ಕೊನೆಗೂ ವಾಷಿಂಗ್ಟನ್ ತೊರೆಯಲಿರುವ ಡೊನಾಲ್ಡ್ ಟ್ರಂಪ್: ಮುಂದಿನ ಬುಧವಾರ ಜೊ ಬೈಡನ್ ಗೆ ಅಧಿಕಾರ ಹಸ್ತಾಂತರ 

ನೂತನ ಅಧ್ಯಕ್ಷ ಜೊ ಬೈಡನ್ ಅವರು ಅಧಿಕಾರ ವಹಿಸಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತಿನ ಮೊದಲು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಬುಧವಾರ ಬೆಳಗ್ಗೆ ವಾಷಿಂಗ್ಟನ್ ತೊರೆಯಲಿದ್ದಾರೆ.

Published: 16th January 2021 09:28 AM  |   Last Updated: 16th January 2021 09:28 AM   |  A+A-


Donald Trump

ಡೊನಾಲ್ಡ್ ಟ್ರಂಪ್

Posted By : Sumana Upadhyaya
Source : Associated Press

ವಾಷಿಂಗ್ಟನ್: ನೂತನ ಅಧ್ಯಕ್ಷ ಜೊ ಬೈಡನ್ ಅವರು ಅಧಿಕಾರ ವಹಿಸಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತಿನ ಮೊದಲು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಬುಧವಾರ ಬೆಳಗ್ಗೆ ವಾಷಿಂಗ್ಟನ್ ತೊರೆಯಲಿದ್ದಾರೆ.

ಜಾಯಿಂಟ್ ಬೇಸ್ ಆಂಡ್ರ್ಯೂಸ್ ನಲ್ಲಿ ನಡೆಯಲಿರುವ ನಿರ್ಗಮನ ಸಮಾರಂಭದಲ್ಲಿ  ಅವರನ್ನು ಗೌರವಪೂರ್ವಕವಾಗಿ ಕಳುಹಿಸಿಕೊಡಲಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದ್ದು ಟ್ರಂಪ್ ಅವರ ಯೋಜನೆಗಳೇನು ಎಂದು ಇನ್ನೂ ಘೋಷಣೆಯಾಗಿಲ್ಲ.

ವಾಷಿಂಗ್ಟನ್ ನಲ್ಲಿ ಸರ್ಕಾರದ ಅಧಿಕಾರಿಗಳು ರೆಡ್ ಕಾರ್ಪೆಟ್ ಮೂಲಕ ವೈಭವೋಪೇತ ಸಮಾರಂಭ ಏರ್ಪಡಿಸಿ ಮಿಲಿಟರಿ ಬ್ಯಾಂಡ್ ನೊಂದಿಗೆ 21 ಸುತ್ತು ಬಂದೂಕು ವಂದನೆ ಸಲ್ಲಿಸಿ ಡೊನಾಲ್ಡ್ ಟ್ರಂಪ್ ಅವರನ್ನು ಕಳುಹಿಸಿಕೊಡಲು ಸಿದ್ಧತೆ ನಡೆಯುತ್ತಿದೆ.

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಾ ಬಂದಿರುವ ಡೊನಾಲ್ಡ್ ಟ್ರಂಪ್ ನಾಡಿದ್ದು ಜೊ ಬೈಡನ್ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿದ್ದಾರೆ. ಅವರ ಸ್ಥಾನದಲ್ಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಭಾಗವಹಿಸಲಿದ್ದಾರೆ.

ತಮ್ಮ ಭವಿಷ್ಯವನ್ನು ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಣ್ಣ ಗುಂಪಿನ ಸಹಚರರೊಂದಿಗೆ ಫ್ಲೋರಿಡಾದಲ್ಲಿ ಕಳೆಯುವ ಸಾಧ್ಯತೆಯಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp