ಮಲ್ಯಗೆ ಮತ್ತೊಂದು ಸಂಕಷ್ಟ: ಕಾನೂನು ಶುಲ್ಕ ಬಿಡುಗಡೆಗೆ ಬ್ರಿಟನ್ ಕೋರ್ಟ್ ನಕಾರ

ಕಾನೂನು ಶುಲ್ಕ ಬಿಡುಗಡೆ ಮಾಡಲು ಬ್ರಿಟನ್ ನ್ಯಾಯಾಲಯ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಾಲದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 

Published: 13th January 2021 09:28 AM  |   Last Updated: 13th January 2021 12:37 PM   |  A+A-


vijay mallya

ವಿಜಯ್ ಮಲ್ಯ

Posted By : Manjula VN
Source : Online Desk

ಲಂಡನ್: ಕಾನೂನು ಶುಲ್ಕ ಬಿಡುಗಡೆ ಮಾಡಲು ಬ್ರಿಟನ್ ನ್ಯಾಯಾಲಯ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಾಲದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 

ಸೋಮವಾರ ತುರ್ತು ಅರ್ಜಿಯ ವಿಚಾರಣೆ ಆಲಿಸಿದ ಇಂಗ್ಲೆಂಡ್ ನ್ಯಾಯಾಲಯ ತನ್ನ ವ್ಯಾಪ್ತಿಯಲ್ಲಿ ಇರುವ ಸಿಎಫ್ಒನಿಂದ ಮದ್ಯದ ಉದ್ಯಮಿ ವಿಜಯ್ ಮಲ್ಯಾ ಅವರಿಗೆ ಕಾನೂನು ಶುಲ್ಕ ಬಿಡುಗಡೆ ಮಾಡಲು ನಿರಾಕರಿಸಿದೆ.    

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕ್‌ಗಳ ಒಕ್ಕೂಟದಿಂದ ವಿಜಯ್ ಮಲ್ಯ ವಿರುದ್ಧ ದಿವಾಳಿತನದ ವಿಚಾರಣೆಯ ಭಾಗವಾಗಿ ಕೋರ್ಟ್ ಫಂಡ್ಸ್ ಆಫೀಸ್‌ನ (ಸಿಎಫ್‌ಒ) ಗಣನೀಯ ಮೊತ್ತವನ್ನು ಬಿಡುಗಡೆ ಮಾಡಲು ಅನುಮತಿ ನೀಡಲು ನಿರಾಕರಿಸಿದೆ.

ಲಂಡನ್‌ನ ಹೈಕೋರ್ಟ್‌ನ ದಿವಾಳಿತನ ಮತ್ತು ಕಂಪನಿಗಳ ನ್ಯಾಯಾಲಯದಲ್ಲಿ (ಐಸಿಸಿ) ವಿಚಾರಣೆಯ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶ ಸೆಬಾಸ್ಟಿಯನ್ ಪ್ರೆಂಟಿಸ್, ಅಂತಹ ಊರ್ಜಿತಗೊಳಿಸುವಿಕೆಯ ಆದೇಶಕ್ಕೆ ಅಗತ್ಯವಾದ ಮೂಲ ಮಾಹಿತಿಯನ್ನು ಒದಗಿಸಲು ಮಲ್ಯ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆಂದು ವರದಿಗಳು ತಿಳಿಸಿವೆ. 

Stay up to date on all the latest ಅಂತಾರಾಷ್ಟ್ರೀಯ news
Poll
Coronil tablets

ಕೋವಿಡ್-19 ವಿರುದ್ಧಪತಂಜಲಿಯ ಕೊರೋನಿಲ್ ಮಾತ್ರೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp