
ಸಂಗ್ರಹ ಚಿತ್ರ
ಬಂಗುಯಿ: ದೇಶದ ಆಗ್ನೇಯ ಭಾಗದಲ್ಲಿ ಹೊಂಚಿನ ದಾಳಿಯಲ್ಲಿ ವಿಶ್ವಸಂಸ್ಥೆಯ ಇಬ್ಬರು ಶಾಂತಿಪಾಲನಾ ಯೋಧರು ಮೃತಪಟ್ಟಿದ್ದಾರೆ ಎಂದು ಮಿನುಸ್ಕಾ ತಿಳಿಸಿದೆ.
ಸಮ್ಮಿಶ್ರ ಸಶಸ್ತ್ರ ಗುಂಪುಗಳು ಹೊಂಚುಹಾಕಿ ಶಾಂತಿಪಾಲನಾ ಪಡೆಯ ಯೋಧರ ವಾಹನಗಳ ಮೇಲೆ ನಡೆಸಿದ ದಾಳಿಯಲ್ಲಿ ದಕ್ಷಿಣ ಭಾಗದಲ್ಲಿರುವ ಬಂಗಸ್ಸೌ ನಿಂದ 17 ಕಿ.ಮೀ ದೂರದಲ್ಲಿ ಇಬ್ಬರು ಮಿನುಸ್ಕಾ ಶಾಂತಿಪಾಲನಾ ಯೋಧರು ಸೋಮವಾರ ಹತರಾದರು.ಎಂದು ಮಿನುಸ್ಕಾ ಟ್ವಿಟ್ಟರ್ ಹೇಳಿಕೆಯಲ್ಲಿ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ, ಸಿಎಆರ್ (ಮಧ್ಯ ಆಫ್ರಿಕಾದ ಗಣರಾಜ್ಯ) ದಲ್ಲಿನ ಪ್ರತ್ಯೇಕ ಉದ್ದೇಶಿತ ದಾಳಿಯಲ್ಲಿ ಇಬ್ಬರು ಯುಎನ್ ಶಾಂತಿಪಾಲಕರು ಕೊಲ್ಲಲ್ಪಟ್ಟಿದ್ದರು. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಳೆದ ವಾರ ಯುಎನ್ ಶಾಂತಿಪಾಲನಾ ಯೋದರ ವಿರುದ್ಧದ ದಾಳಿ ಯುದ್ಧ ಅಪರಾಧವಾಗಲಿದೆ ಎಂದು ಹೇಳಿದ್ದರು. ವಿಶ್ವದ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾದ ಸಿಎಆರ್ನ ಪರಿಸ್ಥಿತಿ ಡಿಸೆಂಬರ್ 27 ರ ಚುನಾವಣೆಯನಂತರ ತೀರಾ ಹದಗೆಟ್ಟಿದೆ.