ಕೋವಿಡ್-19: ಚೀನಾದ ಭಾರತೀಯ ರಾಯಭಾರ ಕಚೇರಿ ಗಣರಾಜ್ಯೋತ್ಸವ ಸಮಾರಂಭ ಸಿಬ್ಬಂದಿಗೆ ಮಾತ್ರ ಸೀಮಿತ

ಈ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ದಿನ ಭಾರತದ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮವನ್ನು ಕೇವಲ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಮಾತ್ರ ಮಾಡಲು ಚೀನಾದ ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ನಿರ್ಧರಿಸಿದೆ. 
ಕೋವಿಡ್-19 ಶಿಷ್ಠಾಚಾರ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಭಾರತೀಯ ರಾಯಭಾರ ಕಚೇರಿ ಈ ತೀರ್ಮಾನ ಕೈಗೊಂಡಿದೆ.

Published: 18th January 2021 01:57 PM  |   Last Updated: 18th January 2021 02:35 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ಬೀಜಿಂಗ್: ಈ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ದಿನ ಭಾರತದ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮವನ್ನು ಕೇವಲ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಮಾತ್ರ ಮಾಡಲು ಚೀನಾದ ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ನಿರ್ಧರಿಸಿದೆ. 

ಕೋವಿಡ್-19 ಶಿಷ್ಠಾಚಾರ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಭಾರತೀಯ ರಾಯಭಾರ ಕಚೇರಿ ಈ ತೀರ್ಮಾನ ಕೈಗೊಂಡಿದೆ.

ಬೀಜಿಂಗ್ ಮತ್ತು ಅದರ ಪಕ್ಕದ ಪ್ರಾಂತ್ಯಗಳಾದ ಹೆಬೀ ಮತ್ತು ಹೀಲಾಂಗ್‌ಜಿಯಾಂಗ್‌ನಲ್ಲಿನ ಕೋವಿಡ್-19 ಸಾಂಕ್ರಾಮಿಕ-ಸಂಬಂಧಿತ ಪ್ರಸಕ್ತ ಸನ್ನಿವೇಶಗಳಿಂದಾಗಿ ನಿರ್ಬಂಧ, ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಧ್ವಜಾರೋಹಣ ಸಮಾರಂಭ ನಡೆಯಲಿದೆ. ರಾಯಭಾರ ಕಚೇರಿಯ ಅಧಿಕಾರಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತಿವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿರುವ ಬೀಜಿಂಗ್ ನಲ್ಲಿರುವ ರಾಯಭಾರ ಕಚೇರಿ ಮುಂದೆ ಸಾವಿರಾರು ಭಾರತೀಯರು ಸೇರುತ್ತಾರೆ. ಈ ಬಾರಿ ಮಾತ್ರ ದೂರವುಳಿಯುವ ಪರಿಸ್ಥಿತಿ ಬಂದಿದೆ. ಕೊರೋನವೈರಸ್ ಸೋಂಕಿನ ಮರುಕಳಿಸುವಿಕೆಯ ಮಧ್ಯೆ 11 ಚೀನೀ ಪ್ರದೇಶಗಳು ವಾಸ್ತವಿಕ ಲಾಕ್‌ಡೌನ್ ಹಂತದಲ್ಲಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Yeddyurappa

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಕರ್ನಾಟಕ ಬಜೆಟ್ 2021 ಕುರಿತು ನಿಮ್ಮ ಅಭಿಪ್ರಾಯ...


Result
ಸಮತೋಲಿತ ಬಜೆಟ್
ಗೊತ್ತುಗುರಿ ಇಲ್ಲದ ಬಜೆಟ್
flipboard facebook twitter whatsapp