ಪ್ರತಿಭಟನೆಯ ನಂತರ ತಮಿಳು ಯುದ್ಧ ಸ್ಮಾರಕ ಮರು ನಿರ್ಮಾಣಕ್ಕೆ ಮುಂದಾದ ಶ್ರೀಲಂಕಾ

ತೀವ್ರ ಪ್ರತಿಭಟನೆಯ ನಂತರ ವಾರಾಂತ್ಯದಲ್ಲಿ ನೆಲಸಮಗೊಂಡಿದ್ದ ಶ್ರೀಲಂಕಾದ ಅಂತರ್ಯುದ್ಧದಲ್ಲಿ ಮೃತಪಟ್ಟ ತಮಿಳು ನಾಗರಿಕರ ಸ್ಮಾರಕವನ್ನು ಮರು ನಿರ್ಮಾಣ ಮಾಡುವುದಾಗಿ ಶ್ರೀಲಂಕಾ ಸರ್ಕಾರ ಸೋಮವಾರ ಹೇಳಿದೆ.

Published: 11th January 2021 07:46 PM  |   Last Updated: 11th January 2021 07:46 PM   |  A+A-


jafna

ಜಾಫ್ನಾ ವಿವಿ

Posted By : Lingaraj Badiger
Source : AFP

ಕೊಲಂಬೊ: ತೀವ್ರ ಪ್ರತಿಭಟನೆಯ ನಂತರ ವಾರಾಂತ್ಯದಲ್ಲಿ ನೆಲಸಮಗೊಂಡಿದ್ದ ಶ್ರೀಲಂಕಾದ ಅಂತರ್ಯುದ್ಧದಲ್ಲಿ ಮೃತಪಟ್ಟ ತಮಿಳು ನಾಗರಿಕರ ಸ್ಮಾರಕವನ್ನು ಮರು ನಿರ್ಮಾಣ ಮಾಡುವುದಾಗಿ ಶ್ರೀಲಂಕಾ ಸರ್ಕಾರ ಸೋಮವಾರ ಹೇಳಿದೆ.

ಜಾಫ್ನಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ತಮಿಳರ ಸ್ಮರಣಾರ್ಥ ನಿರ್ಮಿಸಲಾಗಿದ್ದ ಸ್ಮಾರಕವನ್ನು ನೆಲಸಮಗೊಳಿಸಿದ ನಂತರ ವಿವಿ ಮುಂದೆ ಭಾರೀ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಗೆ ಮಣಿದ ಶ್ರೀಲಂಕಾ ಸರ್ಕಾರ ಸ್ಮಾರಕ ಮರು ನಿರ್ಮಾಣ ಮಾಡುವುದಾಗಿ ಹೇಳಿದೆ.

ಸ್ಮಾರಕ ನೆಲಸಮಗೊಳಿಸಿದ ಘಟನೆಗೆ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ ಎಂದು ಪ್ರತಿಪಕ್ಷದ ಶಾಸಕ ಧರ್ಮಲಿಂಗಂ ಸೀತಾದಾನ್ ಅವರು ತಿಳಿಸಿದ್ದಾರೆ.

ವಿಶ್ವವಿದ್ಯಾನಿಲಯದೊಳಗಿನ ಸ್ಮಾರಕವನ್ನು ಬುಲ್ಡೋಜರ್ ಗಳಿಂದ ನೆಲಸಮಗೊಳಿಸುತ್ತಿದ್ದಾಗ ವಿವಿಯ ಗೇಟ್‌ಗಳು ಲಾಕ್ ಮಾಡಲಾಗಿತ್ತು ಎಂದು ಸೀತಾದಾನ್ ಅವರು ಆರೋಪಿಸಿದ್ದಾರೆ.


Stay up to date on all the latest ಅಂತಾರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp