
ಜೋ-ಬೈಡೆನ್, ಕಮಲಾ ಹ್ಯಾರಿಸ್
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ- ಬೈಡೆನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಿದರು.
ಯುಎಸ್ ಕ್ಯಾಪಿಟಲ್ ನಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಹಾಗೂ ಭದ್ರತೆಯ ನಡುವೆ ನಡೆದ ವರ್ಣ ರಂಜಿತ ಸಮಾರಂಭದಲ್ಲಿ 46ನೇ ಅಧ್ಯಕ್ಷರಾಗಿ ಜೋ- ಬೈಡೆನ್ ಪ್ರಮಾಣ ವಚನ ಸ್ವೀಕರಿಸಿದರು. ಅಮೆರಿಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಾಬರ್ಟ್ ಜಾನ್ಸ್ ಜೋ- ಬೈಡೆನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ನಂತರ ಮಾತನಾಡಿದ ಬೈಡೆನ್, ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಪ್ರಜಾತಂತ್ರದ ಗೆಲುವಾಗಿದೆ. ಸಂವಿಧಾನ, ಅಮೆರಿಕದ ಜನರ ದಿನವಾಗಿದೆ. ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಮುಂದೆ ಹಲವಾರು ಸವಾಲುಗಳಿದ್ದು, ಒಗ್ಗಟ್ಟಾಗಿ ಸವಾಲನ್ನು ಎದುರಿಸೋಣ ಎಂದರು.
ಅಭ್ಯರ್ಥಿಯಾಗಿ ವಿಜಯೋತ್ಸವ ಆಚರಿಸುತ್ತಿಲ್ಲ, ಪ್ರಜಾಪ್ರಭುತ್ವದ ಕಾರಣದಿಂದ ವಿಜಯೋತ್ಸವ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ಮಹತ್ವದು ಎಂಬುದನ್ನು ಮತ್ತೆ ಕಲಿತಿದ್ದೇವೆ. ಪ್ರಜಾಪ್ರಭುತ್ವ ಮೇಲುಗೈ ಸಾಧಿಸಿದೆ ಎಂದು ಅವರು ಹೇಳಿದರು.
ಸಂವಿಧಾನ, ಪ್ರಜಾಪ್ರಭುತ್ವ, ಅಮೆರಿಕದ ಜನತೆಗೆ ಬದ್ದನಾಗಿರುತ್ತೇನೆ. ಎಲ್ಲವನ್ನು ನಿಮ್ಮ ಸೇವೆಯಲ್ಲಿ ಇಡುತ್ತೇನೆ. ಅಧಿಕಾರದ ಬಗ್ಗೆ ಅಲ್ಲ ಆದರೆ ಸಾಧ್ಯತೆಗಳ ಬಗ್ಗೆ ಯೋಚಿಸುತ್ತೇನೆ. ವೈಯಕ್ತಿಕ ಹಿತಾಸಕ್ತಿಗಳಲ್ಲ ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಯೋಚಿಸುವುದಾಗಿ ಜೋ ಬೈಡೆನ್ ಹೇಳಿದರು.
ಅಮೆರಿಕಾದ ಇತಿಹಾಸದಲ್ಲಿ ರಾಷ್ಟ್ರೀಯ ಕಚೇರಿಗೆ ಮೊದಲ ಮಹಿಳೆಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಷಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನನಗೆ ಹೇಳಬೇಡಿ ಎಂದರು.
Today, we mark the swearing-in of the first woman in American history elected to national office, Vice President Kamala Harris. Don't tell me things can't change: US President Joe Biden pic.twitter.com/NSbToK75uh
— ANI (@ANI) January 20, 2021
ಅನಿವಾಸಿ ಭಾರತೀಯ ಮಹಿಳೆ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರೀಂಕೋರ್ಟ್ ನ್ಯಾಯಾಧೀಶೆ ಸೋನಿಯಾ ಸೋಟೋಮೇಯರ್ ಕಮಲಾ ಹ್ಯಾರಿಸ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಖ್ಯಾತ ಗಾಯಕಿ ಗಾಗಾ ಪದಗ್ರಹಣ ಸಮಾರಂಭದ ಆಕರ್ಷಣೀಯ ಕೇಂದ್ರಬಿಂದುವಾಗಿದ್ದರು.
#WATCH | US: Lady Gaga sang the national anthem of the United States at the inauguration ceremony at the US Capitol. pic.twitter.com/p6FvD2PUgS
— ANI (@ANI) January 20, 2021