ಪೆನ್ಸ್ ತಿರಸ್ಕಾರದ ಬಳಿಕವೂ ಸಂಸತ್ ಸಭೆಯಲ್ಲಿ ಟ್ರಂಪ್ ಉಚ್ಚಾಟನೆಗೆ 25ನೇ ತಿದ್ದುಪಡಿ ನಿರ್ಣಯ ಅಂಗೀಕಾರ
ಅಮೆರಿಕ ಉಪಾದ್ಯಕ್ಷ ಮೈಕ್ ಪೆನ್ಸ್ ತಿರಸ್ಕಾರದ ಬಳಿಕವೂ ಅಮೆರಿಕದ ಸಂಸತ್ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಉಚ್ಚಾಟನೆಗೆ 25ನೇ ತಿದ್ದುಪಡಿ ಮಂಡನೆ ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿದುಬಂದಿದೆ.
Published: 13th January 2021 11:34 AM | Last Updated: 13th January 2021 11:38 AM | A+A A-

ಅಮೆರಿಕ ಸಂಸತ್
ವಾಷಿಂಗ್ಟನ್: ಅಮೆರಿಕ ಉಪಾದ್ಯಕ್ಷ ಮೈಕ್ ಪೆನ್ಸ್ ತಿರಸ್ಕಾರದ ಬಳಿಕವೂ ಅಮೆರಿಕದ ಸಂಸತ್ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಉಚ್ಚಾಟನೆಗೆ 25ನೇ ತಿದ್ದುಪಡಿ ಮಂಡನೆ ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿಸಂಸ್ಥೆ ವರದಿ ಮಾಡಿದ್ದು. 25ನೇ ತಿದ್ದುಪಡಿ ಪರವಾಗಿ 223 ಮತಗಳು ಲಭಿಸಿದ್ದು, ವಿರುದ್ಧವಾಗಿ 205 ಮತಗಳು ಮಾತ್ರ ಲಭಿಸಿವೆ ಎನ್ನಲಾಗಿದೆ. ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ತಿರಸ್ಕಾರದ ಬಳಿಕವೂ ಡೆಮಾಕ್ರಟಿಕ್ ಸದಸ್ಯರು ತಿದ್ದಪಡಿ ನಿರ್ಣಯವನ್ನು ಸಂಸತ್ ನಲ್ಲಿ ಮಂಡಿಸಿದರು.
ಮೂರನೇ ಶ್ರೇಯಾಂಕದ ಹೌಸ್ ಜಿಒಪಿ ನಾಯಕ ವ್ಯೋಮಿಂಗ್ನ ಲಿಜ್ ಚೆನೆ ಸೇರಿದಂತೆ ನಾಲ್ಕು ರಿಪಬ್ಲಿಕನ್ ಶಾಸಕರು ಬುಧವಾರ ಟ್ರಂಪ್ ಅವರನ್ನು ದೋಷಾರೋಪಣೆ ಮಾಡಲು ಮತ ಚಲಾಯಿಸುವುದಾಗಿ ಘೋಷಿಸಿದ್ದರು. ರಿಪಬ್ಲಿಕನ್ ನಾಯಕತ್ವವನ್ನು ಮತ್ತು ಪಕ್ಷವನ್ನು ಅವರು ತಿರಸ್ಕರಿಸಿದರು.
ಈ ವೇಳೆ ಮಾತನಾಡಿದ ಚೆನೆ, ಅಮೆರಿಕ ಅಧ್ಯಕ್ಷರು. ದುರುದ್ದೇಶಪೂರ್ವಕವಾಗಿಯೇ ರ್ಯಾಲಿ ನಡೆಸಿದ್ದು, ಇದರಿಂದಾಗಿಯೇ ಸಂಘರ್ಷ ಏರ್ಪಟ್ಟಿತು. ಅಮೆರಿಕ ಅಧ್ಯಕ್ಷರು ತನ್ನ ಕಚೇರಿಯನ್ನು ದುರ್ಬಳಕೆ ಮಾಡಿಕೊಡು ದೇಶಕ್ಕೆ ದೊಡ್ಡ ಅಪಚಾರ ಎಸಗಿದ್ದಾರೆ. ಸಂವಿಧಾನ ಬದ್ಧ ಪ್ರಮಾಣವಚನವನ್ನು ಅವರು ಪಾಲನೆ ಮಾಡಿಲ್ಲ ಎಂದು ಹೇಳಿದರು.
ಇದಕ್ಕೆ ದನಿ ಗೂಡಿಸಿದ ಮೇರಿಲ್ಯಾಂಡ್ನ ಡೆಮಾಕ್ರಟಿಕ್ ಸದಸ್ಯರಾದ ರೆಪ್ ಜೇಮಿ ರಾಸ್ಕಿನ್ ಅವರು, ನಾವೆಲ್ಲರೂ ಸ್ವಲ್ಪ ಆತ್ಮ ಶೋಧನೆ ಮಾಡಬೇಕಾಗಿದೆ. ಇಂತಹ ಘಟನೆ ಮರುಕಳಿಸಬಾರದು ಎಂದು ಹೇಳಿದರು.
435 ಸದಸ್ಯ ಬಲದ ಅಮೆರಿಕ ಸಂಸತ್ತಿನ ಕೆಳಮನೆಯಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತವಿದೆ. ಹೀಗಾಗಿ ಸರಳ ಬಹುಮತದೊಂದಿಗೆ ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯ ಅಂಗೀಕರಿಸುವ ವಿಶ್ವಾಸದಲ್ಲಿ ಆ ಪಕ್ಷದ ಸಂಸದರು ಇದ್ದಾರೆ. ಇದಾದ ಬಳಿಕ ನಿರ್ಣಯ ಅಮೆರಿಕ ಸಂಸತ್ತಿನ ಮೇಲ್ಮನೆಯಾಗಿರುವ ಸೆನೆಟ್ನಲ್ಲಿ ಮಂಡನೆಯಾಗಿದೆ. ಅಲ್ಲೂ ಅಂಗೀಕಾರವಾದರೆ ಟ್ರಂಪ್ ಅವರು ಅಧಿಕಾರಾವಧಿ ಮುಗಿವ ಮುನ್ನವೇ ಕೆಳಗಿಳಿದು ತೀವ್ರ ಮುಖಭಂಗ ಅನುಭವಿಸಬೇಕಾಗುತ್ತದೆ.