ಭಯೋತ್ಪಾದಕರ ತವರು ಪಾಕಿಸ್ತಾನ ಎಫ್‍ಎಟಿಎಫ್ 'ಗ್ರೇ ಲಿಸ್ಟ್' ನಲ್ಲಿ ಮುಂದುವರಿಕೆ

ಮನಿ ಲಾಂಡರಿಂಗ್ ಮತ್ತು ಭಯೋತ್ಪಾನೆಗೆ ಹಣಕಾಸು ನೆರವನ್ನು ನಿಡುವುದನ್ನು ಮುಂದುವರಿಸಿರುವ ಪಾಕಿಸ್ತಾನವನ್ನು 'ಗ್ರೇ ಲಿಸ್ಟ್' ನಲ್ಲೇ ಮುಂದುವರಿಸಲು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ಹಣಕಾಸು ವಿರುದ್ಧದ ಜಾಗತಿಕ ಸಂಸ್ಥೆ ಎಫ್‌ಎಟಿಎಫ್ ತೀರ್ಮಾನಿಸಿದೆ.

Published: 26th February 2021 12:20 AM  |   Last Updated: 26th February 2021 01:17 PM   |  A+A-


ಇಮ್ರಾನ್ ಖಾನ್

Posted By : Raghavendra Adiga
Source : PTI

ನವದೆಹಲಿ: ಮನಿ ಲಾಂಡರಿಂಗ್ ಮತ್ತು ಭಯೋತ್ಪಾನೆಗೆ ಹಣಕಾಸು ನೆರವನ್ನು ನಿಡುವುದನ್ನು ಮುಂದುವರಿಸಿರುವ ಪಾಕಿಸ್ತಾನವನ್ನು 'ಗ್ರೇ ಲಿಸ್ಟ್' ನಲ್ಲೇ ಮುಂದುವರಿಸಲು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ಹಣಕಾಸು ವಿರುದ್ಧದ ಜಾಗತಿಕ ಸಂಸ್ಥೆ ಎಫ್‌ಎಟಿಎಫ್ ತೀರ್ಮಾನಿಸಿದೆ.

ಎಫ್‌ಎಟಿಎಫ್ ಸಭೆಯ ನಂತರ ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಅಧ್ಯಕ್ಷ ಮಾರ್ಕಸ್ ಪ್ಲಿಯರ್, ಪಾಕಿಸ್ತಾನಕ್ಕೆ ನೀಡಲಾದ ಗಡುವು ಈಗಾಗಲೇ ಮುಕ್ತಾಯಗೊಂಡಿದೆ ಮತ್ತು ಆ ರಾಷ್ಟ್ರಕ್ಕೆ ತಮ್ಮ ಸಮಸ್ಯೆಗಳನ್ನು "ಆದಷ್ಟು ಬೇಗ" ತಿಳಿಸುವಂತೆ ಕೇಳಲಾಗಿದೆ ಎಂದರು. "ಇಲ್ಲಿಯವರೆಗೆ, ಪಾಕಿಸ್ತಾನವು ಎಲ್ಲಾ ಕ್ರಿಯಾ ಯೋಜನೆಗಳಲ್ಲಿ ಪ್ರಗತಿ ಸಾಧಿಸಿದೆ ಮತ್ತು ಈಗ 27 ರ ಪೈಕಿ 24ಕಾರ್ಯಗಳನ್ನು ಪರಿಹರಿಸಿದೆ ಎಂದು  ಪ್ಲಿಯರ್ ಹೇಳಿದರು.

ಭಯೋತ್ಪಾದಕ ಹಣಕಾಸು ಪರಿಶೀಲನೆಯಲ್ಲಿ ಪಾಕಿಸ್ತಾನದ ಕಡೆಯಿಂದ ಗಂಭೀರ ಕೊರತೆ ಕಂಡುಬಂದಿದ್ದು ಯುಎನ್ ಗೊತ್ತುಪಡಿಸಿದ ಭಯೋತ್ಪಾದಕರು ಮತ್ತು ಅವರ ಸಹಚರರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆ ರಾಷ್ಟ್ರ ಇನ್ನೂ ತನ್ನ ಬದ್ದತೆ ಪ್ರದರ್ಶಿಸಿಲ್ಲಎಂದು ಅವರು ಹೇಳಿದರು. ಪಾಕಿಸ್ತಾನ ನ್ಯಾಯಾಲಯಗಳು ಭಯೋತ್ಪಾದನೆಯಲ್ಲಿ ಭಾಗಿಯಾಗಿರುವವರಿಗೆ ಪರಿಣಾಮಕಾರಿ, ನಿರ್ಣಾಯಕ ಮತ್ತು ಪ್ರಮಾಣಾನುಗುಣವಾದ ಶಿಕ್ಷೆಯನ್ನು ನೀಡಬೇಕು ಎಂದು ಅವರು ಹೇಳಿದರು, ಆದರೆ ಹಾಗಾಗುತ್ತಿಲ್ಲ ಎಂದ ಅವರು 2002ರಲ್ಲಿ ಹತ್ಯೆಯಾದ ಅಮೆರಿಕಾದ ಪತ್ರಕರ್ತ ಡೇನಿಯಲ್ ಪರ್ಲ್ ಪ್ರಕರಣದಲ್ಲಿ ಮುಖ ಆರೋಪಿ ಒಮರ್ ಸಯೀದ್ ಶೇಖ್ ನನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ ಎಂದು ಉಲ್ಲೇಖಿಸಿದ್ದಾರೆ.

ಪಾಕಿಸ್ತಾನವು ಮೂರು ಕೆಲಸ ಪೂರ್ಣ ಮಾಡಬೇಕು.ಅದು ಪೂರ್ಣಗೊಂಡ ನಂತರ, ಜೂನ್‌ನಲ್ಲಿ ನಡೆಯಲಿರುವ ಮುಂದಿನ ಸಭೆಯಲ್ಲಿ ಎಫ್‌ಎಟಿಎಫ್ ತನ್ನ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸುತ್ತದೆ ಮತ್ತು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. 

Stay up to date on all the latest ಅಂತಾರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp