13,000 ಕಿ.ಮೀ ಸಂಚರಿಸಿ ಅಮೆರಿಕದಿಂದ ಬಂದಿದ್ದ "ಜೋ..." ಹತ್ಯೆಗೆ ಆಸ್ಟ್ರೇಲಿಯಾ ಚಿಂತನೆ, ಹೀಗಿದೆ ಕಾರಣ 

ಸುಮಾರು 13,000 ಕಿ.ಮೀ ಸಂಚರಿಸಿ ಆಸ್ಟ್ರೇಲಿಯಾಗೆ ಬಂದಿದ್ದ ಜೋ ಹತ್ಯೆಗೆ ಆಸ್ಟ್ರೇಲಿಯಾ ಚಿಂತನೆ ನಡೆಸಿದೆ. 

Published: 15th January 2021 11:47 PM  |   Last Updated: 15th January 2021 11:47 PM   |  A+A-


Quarantine risk? Australia to kill pigeon that undertook 13,000-kilometer cross-Pacific ride

13,000 ಕಿ.ಮೀ ಸಂಚರಿಸಿ ಅಮೆರಿಕದಿಂದ ಬಂದಿದ್ದ 'ಜೋ...' ಹತ್ಯೆಗೆ ಆಸ್ಟ್ರೇಲಿಯಾ ಚಿಂತನೆ, ಹೀಗಿದೆ ಕಾರಣ

Posted By : Srinivas Rao BV
Source : The New Indian Express

ಕ್ಯಾನ್ಬೆರಾ: ಸುಮಾರು 13,000 ಕಿ.ಮೀ ಸಂಚರಿಸಿ ಆಸ್ಟ್ರೇಲಿಯಾಗೆ ಬಂದಿದ್ದ ಜೋ ಹತ್ಯೆಗೆ ಆಸ್ಟ್ರೇಲಿಯಾ ಚಿಂತನೆ ನಡೆಸಿದೆ. 

ಪೆಸಿಫಿಕ್ ಸಾಗರ ದಾಟಿ ಅಮೆರಿಕದಿಂದ ಆಸ್ಟ್ರೇಲಿಯಾಗೆ ರೇಸಿಂಗ್ ಪಾರಿವಾಳವೊಂದು ಆಗಮಿಸಿದ್ದು, ಇದಕ್ಕೆ ನಿಯೋಜಿತ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಕ್ವಾರಂಟೈನ್ ರಿಸ್ಕ್ ನಿಂದಾಗಿ ಈ ಪಾರಿವಾಳವನ್ನು ಹತ್ಯೆ ಮಾಡಲು ಆಸ್ಟ್ರೇಲಿಯಾ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಅಮೆರಿಕದ ಒರೆಗಾನ್ ರಾಜ್ಯದಿಂದ ಅ.29 ರಂದು ಕಣ್ಮರೆಯಾಗಿದ್ದ ಈ ಪಾರಿವಾಳ ಡಿ.26 ರಂದು ಮೆಲ್ಬೋರ್ನ್ ನಲ್ಲಿ ಕಾಣಿಸಿಕೊಂಡಿದೆ.

ಈ ಪಾರಿವಾಳ ಕಾರ್ಗೋ ಶಿಪ್ ನಲ್ಲಿ ಪೆಸಿಫಿಕ್ ಸಾಗರ ದಾಟಿ ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಪಾರಿವಾಳ ಆಸ್ಟ್ರೇಲಿಯಾ ಮಾಧ್ಯಮಗಳ ಕುತೂಹಲಕ್ಕೆ ಕಾರಣವಾಗಿರುವುದಷ್ಟೇ ಅಲ್ಲದೇ ಕ್ವಾರಂಟೈನ್ ನ್ನು ಕಠಿಣವಾಗಿ ಪಾಲಿಸುತ್ತಿರುವ ಆಡಳಿತದ ಕಣ್ಣಿಗೂ ಬಿದ್ದಿದೆ. 

ಪಾರಿವಾಳವನ್ನು ಕಂಡಿದ್ದ ಸೆಲ್ಲಿ-ಬರ್ಡ್ ಈ ಬಗ್ಗೆ ಮಾತನಾಡಿದ್ದು,  ಅಧಿಕಾರಿಗಳು ಆ ಪಾರಿವಾಳವನ್ನು ಹಿಡಿಯುವಂತೆ ಕೇಳಿದ್ದಾರೆ ಎಂದು ಹೇಳಿದ್ದಾರೆ.

ಒಂದು ವೇಳೆ ಅದು ಅಮೆರಿಕಾದಿಂದಲೇ ಬಂದಿದ್ದು ಎಂಬುದು ಖಚಿತವಾದರೆ ಹಕ್ಕಿ ಸಂಬಂಧಿತ ರೋಗಗಳ ಬಗ್ಗೆ ಆತಂಕವೂ ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾದ ರಾಷ್ಟ್ರೀಯ ಪಾರಿವಾಳ ಒಕ್ಕೂಟದ ಕಾರ್ಯದರ್ಶಿ ಬ್ರಾಡ್ ಟರ್ನರ್ ಚೀನಾದ ರೇಸಿಂಗ್ ಪಾರಿವಾಳಗಳು ಆಸ್ಟ್ರೇಲಿಯಾಗೆ ವೆಸ್ಟ್ ಕೋಸ್ಟ್ ಕಾರ್ಗೋ ಶಿಪ್ ಗಳಲ್ಲಿ ಬಂದಿರುವ ಪ್ರಕರಣಗಳನ್ನು ಕೇಳಿದ್ದೇನೆ, 1931 ರಲ್ಲಿ ಪಾರಿವಾಳವೊಂದು ಫ್ರಾನ್ಸ್ ನಿಂದ ಪ್ರಾರಂಭಿಸಿ ವಿಯೆಟ್ನಾಮ್ ವರೆಗೂ ಪ್ರಯಾಣಿಸಿದ್ದು ಅತಿ ಹೆಚ್ಚಿನ ದೂರ ಪ್ರಯಾಣಿಸಿರುವ ದಾಖಲೆಯಾಗಿದೆ ಎಂದು ಹೇಳಿದ್ದಾರೆ.
 

Stay up to date on all the latest ಅಂತಾರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp