'ಇತರ ದೇಶಗಳು ನಿಮ್ಮ ಮಾದರಿಯನ್ನು ಅನುಸರಿಸುತ್ತವೆಂದು ಭಾವಿಸುತ್ತೇವೆ': ಭಾರತ, ಮೋದಿಯನ್ನು ಶ್ಲಾಘಿಸಿದ ಘೆಬ್ರೆಯೆಸಸ್

ಲಸಿಕೆ ಸಮಾನತೆಯನ್ನು ಬೆಂಬಲಿಸುವ ಮತ್ತು ಕೋವಿಡ್-19 ಲಸಿಕೆಗಳನ್ನು ವಿಶ್ವದ 60ಕ್ಕೂ ಹೆಚ್ಚು ದೇಶಗಳೊಂದಿಗೆ ಹಂಚಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯನ್ನು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶ್ಲಾಘಿಸಿದ್ದಾರೆ.

Published: 26th February 2021 08:56 PM  |   Last Updated: 26th February 2021 08:56 PM   |  A+A-


Ghebreyesus-Modi

ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್-ಮೋದಿ

Posted By : Vishwanath S
Source : PTI

ಜೆನೆವಾ: ಲಸಿಕೆ ಸಮಾನತೆಯನ್ನು ಬೆಂಬಲಿಸುವ ಮತ್ತು ಕೋವಿಡ್-19 ಲಸಿಕೆಗಳನ್ನು ವಿಶ್ವದ 60ಕ್ಕೂ ಹೆಚ್ಚು ದೇಶಗಳೊಂದಿಗೆ ಹಂಚಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯನ್ನು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶ್ಲಾಘಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಘೆಬ್ರೆಯೆಸಸ್ ಟ್ವೀಟ್‌ನಲ್ಲಿ, 60ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಭಾರತ ಲಸಿಕೆಗಳನ್ನು ಪೂರೈಸುವಲ್ಲಿ ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ.

"#ವ್ಯಾಕ್ಸಿನ್ ಎಕ್ವಿಟಿಯನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಎಂದು ಬರೆದುಕೊಂಡಿದ್ದಾರೆ.

ನಿಮ್ಮ ಬದ್ಧತೆ #COVAX ಮತ್ತು #COVID19 ಲಸಿಕೆ ಹಂಚಿಕೆ 60ಕ್ಕೂ ಹೆಚ್ಚು ದೇಶಗಳು ತಮ್ಮ#ಆರೋಗ್ಯ ಕಾರ್ಯಕರ್ತರು ಮತ್ತು ಇತರ ಆದ್ಯತೆಯ ಗುಂಪುಗಳಿಗೆ ಲಸಿಕೆ ನೀಡಲು ಪ್ರಾರಂಭಿಸಲು ಸಹಾಯ ಮಾಡುತ್ತಿದೆ. ಇತರ ದೇಶಗಳು ನಿಮ್ಮ ಮಾದರಿಯನ್ನು ಅನುಸರಿಸುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಗುರುವಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಯುನಿಸೆಫ್ ಸಹಯೋಗದೊಂದಿಗೆ ಭಾರತವು ಬುಧವಾರ ಆರು ಲಕ್ಷ ಕೋವಾಕ್ಸ್ ಲಸಿಕೆಯನ್ನು ಘಾನಾಗೆ ರವಾನಿಸಿದೆ. ಈ ಉಪಕ್ರಮದಲ್ಲಿ 92 ದೇಶಗಳನ್ನು ಒಳಗೊಳ್ಳುವ ಗುರಿ ಹೊಂದಿದೆ.

ಫೆಬ್ರವರಿ 12ರಂದು ವಿದೇಶಾಂಗ ಸಚಿವಾಲಯ(ಎಂಇಎ) ಭಾರತವು ವಿವಿಧ ದೇಶಗಳಿಗೆ 229 ಲಕ್ಷ ಡೋಸ್ ಕೊರೋನಾವೈರಸ್ ಲಸಿಕೆಗಳನ್ನು ನೀಡಿದೆ. ಅದರಲ್ಲಿ 64 ಲಕ್ಷ ಡೋಸೇಜ್ ಅನುದಾನ ಸಹಾಯವಾಗಿ ಮತ್ತು 165 ಲಕ್ಷ ವಾಣಿಜ್ಯ ಆಧಾರದ ಮೇಲೆ ಸರಬರಾಜು ಮಾಡಲಾಗಿದೆ ಎಂದು ಹೇಳಿತ್ತು.

ಕೋವಿಡ್ ಲಸಿಕೆಯನ್ನು ಬಾಂಗ್ಲಾದೇಶ(20 ಲಕ್ಷ), ಮ್ಯಾನ್ಮಾರ್(17 ಲಕ್ಷ), ನೇಪಾಳ(10 ಲಕ್ಷ), ಭೂತಾನ್(1.5 ಲಕ್ಷ), ಮಾಲ್ಡೀವ್ಸ್(1 ಲಕ್ಷ), ಮಾರಿಷಸ್(1 ಲಕ್ಷ), ಸೀಶೆಲ್ಸ್(50,000), ಶ್ರೀಲಂಕಾ(5 ಲಕ್ಷ), ಬಹ್ರೇನ್(1 ಲಕ್ಷ), ಒಮಾನ್(1 ಲಕ್ಷ), ಅಫ್ಘಾನಿಸ್ತಾನ(5 ಲಕ್ಷ), ಬಾರ್ಬಡೋಸ್(1 ಲಕ್ಷ) ಮತ್ತು ಡೊಮಿನಿಕಾ(70,000)ಗೆ ಡೋಸ್ ಗಳನ್ನು ಉಡುಗೊರೆಯಾಗಿ ಸರಬರಾಜು ಮಾಡಲಾಯಿತು. 

ಇನ್ನು ವಾಣಿಜ್ಯ ಆಧಾರದ ಮೇಲೆ ಲಸಿಕೆಗಳನ್ನು ಪಡೆದ ದೇಶಗಳು ಬ್ರೆಜಿಲ್(20 ಲಕ್ಷ), ಮೊರಾಕೊ(60 ಲಕ್ಷ), ಬಾಂಗ್ಲಾದೇಶ(50 ಲಕ್ಷ), ಮ್ಯಾನ್ಮಾರ್(20 ಲಕ್ಷ), ಈಜಿಪ್ಟ್(50,000), ಅಲ್ಜೀರಿಯಾ(50,000), ದಕ್ಷಿಣ ಆಫ್ರಿಕಾ(10 ಲಕ್ಷ) , ಕುವೈತ್(2 ಲಕ್ಷ) ಮತ್ತು ಯುಎಇ(2 ಲಕ್ಷ).

Stay up to date on all the latest ಅಂತಾರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp