ಇಂಡೋನೇಷ್ಯಾ ಭೂಕಂಪ: ಸಾವಿನ ಸಂಖ್ಯೆ 35ಕ್ಕೆ ಏರಿಕೆ
ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ತಲುಪಿದೆ ಎಂದು ವಿಪತ್ತು ಏಜೆನ್ಸಿಯನ್ನು ಉಲ್ಲೇಖಿಸಿ ಅಜೆನ್ಸ್ ಫ್ರಾನ್ಸ್-ಪ್ರೆಸ್ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.
Published: 15th January 2021 12:59 PM | Last Updated: 15th January 2021 01:50 PM | A+A A-

ಸಂಗ್ರಹಚ ಚಿತ್ರ
ಜಕಾರ್ತ: ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ತಲುಪಿದೆ ಎಂದು ವಿಪತ್ತು ಏಜೆನ್ಸಿಯನ್ನು ಉಲ್ಲೇಖಿಸಿ ಅಜೆನ್ಸ್ ಫ್ರಾನ್ಸ್-ಪ್ರೆಸ್ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.
ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಕಂಪನ ದಾಖಲಾಗಿದ್ದು ಕಂಪನದಿಂದಾಗಿ ಕುಸಿದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದ ಜನರ ಪತ್ತೆಗಾಗಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಗಾಯಗೊಂಡವರ ಸಂಖ್ಯೆ 600 ಎಂದು ಅಂದಾಜಿಸಲಾಗಿದೆ.ಕಂಪನದಿಂದ ನಗರದ ಆಸ್ಪತ್ರೆಯೊಂದು ಕುಸಿದು ಬಿದ್ದಿದ್ದು ಅದರಡಿಯಲ್ಲಿ ಅನೇಕರು ಸಿಲುಕಿ ಕೊಂಡಿದ್ದಾರೆ. ದುರಂತದಿಂದ ಒಂದು ಹೋಟೆಲ್ ಕೂಡ ನಾಶವಾಗಿದೆ ಎಂದು ವರದಿಗಳು ತಿಳಿಸಿವೆ.
ಆಸ್ಪತ್ರೆಯ ಅವಶೇಷಗಳಡಿ ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.