ಅಮೆರಿಕ: ಮಗಳು, ಅತ್ತೆಯನ್ನು ಕೊಂದು ಭಾರತೀಯ ಮೂಲದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ 14 ವರ್ಷದ ಮಗಳು ಮತ್ತು ಅತ್ತೆಯನ್ನು ಗನ್ ನಿಂದ ಶೂಟ್ ಮಾಡಿ ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Published: 15th January 2021 05:52 PM  |   Last Updated: 15th January 2021 06:59 PM   |  A+A-


Gunmen

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ನ್ಯೂಯಾರ್ಕ್: ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ 14 ವರ್ಷದ ಮಗಳು ಮತ್ತು ಅತ್ತೆಯನ್ನು ಗನ್ ನಿಂದ ಶೂಟ್ ಮಾಡಿ ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

57 ವರ್ಷದ ಭೂಪಿಂದರ್ ಸಿಂಗ್, ಆಲ್ಬನಿಯಿಂದ ದಕ್ಷಿಣಕ್ಕೆ 19 ಕಿ.ಮೀ ದೂರದಲ್ಲಿರುವ ಷೊಡಾಕ್ ಪಟ್ಟಣದಲ್ಲಿರುವ ತನ್ನ ಮನೆಯಲ್ಲಿ ಹದಿಹರೆಯದ ಮಗಳು ಜಸ್ಲೀನ್ ಕೌರ್ ಮತ್ತು ಅತ್ತೆ 55 ವರ್ಷದ ಮಂಜೀತ್ ಕೌರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಜಸ್ಲೀನ್ ಕೌರ್ ಮತ್ತು ಮಂಜೀತ್ ಕೌರ್ ಇಬ್ಬರೂ ತಮ್ಮ ನಿವಾಸದಲ್ಲಿ ಗುಂಡೇಟಿನ ಗಾಯಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿದ್ದ ಮತ್ತೊಬ್ಬ ನಿವಾಸಿ 40 ವರ್ಷದ ರಾಶ್ಪಾಲ್ ಕೌರ್ ಅವರ ಕೈಗೂ ಗುಂಡು ತಗುಲಿದ್ದು, ಭೂಪಿಂದರ್ ಸಿಂಗ್ ನಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿದ್ದಾರೆ. ಗಾಯಗೊಂಡಿರುವ ರಾಶ್ವಾಲ್ ಕೌರ್ ಅವರು ಆಲ್ಬನಿ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp