ, ಬಲವಂತದಿಂದ ಮದುವೆ ಮಾಡುವ ಪೋಷಕರಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಈ ಮಧ್ಯೆ ಆಕೆಗೆ 16 ವರ್ಷ ವಯಸ್ಸಾಗುವವರೆಗೂ ಮದುವೆ ಮಾಡುವುದಿಲ್ಲ ಎಂದು ಬಾಲಕಿಯ ತಂದೆ ಸಂಬಂಧಿತ ಪ್ರಾಧಿಕಾರಿಗಳಿಗೆ ತಿಳಿಸಿರುವುದಾಗಿ ಚಿತ್ರಾಲ್ ಡಿಪಿಒ ಹೇಳಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp