ಪಾಕಿಸ್ತಾನದಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ರೆಹಮಾನ್ ಲಖ್ವಿ ಬಂಧನ
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಎ-ತೈಬಾ(ಎಲ್ಇಟಿ) ಕಾರ್ಯಾಚರಣೆ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿ ಅವರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 02nd January 2021 04:42 PM | Last Updated: 02nd January 2021 05:48 PM | A+A A-

ರೆಹಮಾನ್ ಲಖ್ವಿ
ಲಾಹೋರ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಎ-ತೈಬಾ(ಎಲ್ಇಟಿ) ಕಾರ್ಯಾಚರಣೆ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿ ಅವರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ರೆಹಮಾನ್ ಲಖ್ವಿಯನ್ನು ಬಂಧಿಸಲಾಗಿದೆ. ಮುಂಬೈ ದಾಳಿ ಪ್ರಕರಣದಲ್ಲಿ 2015ರಿಂದ ಜಾಮೀನಿನಲ್ಲಿದ್ದ ಲಖ್ವಿಯನ್ನು ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ(ಸಿಟಿಡಿ) ಬಂಧಿಸಿದೆ.
2008ರ ಮುಂಬೈ ದಾಳಿ ನಂತರ ಲಖ್ವಿಯನ್ನು ಜಾಗತಿಕ ಉಗ್ರ ಎಂದು ಗುರುತಿಸಲಾಗಿತ್ತು. ಇನ್ನು ಲಖ್ವಿಗೆ ಮಾಸಿಕ 1.5 ಲಕ್ಷ ರೂಪಾಯಿಯನ್ನು ಮೂಲಭೂತ ವೆಚ್ಚಗಳಿಗಾಗಿ ನೀಡಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿ ಪಾಕ್ ಸರ್ಕಾರಕ್ಕೆ ಅನುಮೋದನೆ ನೀಡಿದ್ದು ಇದಾದ ಕೆಲ ದಿನಗಳಲ್ಲೇ ಲಖ್ವಿ ಬಂಧಿಸಲಾಗಿದೆ.
ಲಖ್ವಿ ಉಗ್ರರಿಗಾಗಿ ಔಷಧಾಲಯ ನಡೆಸುತ್ತಿದ್ದ, ಈ ಬಗ್ಗೆ ಪಂಜಾಬ್ ಕೌಂಟರ್ ಟೆರರ್ ಡಿಪಾರ್ಟ್ ಮೆಂಟ್ ಲಾಹೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.