
ಸಂಗ್ರಹ ಚಿತ್ರ
ವಾಷಿಂಗ್ಟನ್: ಕೊರೋನ ಸೋಂಕಿಗೆ ಲಸಿಕೆ ಸಿದ್ದವಾಗಿದ್ದರೂ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಈಗ ಎರಡು ಕೋಟಿ ದಾಟಿದೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ಪ್ರಕಾರ, ದೇಶದಲ್ಲಿ ಸೋಂಕು ಪ್ರಕರಣಗಳ ಎರಡು ಕೋಟಿ 30 ಲಕ್ಷ ದಾಟಿದೆ ಎಂದು ಹೇಳಿದೆ.
ಈವರೆಗೆ ಮಾರಿ ಸೋಂಕಿಗೆ ದೇಶದಲ್ಲಿ 3ಲಕ್ಷದ 46 ಸಾವಿರ ಸಾವಿನ ಪ್ರಕರಣ ವರದಿಯಾಗಿದೆ. ಶುಕ್ರವಾರದ ಸಿಎಸ್ಎಸ್ಇ ಹೊಸ ಮಾಹಿತಿ ಪ್ರಕಾರ ಅಮೆರಿಕ ಇನ್ನೂ ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ ದೇಶವಾಗಿದೆ. ರಾಜ್ಯಗಳ ಪೈಕಿ ಕ್ಯಾಲಿಫೋರ್ನಿಯಾದಲ್ಲಿ 2.3 ದಶಲಕ್ಷ ಪ್ರಕರಣ, ಟೆಕ್ಸಾಸ್ (1.77 ಮಿಲಿಯನ್), ಫ್ಲೋರಿಡಾ (1.32 ಮಿಲಿಯನ್), ನ್ಯೂಯಾರ್ಕ್ (979,000) ಮತ್ತು ಇಲಿನಾಯ್ಸ್ (963,000) ಪ್ರಕರಣಗಳು ವರದಿಯಾಗಿವೆ.