ಅಮೆರಿಕ ಸಂಸತ್ ಕಟ್ಟಡದ ಮೇಲೆ ದಾಳಿ: ಸಂಘರ್ಷದಲ್ಲಿ 4 ಜನರ ಸಾವು, ವಾಷಿಂಗ್ಟನ್ ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಅಮೆರಿಕ ಸಂಸತ್ ಕಟ್ಟಡ ಅಮೆರಿಕ ಕ್ಯಾಪಿಟಲ್ ಮೇಲೆ ನಡೆಸಿದ ದಾಂಧಲೆ ಮತ್ತು ಗಲಭೆಯಲ್ಲಿ  ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಅಂತೆಯೇ ವಾಷಿಂಗ್ಟನ್ ನಲ್ಲಿ ಮುಂದಿನ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಹೇರಲಾಗಿದೆ.

Published: 07th January 2021 10:51 AM  |   Last Updated: 07th January 2021 01:05 PM   |  A+A-


us-capitol-violence

ಅಮೆರಿಕ ಕ್ಯಾಪಿಟಲ್ ಗಲಭೆ

Posted By : Srinivasamurthy VN
Source : The New Indian Express

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಅಮೆರಿಕ ಸಂಸತ್ ಕಟ್ಟಡ ಅಮೆರಿಕ ಕ್ಯಾಪಿಟಲ್ ಮೇಲೆ ನಡೆಸಿದ ದಾಂಧಲೆ ಮತ್ತು ಗಲಭೆಯಲ್ಲಿ  ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಅಂತೆಯೇ ವಾಷಿಂಗ್ಟನ್ ನಲ್ಲಿ ಮುಂದಿನ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಹೇರಲಾಗಿದೆ.

ಹೌದು.. ಯುಎಸ್ ಕ್ಯಾಪಿಟಲ್ ಕಟ್ಟಡದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ವಾಷಿಂಗ್ಟನ್ ಡಿಸಿ ಪೊಲೀಸ್ ಮುಖ್ಯಸ್ಥ ರಾಬರ್ಟ್ ಕಾಂಟೀ ಅವರು ಹೇಳಿದ್ದಾರೆ.  ಮೃತಪಟ್ಟವರ ಪೈಕಿ ಓರ್ವ ಮಹಿಳೆ ಮತ್ತು ಮೂವರು ಪುರುಷರು ಎಂದು ಹೇಳಲಾಗಿದೆ. 

ಕ್ಯಾಪಿಟಲ್ ಕಟ್ಟಡದಲ್ಲಿ ದಾಂಧಲೆ ನಡೆಸಿದ ಟ್ರಂಪ್ ಬೆಂಬಲಿಗರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದರಾದರೂ, ದಾಂಧಲೆ ನಡೆಸಲೆಂದೇ ಸಿದ್ಧರಾಗಿ ಬಂದಿದ್ದ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಕಟ್ಟಡದಲ್ಲಿ ಬೆಂಕಿ ಹಚ್ಚಿ ವಿಕೃತಿ ಮೆರೆದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಮುಂದೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಚದುರಿಸಲು ಗುಂಡು ಹಾರಿಸಿದರು. ಈ ವೇಳೆ ಓರ್ವ ಮಹಿಳೆ ಮತ್ತು ಹಲವರಿಗೆ ಗುಂಡೇಟು ತಗುಲಿತ್ತು. ಈ ಪೈಕಿ ಮಹಿಳೆ ಮತ್ತು ಮೂರು ಪುರುಷರು ಸಾವನ್ನಪ್ಪಿದ್ದರು. ಅಂತೆಯೇ ಪ್ರತಿಭಟನಾಕಾರರನ್ನು ಚದುರಿಸಿದ ಬಳಿಕ ದುಷ್ಕರ್ಮಿಗಳ ಬಳಿ ಇದ್ದ ಪೈಪ್ ಬಾಂಬ್ ಗಳನ್ನು ವಶಪಡಿಸಿಕೊಂಡರು ಎಂದು ಪೊಲೀಸರು ಹೇಳಿದ್ದಾರೆ.

ವಾಷಿಂಗ್ಟನ್ ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ
ಇನ್ನು ಗಲಭೆ ಪೀಡಿತ ವಾಷಿಂಗ್ಟನ್ ನಲ್ಲಿ ಮುಂದಿನ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. 

ಕರ್ಫ್ಯೂ ಉಲ್ಲಂಘನೆ 52 ಜನರ ಬಂಧನ
ಯು.ಎಸ್. ಕ್ಯಾಪಿಟಲ್ ಮೇಲೆ ಗಲಭೆಕೋರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 52 ಮಂದಿಯನ್ನು ಬಂಧಿಸಲಾಗಿದೆ. ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು 30 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Coronil tablets

ಕೋವಿಡ್-19 ವಿರುದ್ಧಪತಂಜಲಿಯ ಕೊರೋನಿಲ್ ಮಾತ್ರೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp