24 ವರ್ಷದ ಮನೆಕೆಲಸದಾಕೆಗೆ ಚಿತ್ರಹಿಂಸೆ ನೀಡಿ ಕೊಂದ ಆರೋಪ; ಸಿಂಗಾಪುರದಲ್ಲಿ ಭಾರತ ಮೂಲದ ಮಹಿಳೆ ಬಂಧನ

24 ವರ್ಷದ ಮನೆಕೆಲಸದಾಕೆಗೆ ಚಿತ್ರಹಿಂಸೆ ನೀಡಿ ಕೊಂದ ಆರೋಪಕ್ಕೆ ಸಂಬಂಧಿಸಿದಂತೆ ಸಿಂಗಾಪುರದಲ್ಲಿ ಭಾರತ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ.

Published: 24th February 2021 12:49 PM  |   Last Updated: 24th February 2021 12:49 PM   |  A+A-


death

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : PTI

ಸಿಂಗಾಪುರ್: 24 ವರ್ಷದ ಮನೆಕೆಲಸದಾಕೆಗೆ ಚಿತ್ರಹಿಂಸೆ ನೀಡಿ ಕೊಂದ ಆರೋಪಕ್ಕೆ ಸಂಬಂಧಿಸಿದಂತೆ ಸಿಂಗಾಪುರದಲ್ಲಿ ಭಾರತ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ.
 
ಸುಮಾರು 40 ವರ್ಷದ ಗಾಯತ್ರಿ ಮುರುಗಯನ್ ಎಂಬ ಮಹಿಳೆ ಮಯನ್ಮಾರ್ ಮೂಲದ 24 ವರ್ಷದ ಪಿಯಾಂಗ್ ನಾ ಡಾನ್ ಎಂಬ ಮನೆಕೆಲಸದಾಕೆಗೆ ಚಿತ್ರ ಹಿಂಸೆ ನೀಡಿ ಕೊಂದ ಆರೋಪ ಹೊತ್ತಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಮೂಲಗಳ ಪ್ರಕಾರ ಗಾಯತ್ರಿ ಈಗ್ಗೆ ಕಳೆದ ಆರು ತಿಂಗಳನಿಂದ ಮನೆಕೆಲಸಕ್ಕೆ ಬರುತ್ತಿದ್ದ ಮಯನ್ಮಾರ್ ಮೂಲದ 24 ವರ್ಷದ ಪಿಯಾಂಗ್ ನಾ ಡಾನ್ ಗೆ ಚಿತ್ರ ಹಿಂಸೆ ನೀಡುತ್ತಿದ್ದರು. ಆಕೆಗೆ ಊಟ ನೀಡದೇ, ಮನಬಂದಂತೆ ಥಳಿಸುತ್ತಿದ್ದರು. ಅಲ್ಲದೆ ಮುಖಕ್ಕೆ ಗುದ್ದುತ್ತಿದ್ದರು ಎನ್ನಲಾಗಿದೆ. ಇನ್ನು ಆಕೆಯ ಚಿತ್ರಹಿಂಸೆಯಿಂದಲೇ  ಪಿಯಾಂಗ್ ನಾ ಡಾನ್ ಸಾವನ್ನಪ್ಪಿದ್ದು, ಸಾವಿಗೀಡಾದ ವೇಳೆ ಆಕೆ ಕೇವಲ 24 ಕೆಜಿ ತೂಕವಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅದರ ವರದಿಯಲ್ಲಿ  ಪಿಯಾಂಗ್ ನಾ ಡಾನ್ ದೇಹದ ಒಳಭಾಗದಲ್ಲಿ 31 ಗಾಯಗಳು ಮತ್ತು ದೇಹದ ಹೊರಗೆ 47 ಗಾಯಗಳಾಗಿವೆ ಎಂದು ಹೇಳಲಾಗಿದೆ.

ಇನ್ನು ಆರೋಪಿ ಮಹಿಳೆ ಗಾಯತ್ರಿ ಅವರ ವಿರುದ್ಧ ಒಟ್ಟು 87 ಆರೋಪಗಳಿದ್ದು, ಈ ಪೈಕಿ 28 ಆರೋಪಗಳನ್ನು ಗಾಯಿತ್ರಿ ಒಪ್ಪಿಕೊಂಡಿದ್ದಾರೆ. ಅಂತೆಯೇ ಕೋರ್ಟ್ ಈಕೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ ಎಂದು ತಿಳಿದುಬಂದಿದೆ.

ಗಾಯತ್ರಿ ಮನೆಕೆಲಸಕ್ಕೆ ಒಬ್ಬ ಮಹಿಳೆಯನ್ನು ತೆಗೆದುಕೊಂಡಿದ್ದಳು. ಪಿಯಾಂಗ್ ಅಚ್ಚುಕಟ್ಟಾಗಿ ಮನೆಕೆಲಸವನ್ನು ಮಾಡಿಕೊಂಡುಹೋಗುತ್ತಿದ್ದಳು. ಆದರೆ 5 ತಿಂಗಳ ನಂತರ ಗಾಯತ್ರಿ ಆಕೆಗೆ ಹಿಂಸೆ ನೀಡಲು ಪ್ರಾರಂಭಿಸಿದಳು. ಊಟಕೊಡದೆ ಇರುವುದು, ಗುದ್ದುವುದು, ಕಾಲಲ್ಲಿ ಹಾಕಿ ತುಳಿಯುವುದು, ಕಸದ ಬುಟ್ಟಿಯಲ್ಲಿದ್ದ ಆಹಾರವನ್ನು ಹೆಕ್ಕಿ ತಿನ್ನುವಂತೆ ಮಾಡುತ್ತಿದ್ದಳು. ಈಕೆ ನೀಡುತ್ತಿದ್ದ ಹಿಂಸೆಯನ್ನು ಸಹಿಸಿಕೊಂಡು ಪಿಯಂಗ್ ಕೆಲಸ ಮಾಡಿಕೊಂಡು ಹೋಗುತ್ತಿದ್ದಳು.

ಆದರೆ ದಿನ ಕಳೆದಂತೆ ಈಕೆ ನೀಡುವ ಹಿಂಸೆ ಹೆಚ್ಚಾಗ ತೊಡಗಿತ್ತು. ಗಾಯತ್ರಿ ನೀಡುತ್ತಿದ್ದ ಕಿರುಕುಳಕ್ಕೆ ಪಿಯಾಂಗ್ ದೇಹದ ತೂಕ 24 ಕೆಜಿ ಬಂದು ತಲುಪಿತ್ತು. ಒಂದು ದಿನ ಗಾಯತ್ರಿ ಮೆದುಳಿಗೆ ಹಾಗೂ ಕುತ್ತಿಗೆಗೆ ತೀವ್ರವಾಗಿ ಗಾಯ ಮಾಡಿ ಊಟ ನೀಡದೆ ಕಿಟಕಿಗೆ ಕಟ್ಟಿ ಹಾಕಿದ್ದಾಳೆ. ಈ ನೋವನ್ನು ತಾಳಲಾರದೆ ಪಿಯಾಂಗ್ ನೆರಳಿ ಪ್ರಾಣ ಬಿಟ್ಟಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.


Stay up to date on all the latest ಅಂತಾರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp