ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಆಯ್ತು, ಈಗ ಡೊನಾಲ್ಡ್ ಟ್ರಂಪ್ ಯೂಟ್ಯೂಬ್ ಚಾನೆಲ್ ಕೂಡ ಸ್ಥಗಿತ!

ಕಳೆದ ವಾರ ವಾಷಿಂಗ್ಟನ್ ನಲ್ಲಿ ಟ್ರಂಪ್ ಬೆಂಬಲಿಗರಿಂದ ಹಿಂಸಾಚಾರ ನಡೆದ ಬಳಿಕ ಸಾಮಾಜಿಕ ಮಾಧ್ಯಮಗಳು ಟ್ರಂಪ್ ಅವರ ಖಾತೆಗಳನ್ನು ನಿಷೇಧಿಸಿದ್ದವು, ಇದೀಗ ಗೂಗಲ್ ಒಡೆತನದ ಯೂಟ್ಯೂಬ್ ನಿನ್ನೆ ಡೊನಾಲ್ಡ್ ಟ್ರಂಪ್ ಅವರ ಚಾನೆಲ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Published: 13th January 2021 01:18 PM  |   Last Updated: 13th January 2021 02:29 PM   |  A+A-


A sign covers the back window of a sedan during a gathering calling for the impeachment of President Donald Trump at South High School before a car rally through the streets of downtown.

ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪದಚ್ಯುತಿಗೊಳಿಸಬೇಕೆಂದು ಕಾರಿನ ಹಿಂದೆ ಬರಹ

Posted By : Sumana Upadhyaya
Source : AFP

ವಾಷಿಂಗ್ಟನ್: ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆನ್ ಲೈನ್ ಚಾನೆಲ್ ಗಳ ಕ್ರಮ ಕಠಿಣವಾಗುತ್ತಿದೆ. ಕಳೆದ ವಾರ ವಾಷಿಂಗ್ಟನ್ ನಲ್ಲಿ ಟ್ರಂಪ್ ಬೆಂಬಲಿಗರಿಂದ ಹಿಂಸಾಚಾರ ನಡೆದ ಬಳಿಕ ಸಾಮಾಜಿಕ ಮಾಧ್ಯಮಗಳು ಟ್ರಂಪ್ ಅವರ ಖಾತೆಗಳನ್ನು ನಿಷೇಧಿಸಿದ್ದವು, ಇದೀಗ ಗೂಗಲ್ ಒಡೆತನದ ಯೂಟ್ಯೂಬ್ ನಿನ್ನೆ ಡೊನಾಲ್ಡ್ ಟ್ರಂಪ್ ಅವರ ಚಾನೆಲ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಅಮೆರಿಕದಲ್ಲಿ ಅದರಲ್ಲೂ ರಾಜಧಾನಿಯಲ್ಲಿ ಮುಂದುವರಿದಿರುವ ಹಿಂಸಾಚಾರ ಹಿನ್ನೆಲೆಯಲ್ಲಿ, ಮುಂದೆಯೂ ಸಾಕಷ್ಟು ಹಿಂಸಾಚಾರ ನಡೆಸುವ ಸಂಭವ ಇರುವುದರಿಂದ ನೀತಿಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಟ್ರಂಪ್ ಅವರು ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿರುವ ಹೊಸ ವಿಷಯಗಳನ್ನು ತೆಗೆದುಹಾಕಲಾಗಿದೆ ಎಂದು ಯೂಟ್ಯೂಬ್ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಕನಿಷ್ಠ 7 ದಿನಗಳವರೆಗೆ ಅವರ ಚಾನೆಲ್ ನಲ್ಲಿ ಹೊಸ ವಿಷಯಗಳನ್ನು ಅಪ್ ಲೋಡ್ ಮಾಡುವುದಕ್ಕೆ ತಡೆಹಿಡಿಯಲಾಗುವುದು ಎಂದು ಹೇಳಲಾಗಿದೆ.

ಕಳೆದ ವಾರ ಟ್ರಂಪ್ ಅವರ ಫೇಸ್ ಬುಕ್, ಇನ್ಸ್ಟಾಗ್ರಾಮ್ ಅಕೌಂಟ್ ಗಳನ್ನು ವಜಾಗೊಳಿಸಲಾಗಿತ್ತು. ಟ್ವಿಟ್ಟರ್ ಒಂದು ಹೆಜ್ಜೆ ಮುಂದೆ ಹೋಗಿ ಟ್ರಂಪ್ ಅವರ ಅಕೌಂಟ್ ನಿಂದ ಟ್ವೀಟ್ ಗಳನ್ನು ಡಿಲೀಟ್ ಮಾಡಿತ್ತು. ಟ್ರಂಪ್ ಅವರ ಸ್ನಾಪ್ ಚಾಟ್ ಮತ್ತು ಟ್ವಿಚ್ ಸೇವೆಗಳು ಕೂಡ ಅಮಾನತುಗೊಂಡಿವೆ.

Stay up to date on all the latest ಅಂತಾರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp