ಅಮೆರಿಕಾದ ರಾಯಭಾರಿ ತೈವಾನ್ ಗೆ ಭೇಟಿ ನೀಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ: ಚೀನಾ ಎಚ್ಚರಿಕೆ

ವಿಶ್ವಸಂಸ್ಥೆಯಲ್ಲಿನ ಅಮೆರಿಕಾದ ರಾಯಭಾರಿ ಕೆಲಿ ಕ್ರಾಫ್ಟ್ ಮುಂದಿನ ವಾರ ತೈವಾನ್ ಗೆ ಭೇಟಿ ನೀಡುವ ಯೋಚನೆ ಮಾಡಿದರೆ  ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಗುರುವಾರ ಎಚ್ಚರಿಕೆ ನೀಡಿದೆ.

Published: 08th January 2021 04:21 PM  |   Last Updated: 08th January 2021 04:42 PM   |  A+A-


US_Ambassador_Kelly_Craft1

ವಿಶ್ವಸಂಸ್ಥೆಯಲ್ಲಿನ ಅಮೆರಿಕಾದ ರಾಯಭಾರಿ ಕೆಲಿ ಕ್ರಾಫ್ಟ್

Posted By : Nagaraja AB
Source : The New Indian Express

ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿನ ಅಮೆರಿಕಾದ ರಾಯಭಾರಿ ಕೆಲಿ ಕ್ರಾಫ್ಟ್ ಮುಂದಿನ ವಾರ ತೈವಾನ್ ಗೆ ಭೇಟಿ ನೀಡುವ ಯೋಚನೆ ಮಾಡಿದರೆ  ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಗುರುವಾರ ಎಚ್ಚರಿಕೆ ನೀಡಿದೆ.

ಪ್ರಜಾಪ್ರಭುತ್ವ ಮತ್ತು ಸ್ವಯಂ ಆಡಳಿತ ಹೊಂದಿರುವ ತೈವಾನ್ ಚೀನಾದಿಂದ ನಿರಂತರವಾಗಿ ಬೆದರಿಕೆಗೊಳಪಟ್ಟಿದೆ. ಈ ದ್ವೀಪ ಪ್ರದೇಶ ತನ್ನದು ಎಂದು ಹೇಳಿಕೊಳ್ಳುತ್ತಿರುವ ಚೀನಾ,  ಒಂದಲ್ಲಾ ಒಂದು ದಿನ ಅಗತ್ಯಬಿದ್ದರೆ ಸೇನೆಯಿಂದ ಅದನ್ನು ತನ್ನ ವಶಕ್ಕೆ ಪಡೆದುಕೊಳ್ಳುವುದಾಗಿ ಶಪಥ ಮಾಡಿದೆ.

ತೈವಾನ್‌ನ ಯಾವುದೇ ರಾಜತಾಂತ್ರಿಕ ಮಾನ್ಯತೆಯನ್ನು ವಿರೋಧಿಸುವ ಚೀನಾ, ವಿಶ್ವ ವೇದಿಕೆಯಲ್ಲಿ ಅದನ್ನು ಪ್ರತ್ಯೇಕವಾಗಿಡಲು ಮುಂದಾಗಿದೆ. ವ್ಯಾಪಾರ, ಭದ್ರತೆ ಮತ್ತು ಮಾನವ ಹಕ್ಕುಗಳಂತಹ ವಿಚಾರಗಳಲ್ಲಿ ಚೀನಾದೊಂದಿಗೆ ಸಂಘರ್ಷಕ್ಕಿಳಿದಿದ್ದ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಳೆದ ವರ್ಷ ಬಹುಹಂತದ ಹಿರಿಯ ಅಧಿಕಾರಿಗಳನ್ನು ತೈವಾನ್ ಗೆ ಕಳುಹಿಸಿದ್ದರು.

ಜೋ ಬಿಡೆನ್ ಅಧಿಕಾರ ಸ್ವೀಕಾರಕ್ಕೂ ಒಂದು ವಾರಕ್ಕೂ ಮುನ್ನ ಅಂದರೆ ಜನವರಿ 13ರಿಂದ 15ರವರೆಗೂ ಕ್ರಾಪ್ಟ್ ತೈವಾನ್  ಭೇಟಿ, ಮುಂಬರುವ ಆಡಳಿತಕ್ಕೆ ಹೊಸ ರಾಜತಾಂತ್ರಿಕ ತಲೆನೋವನ್ನುಂಟು ಮಾಡಿದೆ. 

ಕ್ರಾಫ್ಟ್ ಭೇಟಿ ಕುರಿತಂತೆ ಪ್ರತಿಕ್ರಿಯಿಸಿರುವ  ಚೀನಾ ಯುಎಸ್ ಮಿಷನ್,  ತನ್ನ ತಪ್ಪು ಕಾರ್ಯಗಳಿಗಾಗಿ ಅಮೆರಿಕ ತಕ್ಕದಾದ ಬೆಲೆ ತೆರಬೇಕಾಗುತ್ತದೆ. ಚೀನಾ- ಅಮೆರಿಕ ಸಂಬಂಧದಲ್ಲಿನ ಹೊಸ ಬಿಕ್ಕಟ್ಟು ಸೃಷ್ಟಿಯಾಗುವುದನ್ನು ತಡೆಯಬೇಕಾಗಿದೆ. ಉಭಯ ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಸಹಕಾರವಿದ್ದು, ಅಮೆರಿಕ ತಪ್ಪು ಹಾದಿ ತುಳಿಯದಂತೆ ಒತ್ತಾಯಿಸಿದೆ.

ಕ್ರಾಫ್ಟ್ ತೈವಾನ್ ನ ಅಧಿಕಾರಿಗಳು ಇನ್ನಿತರ ಪ್ರಜಾಪ್ರಭುತ್ವ ಸಮುದಾಯದ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಅಮೆರಿಕನ್ ಯುಎಸ್ ಮಿಷನ್ ಗುರುವಾರ ಹೇಳಿತ್ತು. ಅವರ ಭೇಟಿ ಉಭಯ ದೇಶಗಳ ನಡುವಣ ಸ್ನೇಹವರ್ಧನೆಯ ಸೂಚಕ ಎಂದು ತೈವಾನ್ ಅಧ್ಯಕ್ಷರ ವಕ್ತಾರ ಕ್ಸವೀಯರ್ ಚಾಂಗ್ ಕೂಡಾ ಕ್ರಾಫ್ಟ್ ಭೇಟಿ ನೀಡುವುದನ್ನು ಸ್ವಾಗತಿಸಿದ್ದರು.

Stay up to date on all the latest ಅಂತಾರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp