ಕಣ್ಮರೆಯಾದ ತಿಂಗಳುಗಳ ನಂತರ ಮತ್ತೆ ಜಾಕ್ ಮಾ ಸಾರ್ವಜನಿಕವಾಗಿ ಪ್ರತ್ಯಕ್ಷ!

ಚೀನಾದ ಆಡಳಿತ ಮುಖ್ಯಸ್ಥ ಕ್ಸಿ  ಜಿನ್​ಪಿಂಗ್ ರನ್ನು ಟೀಕಿಸಿದ ಬೆನ್ನಲ್ಲೇ ಕಣ್ಮರೆಯಾಗಿ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಚೀನಾದ ಯಶಸ್ವಿ ಉದ್ಯಮಿ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. 

Published: 20th January 2021 01:33 PM  |   Last Updated: 20th January 2021 02:18 PM   |  A+A-


jackmaa-2

ಜಾಕ್ ಮಾ

Posted By : Srinivas Rao BV
Source : Online Desk

ಬೀಜಿಂಗ್: ಚೀನಾದ ಆಡಳಿತ ಮುಖ್ಯಸ್ಥ ಕ್ಸಿ  ಜಿನ್​ಪಿಂಗ್ ರನ್ನು ಟೀಕಿಸಿದ ಬೆನ್ನಲ್ಲೇ ಕಣ್ಮರೆಯಾಗಿ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಚೀನಾದ ಯಶಸ್ವಿ ಉದ್ಯಮಿ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. 

ಜಾಕ್ ಮಾ ಕಣ್ಮರೆ ಜಾಕ್ ಮಾ ಅವರ ಪರಿಸ್ಥಿತಿ, ಚೀನಾದ ಆಡಳಿತದ ವೈಖರಿ, ಉದ್ಯಮಿಗಳನ್ನು ಚೀನಾ ನಡೆಸಿಕೊಳ್ಳುವ ರೀತಿಗಳ ಬಗ್ಗೆ ಹಲವು ಚರ್ಚೆಗಳಿಗೆ ಕಾರಣವಾಗಿತ್ತು.

ಈಗ ಅಲಿಬಾಬಾ ಸಂಸ್ಥಾಪಕ ಶಿಕ್ಷಕರನ್ನು ಉದ್ದೇಶಿಸಿ ಲೈವ್ ಸ್ಟ್ರೀಮ್ ನ ಮೂಲಕ ಮಾತನಾಡಿದ್ದಾರೆ. ಗ್ರಾಮೀಣ ಭಾಗದ ಶಿಕ್ಷಕರನ್ನು ಗುರುತಿಸಲು ಜಾಕ್ ಮಾ ವಾರ್ಷಿಕವಾಗಿ ಕಾರ್ಯಕ್ರಮವನ್ನು ಆಯೋಜಿಸುವ ಪರಿಪಾಠ ಹೊಂದಿದ್ದಾರೆ. ಈ ಬಾರಿ ಈ ಕಾರ್ಯಕ್ರಮ ಆನ್ ಲೈನ್ ಮೂಲಕ ನಡೆದಿದ್ದು, ಫಿಲಾಂತ್ರೊಫಿ ಬಗ್ಗೆ ಹೆಚ್ಚು ಸಮಯ ವಿನಿಯೋಗಿಸುವುದಾಗಿ ಜಾಕ್ ಮಾ ತಿಳಿಸಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp