ಅಮೆರಿಕದ ನೂತನ ಅಧ್ಯಕ್ಷ ಜೊ ಬೈಡನ್ ಉದ್ಘಾಟನಾ ಭಾಷಣ ಸಿದ್ದಪಡಿಸಿದ್ದು ಭಾರತೀಯ ಮೂಲದ ವಿನಯ್ ರೆಡ್ಡಿ!

ವಿಶ್ವದ ಅತಿ ಮುಂದುವರಿದ ಪ್ರಬಲ ರಾಷ್ಟ್ರವಾದ ಅಮೆರಿಕದ ಅಧ್ಯಕ್ಷರ ಪದಗ್ರಹಣವೆಂದರೆ ಕುತೂಹಲಕರ ಸಂಗತಿ. ಬುಧವಾರ ದೇಶದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

Published: 20th January 2021 10:50 AM  |   Last Updated: 20th January 2021 12:28 PM   |  A+A-


Vinay Reddy

ವಿನಯ್ ರೆಡ್ಡಿ

Posted By : Sumana Upadhyaya
Source : PTI

ವಾಷಿಂಗ್ಟನ್: ವಿಶ್ವದ ಅತಿ ಮುಂದುವರಿದ ಪ್ರಬಲ ರಾಷ್ಟ್ರವಾದ ಅಮೆರಿಕದ ಅಧ್ಯಕ್ಷರ ಪದಗ್ರಹಣವೆಂದರೆ ಕುತೂಹಲಕರ ಸಂಗತಿ. ಬುಧವಾರ ದೇಶದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ಇಂದು ಅವರು ಪದಗ್ರಹಣ ಸ್ವೀಕಾರ ಸಮಾರಂಭದಲ್ಲಿ ಏನೇನು ಮಾತನಾಡಲಿದ್ದಾರೆ ಎಂಬ ಕುತೂಹಲ ಸಾಮಾನ್ಯರಿಗೂ, ವಿಶ್ವದ ಬೇರೆ ನಾಯಕರಿಗೂ ಇರುತ್ತದೆ. ಇಂದು ವಾಷಿಂಗ್ಟನ್ ನಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 12 ಗಂಟೆಯ ನಂತರ ಅಧಿಕಾರ ವಹಿಸಿಕೊಂಡ ಬಳಿಕ ಜೊ ಬೈಡನ್ ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅಮೆರಿಕ ಹಿಂದೆಂದೂ ಕಂಡು ಕೇಳರಿಯದ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೋವಿಡ್-19 ಸಂಕಷ್ಟದಿಂದ ನಲುಗಿ ಹೋಗಿದೆ. ಈ ಸಮಯದಲ್ಲಿ ಒಗ್ಗಟ್ಟಿನ ಮಂತ್ರವನ್ನು ಜೊ ಬೈಡನ್ ಅವರು ಜಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಮೆರಿಕ ಒಂದಾಗಿದೆ, ಒಗ್ಗಟ್ಟಾಗಿದೆ ಎಂಬ ಮೂಲ ಧ್ಯೇಯವಾಕ್ಯದೊಂದಿಗೆ ಜೊ ಬೈಡನ್ 20ರಿಂದ 30 ನಿಮಿಷಗಳ ಕಾಲ ಮಾತನಾಡಲಿದ್ದಾರೆ.

ಇಲ್ಲಿ ಮತ್ತೊಂದು ಕುತೂಹಲಕಾರಿ ಆಸಕ್ತಿಯ ಸಂಗತಿಯೆಂದರೆ ಜೊ ಬೈಡನ್ ಅವರ ಭಾಷಣವನ್ನು ಸಿದ್ಧಪಡಿಸಿದವರು ಭಾರತೀಯ ಮೂಲದ ವಿನಯ್ ರೆಡ್ಡಿ. ಓಹಿಯೊದ ಡೇಟನ್ ನಲ್ಲಿ ಬೆಳೆದ ವಿನಯ್ ರೆಡ್ಡಿ ಅವರು 2013ರಲ್ಲಿ ಬೈಡನ್ ಅವರು ಉಪಾಧ್ಯಕ್ಷರಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ ಕೂಡ ಭಾಷಣ ಬರೆದುಕೊಟ್ಟಿದ್ದರು. ಅಮೆರಿಕ ಅಧ್ಯಕ್ಷರಿಗೆ ಭಾಷಣ ಪ್ರತಿಯನ್ನು ಬರೆದುಕೊಡುತ್ತಿರುವ ಮೊದಲ ಭಾರತೀಯ ಮೂಲದ ಅಮೆರಿಕನ್ ವಿನಯ್ ರೆಡ್ಡಿ.

ಕಳೆದ ನವೆಂಬರ್ ನಲ್ಲಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಗೊಂಡಾಗಲೇ ಜೊ ಬೈಡನ್ ಅವರು ವಿನಯ್ ರೆಡ್ಡಿಗೆ ಭಾಷಣದ ಕರಡು ಪ್ರತಿ ಸಿದ್ದಪಡಿಸಲು ಹೇಳಿದ್ದರಂತೆ. ಜೊ ಬೈಡನ್ ಅವರು ಅಧ್ಯಕ್ಷ ಪದವಿಗೆ ಸ್ಪರ್ಧಿಸುತ್ತಾರೆ ಎಂದು ಗೊತ್ತಾದ ದಿನದಿಂದ ಅವರ ಚುನಾವಣಾ ಪ್ರಚಾರಗಳಿಗೆ ಭಾಷಣಗಳನ್ನು ಸಿದ್ದಪಡಿಸುತ್ತಿದ್ದುದು ಇದೇ ವಿನಯ್ ರೆಡ್ಡಿ.

ದೇಶದ ಏಕತೆ, ಉಭಯಪಕ್ಷೀಯತೆ ಮತ್ತು ಆಶಾವಾದದ ಬಗ್ಗೆ ಇಂದಿನ ಭಾಷಣದಲ್ಲಿ ಜೊ ಬೈಡನ್ ಮಾತನಾಡಲಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. 


Stay up to date on all the latest ಅಂತಾರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp