ಚೀನಾ ಐಸ್ಕ್ರೀಮ್ ನಲ್ಲಿ ಕೊರೋನಾ ಪತ್ತೆ!
ಚೀನಾದಲ್ಲಿ ಐಸ್ಕ್ರೀಮ್ ನಲ್ಲಿ ಕೊರೋನಾ ವೈರಾಣು ಪತ್ತೆಯಾಗಿರುವ ಹಿನ್ನೆಲೆ ಇದೀಗ ಅಧಿಕಾರಿಗಳು ಐಸ್ಕ್ರೀಮ್ ತಿಂದವರಿಗಾಗಿ ಹುಡುಕಾಟ ನಡೆಸಿದ್ದಾರೆ. ದೇಶದ ಈಶಾನ್ಯದಲ್ಲಿರುವ ಟಿಯಾಂಜಿನ್ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ತಯಾರಿಸಿದ ಐಸ್ ಕ್ರೀಂನ ಮೂರು ಮಾದರಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದು ಖಚಿತವಾಗಿದೆ.
Published: 17th January 2021 09:24 AM | Last Updated: 17th January 2021 09:24 AM | A+A A-

ಐಸ್ ಕ್ರೀಮ್
ಬೀಜಿಂಗ್: ಚೀನಾದಲ್ಲಿ ಐಸ್ಕ್ರೀಮ್ ನಲ್ಲಿ ಕೊರೋನಾ ವೈರಾಣು ಪತ್ತೆಯಾಗಿರುವ ಹಿನ್ನೆಲೆ ಇದೀಗ ಅಧಿಕಾರಿಗಳು ಐಸ್ಕ್ರೀಮ್ ತಿಂದವರಿಗಾಗಿ ಹುಡುಕಾಟ ನಡೆಸಿದ್ದಾರೆ. ದೇಶದ ಈಶಾನ್ಯದಲ್ಲಿರುವ ಟಿಯಾಂಜಿನ್ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ತಯಾರಿಸಿದ ಐಸ್ ಕ್ರೀಂನ ಮೂರು ಮಾದರಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದು ಖಚಿತವಾಗಿದೆ.
ಟಿಯಾಂಜಿನ್ ಡಕಿಯಾವಾಡು ಫುಡ್ ಕಂಪನಿ ತಯಾರಿಸಿದ್ದ ಐಸ್ಕ್ರೀಮ್ ನಲ್ಲಿ ಕೊರೋನಾ ವೈರಾಣು ಪತ್ತೆಯಾಗಿದೆ. ಫುಡ್ ಕಂಪನಿ ಒಟ್ಟೂ 4,836 ಬಾಕ್ಸ್ ಗಳನ್ನು ತಯಾರಿಸಿದೆ. ಅದರಲ್ಲಿ 1,812 ಬಾಕ್ಸ್ ಗಳು ಇದಾಗಲೇ ವಿವಿಧ ಪ್ರಾಂತ್ಯಗಳಲ್ಲಿ ಮಾರಾಟವಾಗಿದೆ. 935 ಬಾಕ್ಸ್ ಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದ್ದು ಈ ಪೈಕಿ 65 ಬಾಕ್ಸ್ ಗಳು ಮಾರಾಟವಾಗಿದೆ.
"ಚೀನಾ ಡೈಲಿ" ವರದಿಯಂತೆ 2,089 ಬಾಕ್ಸ್ ಗಳನ್ನು ಇದಾಗಲೇ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇಲ್ಲಿಯವರೆಗೆ ನಡೆಸಿದ ಸಾಂಕ್ರಾಮಿಕ ರೋಗಗಳ ತನಿಖೆಯು ಕಂಪನಿಯು ನ್ಯೂಜಿಲೆಂಡ್ನಿಂದ ಆಮದು ಮಾಡಿಕೊಂಡ ಹಾಲಿನ ಪುಡಿ ಮತ್ತು ಉಕ್ರೇನ್ನಿಂದ ಆಮದು ಮಾಡಿಕೊಂಡಕಚ್ಚಾ ವಸ್ತುಗಳನ್ನು ಬಳಸಿ ಐಸ್ ಕ್ರೀಮ್ ಬಾಕ್ಸ್ ಅನ್ನು ಉತ್ಪಾದಿಸಿದೆ ಎಂದು ಹೇಳಿದೆ
ಲೀಡ್ಸ್ ವಿಶ್ವವಿದ್ಯಾಲಯದ ವೈರಾಲಜಿಸ್ಟ್ ಡಾ. ಸ್ಟೀಫನ್ ಗ್ರಿಫಿನ್, ಐಸ್ ಕ್ರೀಂನಲ್ಲಿ ಕೊರೋನಾ ಮಾನವ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ ಎಂದಿದ್ದಾರೆ. : "ಇದು ಉತ್ಪಾದನಾ ಘಟಕದ ಸಮಸ್ಯೆಯಾಗಿದೆ.ಘಟಕದಲ್ಲಿನ ನೈರ್ಮಲ್ಯದ ಕೊರತೆ ಇದಕ್ಕೆ ಕಾರಣವಾಗುರುವ ಸಾಧ್ಯತೆ ಇದೆ"
ಐಸ್ ಕ್ರೀಮ್ ಅನ್ನು ಕೊಬ್ಬಿನಿಂದ ತಯಾರಿಸಲಾಗುತ್ತದೆ ಮತ್ತು ಶೀತ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ ವೈರಸ್ ಬದುಕುಳಿಯಲು ಇದು ಸಹಕಾರಿ ಎಂದು ಆವರು ಅಭಿಪ್ರಾಯಪಟ್ಟರು,