ಬ್ಯಾಂಕ್ ವಂಚನೆ: ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ಕೋರ್ಟ್ ಆದೇಶ 

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ನ ನ್ಯಾಯಾಲಯ ಆದೇಶ ನೀಡಿದೆ. 

Published: 25th February 2021 04:46 PM  |   Last Updated: 25th February 2021 04:47 PM   |  A+A-


Nirav Modi

ನೀರವ್ ಮೋದಿ

Posted By : Srinivas Rao BV
Source : Online Desk

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ನ ನ್ಯಾಯಾಲಯ ಆದೇಶ ನೀಡಿದೆ. 

"ನೀರವ್ ಮೋದಿ ಎದುರಿಸುತ್ತಿರುವ ಆರೋಪಗಳು ಮನವರಿಕೆಯಾಗುವಂತಹ ಸಾಕ್ಷ್ಯಗಳಿವೆ, ಅವರನ್ನು ಭಾರತಕ್ಕೆ ಕಳಿಸಿದರೆ ಅವರಿಗೆ ನ್ಯಾಯದಾನದ ನಿರಾಕರಣೆಯಾಗುವುದಿಲ್ಲ" ಎಂದು ಬ್ರಿಟನ್ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. 

ನೀರವ್ ಮೋದಿ ಮುಂಬೈನ ಆರ್ಥರ್ ಜೈಲಿನ 'ಬ್ಯಾರಕ್ 12'ನಲ್ಲಿರುವುದಕ್ಕೆ ಸಮರ್ಥರಾಗಿದ್ದಾರೆ, ಅವರು ಅಲ್ಲಿಯೇ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯಬಹುದು" ಎಂದು ಬ್ರಿಟನ್ ಕೋರ್ಟ್ ನ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಜಿ ಆದೇಶ ಪ್ರಕಟಿಸಿದ್ದಾರೆ.

ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದೆದುರು,  ಸೌತ್ ವೆಸ್ಟ್ ಲಂಡಾನ್ ನಲ್ಲಿರುವ ವಾಂಡ್ಸ್ ವರ್ತ್ ಜೈಲಿನಿಂದ ನೀರವ್ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಕೋರ್ಟ್ ಆದೇಶವನ್ನು ಬ್ರಿಟನ್ ನ ಗೃಹ ಕಾರ್ಯದರ್ಶಿಗೆ ಕಳಿಸಲಾಗುತ್ತದೆ. ನಂತರ ನೀರವ್ ಮೋದಿಗೆ ಹೈಕೋರ್ಟ್ ಮೊರೆ ಹೋಗುವ ಅವಕಾಶವೂ ಇರಲಿದೆ.


Stay up to date on all the latest ಅಂತಾರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp