ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ಹಿನ್ನಡೆ; ವಾಗ್ದಂಡನೆಗೆ ಉಸ್ತುವಾರಿ ತಂಡ ನೇಮಕ ಮಾಡಿದ ಸ್ಪೀಕರ್‌ ಪೆಲೋಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ಹಿನ್ನಡೆಯಾಗಿದ್ದು, ಟ್ರಂಪ್‌ ವಿರುದ್ಧ ಮಂಡಿಸಲಾಗುತ್ತಿರುವ ವಾಗ್ದಂಡನೆ ನಿರ್ಣಯಕ್ಕೆ ಸಂಬಂಧಿಸಿದಂತೆ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ವಾಗ್ದಂಡನೆಗೆ ಉಸ್ತುವಾರಿ ತಂಡ ನೇಮಕ ಮಾಡಿದ್ದಾರೆ.

Published: 13th January 2021 12:53 PM  |   Last Updated: 13th January 2021 12:53 PM   |  A+A-


Speaker Pelosi

ಸ್ಪೀಕರ್ ಪೆಲೋಸಿ

Posted By : Srinivasamurthy VN
Source : Associated Press

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ಹಿನ್ನಡೆಯಾಗಿದ್ದು, ಟ್ರಂಪ್‌ ವಿರುದ್ಧ ಮಂಡಿಸಲಾಗುತ್ತಿರುವ ವಾಗ್ದಂಡನೆ ನಿರ್ಣಯಕ್ಕೆ ಸಂಬಂಧಿಸಿದಂತೆ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ವಾಗ್ದಂಡನೆಗೆ ಉಸ್ತುವಾರಿ ತಂಡ ನೇಮಕ ಮಾಡಿದ್ದಾರೆ.

ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ಡೆಮಾಕ್ರಟಿಕ್‌ ಪಕ್ಷದ 9 ಜನ ಸಂಸದರನ್ನು ಒಳಗೊಂಡ ಉಸ್ತುವಾರಿ ತಂಡವನ್ನು ಸ್ಪೀಕರ್‌ ನ್ಯಾನ್ಸಿ ಪೆಲೋಸಿ ನೇಮಕ ಮಾಡಿದ್ದಾರೆ ಎನ್ನಲಾಗಿದೆ. ವರದಿಯಲ್ಲಿರುವಂತೆ ಮೇರಿಲ್ಯಾಂಡ್‌ ಸಂಸದ ಜೆಮಿ ರಸ್ಕಿನ್‌ ಈ ತಂಡದ ನೇತೃತ್ವ ವಹಿಸಿದ್ದು. ಈ ತಂಡದಲ್ಲಿ ಮೂವರು ಮಹಿಳಾ ನಾಯಕಿಯರೂ ಇದ್ದಾರೆ. 58 ವರ್ಷದ ರಸ್ಕಿನ್‌ ಅವರು 25 ವರ್ಷಗಳ ಕಾಲ ದೇಶದ ಸಂವಿಧಾನ ಕುರಿತು ಬೋಧನೆ ಮಾಡಿದ ಅನುಭವ ಹೊಂದಿದ್ದಾರೆ. ಸಂಸತ್‌ನಲ್ಲಿ ನಡೆಯುವ ಚರ್ಚೆಗಳಲ್ಲಿ ಅವರು ಮುಂಚೂಣಿಯಲ್ಲಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜ.6ರಂದು ಕ್ಯಾಪಿಟಲ್‌ ಹಿಲ್‌ ಮೇಲೆ ಟ್ರಂಪ್‌ ಬೆಂಬಲಿಗರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಒಬ್ಬ ಪೊಲೀಸ್‌ ಅಧಿಕಾರಿ ಸೇರಿ ಐವರು ಮೃತಪಟ್ಟಿದ್ದರು. ಈ ಘಟನೆಗೆ ಟ್ರಂಪ್‌ ಅವರ ಪ್ರಚೋದನೆಯೇ ಕಾರಣ ಎಂದು ಆರೋಪಿಸಿರುವ ಡೆಮಾಕ್ರಟಿಕ್‌ ಸಂಸದರು, ಅವರ ವಿರುದ್ಧ ವಾಗ್ದಂಡನೆಗೆ ನಿರ್ಧರಿಸಿದ್ದಾರೆ.

ಇನ್ನು ಏಳು ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅದಕ್ಕೂ ಮುನ್ನವೇ ಪಟ್ಟದಿಂದ ವಜಾಗೊಳಿಸುವ ಪ್ರಕ್ರಿಯೆಯೊಂದು ಅಮೆರಿಕದಲ್ಲಿ ಆರಂಭವಾಗಿದೆ. ಅಮೆರಿಕದ ಸಂಸತ್ ಭವನದಲ್ಲಿ ಹಿಂಸಾಚಾರ ನಡೆಸುವುದಕ್ಕೆ ಕುಮ್ಮಕ್ಕು ನೀಡಿದ ಸಂಬಂಧ ಟ್ರಂಪ್ ವಿರುದ್ಧ ಅಮೆರಿಕ ಸಂಸತ್ತಿನ ಕೆಳಮನೆಯಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್‌ನಲ್ಲಿ ವಾಗ್ದಂಡನೆ (ವಜಾ) ಗೊತ್ತುವಳಿ ಮಂಡನೆಯಾಗಿ ಅಂಗೀಕಾರ ಕೂಡ ಪಡೆದಿದೆ. 25ನೇ ತಿದ್ದುಪಡಿ ಪರವಾಗಿ 223 ಮತಗಳು ಲಭಿಸಿದ್ದು, ವಿರುದ್ಧವಾಗಿ 205 ಮತಗಳು ಮಾತ್ರ ಲಭಿಸಿವೆ ಎನ್ನಲಾಗಿದೆ. ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ತಿರಸ್ಕಾರದ ಬಳಿಕವೂ ಡೆಮಾಕ್ರಟಿಕ್ ಸದಸ್ಯರು ತಿದ್ದಪಡಿ ನಿರ್ಣಯವನ್ನು ಸಂಸತ್ ನಲ್ಲಿ ಮಂಡಿಸಿದರು.  
 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp