ಪೊಂಗಲ್ ಹಬ್ಬದ ಅಂಗವಾಗಿ ತಮಿಳು ಸಮುದಾಯಕ್ಕೆ ಶುಭ ಹಾರೈಸಿದ ಬ್ರಿಟನ್ ಪ್ರಧಾನಿ!
ಪೊಂಗಲ್ ಹಬ್ಬದ ಅಂಗವಾಗಿ ಬ್ರಿಟನ್ ಹಾಗೂ ಜಗತ್ತಿನ ಇತರೆಡೆ ನೆಲೆಸಿರುವ ತಮಿಳಿನ ಅನಿವಾಸಿ ಭಾರತೀಯರಿಗೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಶುಭಾಶಯ ಕೋರಿದ್ದಾರೆ.
Published: 14th January 2021 04:15 PM | Last Updated: 14th January 2021 04:15 PM | A+A A-

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್
ಲಂಡನ್: ಪೊಂಗಲ್ ಹಬ್ಬದ ಅಂಗವಾಗಿ ಬ್ರಿಟನ್ ಹಾಗೂ ಜಗತ್ತಿನ ಇತರೆಡೆ ನೆಲೆಸಿರುವ ತಮಿಳಿನ ಅನಿವಾಸಿ ಭಾರತೀಯರಿಗೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಶುಭಾಶಯ ಕೋರಿದ್ದಾರೆ.
ಅದ್ಬುತ ಬ್ರಿಟಿಷ್ ತಮಿಳು ಸಮುದಾಯ ಮತ್ತು ವಿಶ್ವದಾದ್ಯಂತ ನೆಲೆಸಿರುವ ತಮಿಳು ಜನರಿಗೆ ಪೊಂಗಲ್ ಹಬ್ಬದ ಶುಭಾಶಯಗಳು, ಕುಟುಂಬ, ಸ್ನೇಹಿತರೊಂದಿಗೆ ಒಟ್ಟಿಗೆ ಸೇರಿ ಅದ್ದೂರಿಯಾಗಿ ಹಬ್ಬ ಆಚರಿಸುವುದನ್ನು ಎದುರು ನೋಡುತ್ತಿರುವುದಾಗಿ ಅವರು ಟ್ವೀಟರ್ ನಲ್ಲಿ ನೀಡಿರುವ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
I want to wish Tamils in the UK and around the world a happy Thai Pongal. pic.twitter.com/GCROsgqI9d
— Boris Johnson (@BorisJohnson) January 13, 2021
ಸಹಜವಾಗಿ, ಸಾಂಪ್ರದಾಯಿಕವಾಗಿ ಈ ಪೂಜಾ ದಿನವು ಸುಗ್ಗಿಯ ಆಗಮನವನ್ನು ಆಚರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಬ್ರಿಟನ್ ನ ಆರ್ಥಿಕ ಅಭಿವೃದ್ಧಿ, ಶಾಲೆಗಳಲ್ಲಿ ಮಕ್ಕಳಿಗೆ ಬೋಧನೆ, ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ರೋಗಿಗಳಿಗೆ ಉಪಚರ, ದುರ್ಬಲ ವರ್ಗದವರಿಗೆ ಕಾಳಜಿ ಮತ್ತಿತರ ತಮಿಳು ಸಮುದಾಯದ ಕೊಡುಗೆಯನ್ನು ಅಭಿನಂದಿಸಿರುವ ಜಾನ್ಸನ್, ಉತ್ತಮ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಜೊತೆಯಾಗಿ ಮುಂದುವರೆಯೋಣ ಎಂದು ಅವರು ಹೇಳಿದ್ದಾರೆ.
ಮಕರ ಸಂಕಾಂತ್ರಿ ಹಬ್ಬವನ್ನು ಎಳ್ಳು ಅಮಾವ್ಯಾಸೆ, ಭೋಗಿ ಮತ್ತಿತರ ಹೆಸರುಗಳಿಂದ ಆಚರಿಸಲಾಗುತ್ತಿದೆ.