ಚೀನಾ ಕೋವಿಡ್ ಲಸಿಕೆ 'ಸಿನೊಫಾರ್ಮ್' ತುರ್ತು ಬಳಕೆಗೆ ಪಾಕಿಸ್ತಾನ ಅನುಮೋದನೆ

ದೇಶದಲ್ಲಿ ತುರ್ತು ಬಳಕೆಗಾಗಿ ಚೀನಾದ ಸಿನೊಫಾರ್ಮ್ ಕೋವಿಡ್-19 ಲಸಿಕೆಯನ್ನು ಬಳಸಿಕೊಳ್ಳಬಹುದೆಂದು ಪಾಕಿಸ್ತಾನ ಅಧಿಕಾರಿಗಳು ಅನುಮೋದಿಸಿದ್ದಾರೆ, ಪಾಕಿಸ್ತಾನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದೆ.

Published: 19th January 2021 03:11 PM  |   Last Updated: 19th January 2021 03:49 PM   |  A+A-


ಸಾಂದರ್ಭಿಕ ಚಿತ್ರ

Posted By : Raghavendra Adiga
Source : PTI

ಇಸ್ಲಾಮಾಬಾದ್: ದೇಶದಲ್ಲಿ ತುರ್ತು ಬಳಕೆಗಾಗಿ ಚೀನಾದ ಸಿನೊಫಾರ್ಮ್ ಕೋವಿಡ್-19 ಲಸಿಕೆಯನ್ನು ಬಳಸಿಕೊಳ್ಳಬಹುದೆಂದು ಪಾಕಿಸ್ತಾನ ಅಧಿಕಾರಿಗಳು ಅನುಮೋದಿಸಿದ್ದಾರೆ, ಪಾಕಿಸ್ತಾನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದೆ.

ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯ ತುರ್ತು ಬಳಕೆಯನ್ನು ಅನುಮೋದಿಸಿದ ಎರಡು ದಿನಗಳ ನಂತರ ಡ್ರಗ್ ರೆಗ್ಯುಲೇಟರಿ ಅಥಾರಿಟಿ ಆಫ್ ಪಾಕಿಸ್ತಾನ್ (ಡಿಆರ್‌ಪಿ) ಸೋಮವಾರ ಚೀನಾದ ಲಸಿಕೆಯನ್ನು ಅನುಮೋದಿಸಿತು. ಡಿಆರ್‌ಪಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅಸಿಮ್ ರೌಫ್ ಮಾತನಾಡಿ "ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಹೆಚ್) ಸಿನೊಫಾರ್ಮ್‌ನ ಲಸಿಕೆಯನ್ನು ಅದರ ಹೆಸರಿನಲ್ಲಿ ನೋಂದಾಯಿಸಿಕೊಂಡಿದೆ" ಎಂದು ಹೇಳಿದರು.

"ಲಸಿಕೆಯ ತುರ್ತು ಬಳಕೆಗಾಗಿ ಅನುಮೋದನೆ ನೀಡಲಾಗಿದೆ ಮತ್ತು ಇದು ಚೀನಾ ಲಸಿಕೆ ಪಾಕಿಸ್ತಾನಕ್ಕೆ ತರಲು ದಾರಿ ಮಾಡಿಕೊಡುತ್ತದೆ" ಎಂದು ಅವರು ಡಾನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಪಾಕಿಸ್ತಾನವು ಈಗಾಗಲೇ 1.1 ಮಿಲಿಯನ್ ಡೋಸ್ ಸಿನೊಫಾರ್ಮ್‌ನ ಕೋವಿಡ್ -19 ಲಸಿಕೆಯನ್ನು ಕಾಯ್ದಿರಿಸಿದೆ ಮತ್ತು ಅದರ ಆಮದು ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಮಂಗಳವಾರದ ತನಕ ಪಾಕಿಸ್ತಾನವು ಕೊರೋನಾವೈರಸ್ ನಿಂದಾಗಿ 11,055 ಸಾವನ್ನು ವರದಿ ಮಾಡಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ 1,800 ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಇದುವರೆಗೆ ಆ ರಾಷ್ಟ್ರದಲ್ಲಿ  523,011 ಮಂದಿ ಕೋವಿಡ್ ಸೋಂಕು ದೃಢವಾಗಿರುವ ವರದಿ ಪಡೆದಿದ್ದಾರೆ.


Stay up to date on all the latest ಅಂತಾರಾಷ್ಟ್ರೀಯ news
Poll
Minister sudhakar

ಆಧುನಿಕ ಭಾರತೀಯ ಮಹಿಳೆ ಮದುವೆ, ಮಕ್ಕಳನ್ನು ಬಯಸುವುದಿಲ್ಲ: ಸಚಿವ ಸುಧಾಕರ್ ಹೇಳಿಕೆ ಕುರಿತು ನಿಮ್ಮ ಅಭಿಪ್ರಾಯವೇನು?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp