ಅಧ್ಯಕ್ಷೀಯ ಚುನಾವಣೆ ಫಲಿತಾಂಶ ವಿರೋಧ: ಜನವರಿ 6ರಂದು ಟ್ರಂಪ್ ಬೆಂಬಲಿಗರಿಂದ ವಾಷಿಂಗ್ಟನ್ ನಲ್ಲಿ ರ್ಯಾಲಿ
2020ನೇ ಸಾಲಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ವಿರೋಧಿಸಿ ಇದೇ 6ರಂದು ತಮ್ಮ ಬೆಂಬಲಿಗರು ರಾಜಧಾನಿ ವಾಷಿಂಗ್ಟನ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Published: 02nd January 2021 01:08 PM | Last Updated: 02nd January 2021 01:59 PM | A+A A-

ಟ್ರಂಪ್ ಬೆಂಬಲಿಗರ ರ್ಯಾಲಿ
ವಾಷಿಂಗ್ಟನ್: 2020ನೇ ಸಾಲಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ವಿರೋಧಿಸಿ ಇದೇ 6ರಂದು ತಮ್ಮ ಬೆಂಬಲಿಗರು ರಾಜಧಾನಿ ವಾಷಿಂಗ್ಟನ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಜನವರಿ 6ರಂದು ಬೆಳಗ್ಗೆ 11 ಗಂಟೆಗೆ ತಮ್ಮ ಬೆಂಬಲಿಗರಿಂದ ವಾಷಿಂಗ್ಟನ್ ಡಿ.ಸಿಯಲ್ಲಿ ಅತಿದೊಡ್ಡ ರ್ಯಾಲಿ, ಸ್ಥಳ ಯಾವುದೆಂದು ತಿಳಿಸಲಿದ್ದೇವೆ, ಕದಿಯುವುದನ್ನು ನಿಲ್ಲಿಸಿ ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.
— Donald J. Trump (@realDonaldTrump) January 2, 2021
ಮತ್ತೊಂದು ಟ್ವೀಟ್ ನಲ್ಲಿ, ಚುನಾವಣೆ ಫಲಿತಾಂಶದಲ್ಲಿ ನಡೆದ ಬಹುದೊಡ್ಡ ಅಕ್ರಮವನ್ನು ಅಂದು ಹೊರಹಾಕಲಿದ್ದೇವೆ, ನಾವು ನಿಜವಾಗಿಯೂ ಗೆದ್ದಿದ್ದೇವೆ, ಬಹುದೊಡ್ಡ ಗೆಲುವು ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ರಿಪಬ್ಲಿಕನ್ ಮತಗಳನ್ನು ರದ್ದುಗೊಳಿಸಲು ಡೆಮೋಕ್ರಾಟ್ಗಳು ಯೋಜಿಸುತ್ತಿದ್ದಾರೆ. ಇದನ್ನು ನಿಲ್ಲಿಸುವುದು ಅಮೆರಿಕದ ಜನರಿಗೆ ಬಿಟ್ಟದ್ದು. ಅಧ್ಯಕ್ಷ ಟ್ರಂಪ್ ಜೊತೆಗೆ, ರಾಷ್ಟ್ರದ ಒಳಿತಿಗಾಗಿ ಈ ಚುನಾವಣೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ರ್ಯಾಲಿಯನ್ನು ಆಯೋಜಿಸಿರುವ ಸ್ಪುಟ್ನಿಕ್ ಸಂಘಟನೆ ಟ್ವೀಟ್ ಮಾಡಿದೆ.
ನವೆಂಬರ್ 3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಗೆಲುವು ಸಾಧಿಸಿದ್ದು ಅವರಿಗೆ 306 ಎಲೆಕ್ಟೊರಲ್ ಮತಗಳು, ಡೊನಾಲ್ಡ್ ಟ್ರಂಪ್ ಅವರಿಗೆ 232 ಮತಗಳು ಲಭಿಸಿವೆ. ಜೊ ಬೈಡನ್ ಅವರು ಅಮೆರಿಕ ಅಧ್ಯಕ್ಷರಾಗಿ ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.