ಡೊನಾಲ್ಡ್ ಟ್ರಂಪ್ ಅಧಿಕಾರವಧಿ ಮುಗಿಯುವ ಮುನ್ನವೇ ಪದಚ್ಯುತಿ?

ಇಲ್ಲಿನ ಕ್ಯಾಪಿಟಲ್ ಕಟ್ಟಡಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಮುತ್ತಿಗೆ ಹಾಕಿದ ಬೆನ್ನಲ್ಲೇ, ಅಧಿಕಾರವಧಿ ಮುಗಿಯುವ ಮುನ್ನವೇ ಡೊನಾಲ್ಡ್ ಟ್ರಂಪ್ ಅವರನ್ನು ಪದಚ್ಯುತಿಗೊಳಿಸಬೇಕೆಂಬ ಒತ್ತಡ ಡೆಮಾಕ್ರಟಿಕ್ ಪಕ್ಷದ ಕೆಲ ಮುಖಂಡರಿಂದ ಕೇಳಿಬರುತ್ತಿದೆ. 

Published: 07th January 2021 11:38 AM  |   Last Updated: 07th January 2021 01:05 PM   |  A+A-


Donald_Trump1

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Online Desk

ವಾಷಿಂಗ್ಟನ್: ಇಲ್ಲಿನ ಕ್ಯಾಪಿಟಲ್ ಕಟ್ಟಡಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಮುತ್ತಿಗೆ ಹಾಕಿದ ಬೆನ್ನಲ್ಲೇ, ಅಧಿಕಾರವಧಿ ಮುಗಿಯುವ ಮುನ್ನವೇ ಡೊನಾಲ್ಡ್ ಟ್ರಂಪ್ ಅವರನ್ನು ಪದಚ್ಯುತಿಗೊಳಿಸಬೇಕೆಂಬ ಒತ್ತಡ ಡೆಮಾಕ್ರಟಿಕ್ ಪಕ್ಷದ ಕೆಲ ಮುಖಂಡರಿಂದ ಕೇಳಿಬರುತ್ತಿದೆ. ಡೊನಾಲ್ಡ್ ಟ್ರಂಪ್ ಅವರ ಅಧಿಕಾರವಧಿ ಜನವರಿ 30ಕ್ಕೆ ಅಂತ್ಯಗೊಳ್ಳಲಿದೆ.

ಚುನಾವಣೆಯಲ್ಲಿ ಮೋಸದಿಂದ ತಮ್ಮನ್ನು ಸೋಲಿಸಲಾಗಿದೆ ಎಂದು ಪದೇ ಪದೇ ಹೇಳಿಕೆ ನೀಡುವ ಮೂಲಕ ಅಧಿಕಾರವನ್ನು ಶಾಂತಯುತವಾಗಿ ವರ್ಗಾವಣೆ ಮಾಡಲು ಡೊನಾಲ್ಡ್ ಟ್ರಂಪ್ ನಿರಾಕರಿಸಿದ ನಂತರ ಅಮೆರಿಕಾ ಹಿಂಸಾಚಾರದಲ್ಲಿ ನಲುಗಿದ್ದು, ಎರಡು ಮಾರ್ಗಗಳ ಮೂಲಕ ಅಧ್ಯಕ್ಷರನ್ನು ಕಚೇರಿಯಿಂದ ಪದಚ್ಯುತಿಗೊಳಿಸಬಹುದಾಗಿದೆ. 

ದೋಷರೋಪಣೆ ಮತ್ತು  ಅಮೆರಿಕದ ಸಂವಿಧಾನಕ್ಕೆ 25ನೇ ತಿದ್ದುಪಡಿ ಮೂಲಕ ಡೊನಾಲ್ಡ್ ಟ್ರಂಪ್ ಅವರ ಅಧಿಕಾರವಧಿ ಮುಗಿಯುವೇ ಮೊದಲೇ ಪದಚ್ಯುತಿಗೊಳಿಸಬಹುದಾಗಿದೆ.  ಬಿಡೆನ್ ಅಧಿಕಾರ ವಹಿಸಿಕೊಳ್ಳುವವರೆಗೂ ಉಪಾಧ್ಯಕ್ಷ ಮೈಕ್ ಪೆನ್ಸ್  ಆಡಳಿತದ ಜವಾಬ್ದಾರಿ ತೆಗೆದುಕೊಳ್ಳಬಹುದಾಗಿದೆ.

ಕ್ರಿಮಿನಲ್ ಕೇಸ್ ನಲ್ಲಿ ಅಧಿಕಾರ ದುರ್ಬಳಕೆ ಆರೋಪದ ಮೇರೆಗೆ ಹೌಸ್ ಆಫ್ ರೆಪ್ರೆಸೆಂಟೆಟಿವ್ ಅಮೆರಿಕಾದ ಅಧ್ಯಕ್ಷರ ವಿರುದ್ಧ ದೋಷರೋಪ ಪ್ರಸ್ತಾಪ ಮಂಡಿಸಬಹುದಾಗಿದೆ.  435 ಸದಸ್ಯ ಬಲದ ಸದನದಲ್ಲಿ ಸರಳ ಬಹುಮತದೊಂದಿಗೆ ದೋಷರೋಪ ಪ್ರಕ್ರಿಯೆಗೆ ಅನುಮೋದನೆಗೊಂಡ ಬಳಿಕ  ಮೇಲ್ಮನೆ ಸೆನೆಟ್ ನಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ತಪಿತಸ್ಥ ಎಂದು ತೀರ್ಮಾನವಾದಲ್ಲಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸಬಹುದಾಗಿದೆ.

ಈ ಹಿಂದೆ 2019 ಡಿಸೆಂಬರ್ ನಲ್ಲಿ ಕೂಡಾ ಟ್ರಂಪ್ ವಿರುದ್ಧ ದೋಷರೋಪವನ್ನು ಮಂಡಿಸಲಾಗಿತ್ತು.ಆದರೆ, 2020 ಫೆಬ್ರವರಿಯಲ್ಲಿ ರಿಪಬ್ಲಿಕ್ ನೇತೃತ್ವದ ಸೆನೆಟ್ ನಲ್ಲಿ ಟ್ರಂಪ್ ಅವರನ್ನು ನಿರ್ದೋಷಿ ಎಂದು ಘೋಷಿಸಲಾಗಿತ್ತು.

ಉಪಾಧ್ಯಕ್ಷರು ಮತ್ತು ಟ್ರಂಪ್ ಕ್ಯಾಬಿನೆಟ್ ನ ಬಹುತೇಕ ಸಚಿವರು ಟ್ರಂಪ್ ಆಡಳಿತ ನಡೆಸಲು ಅಸಮರ್ಥರು ಮತ್ತು ಅವರನ್ನು ಪದಚ್ಯುತಿಗೊಳಿಸಬೇಕೆಂದು ನಿರ್ಧರಿಸಿದ್ದಲ್ಲಿ ಸಂವಿಧಾನದ 25ನೇ ತಿದ್ದುಪಡಿ ಮೂಲಕ ಟ್ರಂಪ್ ಅವರನ್ನು ಅಧಿಕಾರವಧಿ ಮುಗಿಯುವ ಮುನ್ನವೇ ಪದಚ್ಯುತಿಗೊಳಿಸಬಹುದಾಗಿದೆ.


Stay up to date on all the latest ಅಂತಾರಾಷ್ಟ್ರೀಯ news
Poll
CM Basavaraja Bommai is press meet

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಸನ್ನಿಹಿತ ಎಂಬ ಭಾವನೆ ಇದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp