ಸೋಲಿನ ಹತಾಶೆ; ಅಧ್ಯಕ್ಷಗಾದಿ ಉಳಿಸಿಕೊಳ್ಳಲು ಎಂತಹ ಹೋರಾಟಕ್ಕೂ ಸಿದ್ದ ಎಂದ ಟ್ರಂಪ್
ಅಮೆರಿಕ ಅಧ್ಯಕ್ಷೀಯ ಚುನಾವಣಾ ಸೋಲಿನ ಹತಾಶೆಯಿಂದ ಹೊರಬರದ ಡೊನಾಲ್ಡ್ ಟ್ರಂಪ್ ಶತಾಯಗತಾಯ ತಾವು ಶ್ವೇತಭವನ ತೊರೆಯುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
Published: 05th January 2021 02:30 PM | Last Updated: 05th January 2021 02:30 PM | A+A A-

ಟ್ರಂಪ್
ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣಾ ಸೋಲಿನ ಹತಾಶೆಯಿಂದ ಹೊರಬರದ ಡೊನಾಲ್ಡ್ ಟ್ರಂಪ್ ಶತಾಯಗತಾಯ ತಾವು ಶ್ವೇತಭವನ ತೊರೆಯುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
'ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಘೋಷಣೆ ಮಾಡಿರುವ ಡೊನಾಲ್ಡ್ ಟ್ರಂಪ್, ಇದಕ್ಕಾಗಿ ನರಕದಲ್ಲೂ ಹೋರಾಟ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಅಂತೆಯೇ ಎಲೆಕ್ಟರಲ್ ಕಾಲೇಜ್ ಮತವನ್ನು ದೃಢೀಕರಿಸಲು ಈ ವಾರ ಜೋ ಬೈಡೆನ್ ಮುಂದಾದಾಗ ಅವರ ಚುನಾವಣಾ ಸೋಲನ್ನು ಬೈಡನ್ ಗೆ ಹಿಮ್ಮೆಟ್ಟಿಸುವಂತೆ ಟ್ರಂಪ್ ರಿಪಬ್ಲಿಕನ್ ಶಾಸಕರಿಗೆ ಮನವಿ ಮಾಡಿದರು.
ಜಾರ್ಜಿಯಾದಲ್ಲಿ ನಡೆದ ರ್ಯಾಲಿಯನ್ನು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ನಮ್ಮಿಂದ ವೈಟ್ ಹೌಸ್ ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಈ ರ್ಯಾಲಿಯನ್ನು ರಿಪಬ್ಲಿಕನ್ ಸೆನೆಟ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದೆ. ತಮ್ಮ ಭಾಷಣದುದ್ದಕ್ಕೂ ಟ್ರಂಪ್ ತಮ್ಮ ಚುನಾವಣಾ ಸೋಲಿನ ಆಕ್ರೋಶವನ್ನು ಹೊರ ಹಾಕಿದರು. ಅಲ್ಲದೆ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಗೊಂದಲಗಳಿಂದ ಕೂಡಿದ್ದು ಅದನ್ನು ಪ್ರಶ್ನಿಸಬೇಕಿದೆ ಎಂದು ಹೇಳಿದರು. ಇದೇ ವೇಳೆ ಪ್ರಧಾನಿ ಆಯ್ಕೆ ಕುರಿತು ಮಾತನಾಡಿದ ಟ್ರಂಪ್, ಮುಂದಿನ ಪ್ರಧಾನಿ ನಮ್ಮವರೇ ಆಗಲಿದ್ದಾರೆ. ಬುಧವಾರ, ಕಾಂಗ್ರೆಸ್ನಲ್ಲಿ ನಮ್ಮ ದಿನವಾಗಲಿದೆ. ನಮ್ಮ ಶ್ರೇಷ್ಠ ಉಪಾಧ್ಯಕ್ಷರು ನಮಗಾಗಿ ಬರುತ್ತಾರೆ ಎಂದು ನಾನು ಭಾವಿಸುತ್ತೇನೆ, ಅವರು ಒಬ್ಬ ಮಹಾನ್ ವ್ಯಕ್ತಿ. ಖಂಡಿತ, ಅವರು ಆಯ್ಕೆಯಾಗದಿದ್ದರೆ, ನಾನು ಅವರನ್ನು ಹೆಚ್ಚು ಇಷ್ಟಪಡುವುದಿಲ್ಲ. ಮೈಕ್ ಒಬ್ಬ ಮಹಾನ್ ವ್ಯಕ್ತಿ ಎಂದು ಟ್ರಂಪ್ ಹೇಳಿದರು.
ಇನ್ನು ಟ್ರಂಪ್ ಹೇಳಿಕೆಗೆ ಅಟ್ಲಾಂಟಾದಲ್ಲಿ ನಡೆದ ರ್ಯಾಲಿಯಲ್ಲಿ ತಿರುಗೇಟು ನೀಡಿರುವ ಬೈಡನ್, ಟ್ರಂಪ್ ಚುನಾವಣೆಯುದ್ದಕ್ಕೂ ನಮ್ಮನ್ನು ತೆಗಳುವ ಕಾರ್ಯದಲ್ಲಿ ಮುಳುಗಿದ್ದರು. ಸರ್ಕಾರದ ಅವಧಿಯಲ್ಲಿ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಹೇಳುವ ಬದಲು ಟ್ರಂಪ್ ತಮ್ಮನ್ನು ತೆಗಳುತ್ತಿದ್ದರು. ಅಮೆರಿಕದಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದ್ದ ವೇಳೆಯಲ್ಲಿಯೂ ಅದನ್ನು ನಿವಾರಿಸುವ ಬದಲಿಗೆ ಟ್ರಂಪ್ ನಮ್ಮನ್ನು ತೆಗಳುವ ಕಾರ್ಯದಲ್ಲಿ ಬಿಸಿಯಾಗಿದ್ದರು. ಆದರೆ ಈಗ ಚುನಾವಣೆ ಮುಕ್ತಾಯವಾಗಿ ಸೋಲು ಅನುಭವಿಸಿದ್ದರೂ ಅದೇ ಕಾರ್ಯವನ್ನು ಮುಂದವರೆಸಿದ್ದಾರೆ. ಟ್ರಂಪ್ ಏಕೆ ಹೀಗೆ ಮಾಡುತ್ತಿದ್ದಾರೆ ಎಂಬುದ ನನಗೆ ತಿಳಿಯುತ್ತಿಲ್ಲ ಎಂದು ಬೈಡನ್ ಹೇಳಿದ್ದಾರೆ.