ಸಮಯೋಚಿತ ಅಭಿಪ್ರಾಯ ಹಂಚಿಕೆಗೆ ಭಾರತ- ಚೀನಾ ನಡುವೆ ಹಾಟ್‌ಲೈನ್‌ ಸಂಪರ್ಕ ಸ್ಥಾಪನೆ

ಚೀನಾ ಮತ್ತು ಭಾರತದ ನಡುವೆ ಸಮಯೋಚಿತ ಅಭಿಪ್ರಾಯ ವಿನಿಮಯಕ್ಕಾಗಿ ಹಾಟ್ ಲೈನ್ ಸಂಪರ್ಕ ಬೆಳೆಸಲು ಉಭಯ ದೇಶಗಳ ವಿದೇಶಾಂಗ ಸಚಿವರು ಸಮ್ಮತಿ ಸೂಚಿಸಿದ್ದಾರೆ ಎಂದು ಚೀನಾದ ಸರ್ಕಾರಿ ಕ್ಸಿನುಹಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

Published: 26th February 2021 04:08 PM  |   Last Updated: 26th February 2021 04:47 PM   |  A+A-


S Jaishankar-Wang Yi

ಎಸ್ ಜೈಶಂಕರ್-ವಾಂಗ್ ಯಿ

Posted By : Vishwanath S
Source : UNI

ನವದೆಹಲಿ: ಚೀನಾ ಮತ್ತು ಭಾರತದ ನಡುವೆ ಸಮಯೋಚಿತ ಅಭಿಪ್ರಾಯ ವಿನಿಮಯಕ್ಕಾಗಿ ಹಾಟ್ ಲೈನ್ ಸಂಪರ್ಕ ಬೆಳೆಸಲು ಉಭಯ ದೇಶಗಳ ವಿದೇಶಾಂಗ ಸಚಿವರು ಸಮ್ಮತಿ ಸೂಚಿಸಿದ್ದಾರೆ ಎಂದು ಚೀನಾದ ಸರ್ಕಾರಿ ಕ್ಸಿನುಹಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರುಗಳಾದ ವಾಂಗ್ ಯಿ ಮತ್ತು ಎಸ್. ಜೈಶಂಕರ್ ನಡುವೆ ಗುರುವಾರ ನಡೆದ ದೂರವಾಣಿ ಸಂಭಾಷಣೆಯ ನಂತರ, ನೆರೆಹೊರೆಯ ಗಡಿ ಸಮಸ್ಯೆಯನ್ನು ಸೂಕ್ತವಾಗಿ ನಿಭಾಯಿಸಬೇಕಿದೆ. ಇಲ್ಲದಿದ್ದಲ್ಲಿ,  ದ್ವಿಪಕ್ಷೀಯ ಸಂಬಂಧಗಳು ಹದಗೆಡುತ್ತದೆ ಎಂಬುದನ್ನು ಉಭಯ ನಾಯಕರು ಒಪ್ಪಿಕೊಂಡರು ಎನ್ನಲಾಗಿದೆ. 

ಗಡಿ ವಿವಾದಗಳು ವಸ್ತುನಿಷ್ಠ ವಾಸ್ತವವಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಅಭಿವೃದ್ಧಿಯ ನಿಟ್ಟಿನಲ್ಲಿಎರಡು ಪ್ರಮುಖ ಉದಯೋನ್ಮುಖ ಆರ್ಥಿಕತೆಗಳು ಒಟ್ಟಾಗಿ ಕೆಲಸ ಮಾಡುತ್ತವೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಸುಧಾರಿಸಲು ಮತ್ತು ಪ್ರಾಯೋಗಿಕ ಸಹಕಾರವನ್ನು ಉತ್ತೇಜಿಸಲು ಉಭಯ ರಾಷ್ಟ್ರಗಳು ಮುಂದಾಗಲು ನಿಶ್ಚಯಿಸಿವೆ. 

ಚೀನಾ-ಭಾರತ ಗಡಿ ಪ್ರದೇಶಗಳಲ್ಲಿನ ಕಳೆದ ವರ್ಷದ ಪರಿಸ್ಥಿತಿಯ ಹಕ್ಕುಗಳು ಮತ್ತು ತಪ್ಪುಗಳು ಬಹಳ ಸ್ಪಷ್ಟವಾಗಿವೆ ಮತ್ತು ಹಿಂದಿನಿಂದ ಆಳವಾದ ಪಾಠಗಳನ್ನು ಕಲಿಯಬೇಕು. ಎರಡೂ ಕಡೆಯವರು ಪರಸ್ಪರ ನಂಬಿಕೆ ಮತ್ತು ಸಹಕಾರದ ಸರಿಯಾದ ಮಾರ್ಗವನ್ನು ಅನುಸರಿಸಬೇಕು ಮತ್ತು ಅನುಮಾನ ಮತ್ತು ಅಪನಂಬಿಕೆಯೊಂದಿಗೆ ದಾರಿ ತಪ್ಪಬಾರದು ಎಂಬ ವಿಷಯದ ಕುರಿತು ಚರ್ಚಿಸಲಾಯಿತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. 

ಲಡಾಖ್ ನ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಲ್ಲಿ ನಿಯೋಜಿಸಿದ್ದ ಉಭಯ ರಾಷ್ಟ್ರದ ಸೇನೆಯನ್ನು ಹಿಂಪಡೆದ ನಂತರ ಮೊದಲ ಬಾರಿಗೆ ನಂತರ ವಿದೇಶಾಂಗ ಸಚಿವರ ಮಾತುಕತೆ ನಡೆದಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp