ಅಮೆರಿಕ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸುವ ಕೊನೆಯ ದಿನ: ಸ್ಟೀವ್ ಬ್ಯಾನನ್ ಸೇರಿ 73 ಮಂದಿಗೆ ಡೊನಾಲ್ಡ್ ಟ್ರಂಪ್ ಕ್ಷಮಾದಾನ!
ಅಧ್ಯಕ್ಷೀಯ ಪದವಿ ಹುದ್ದೆಯಿಂದ ಕೆಳಗಿಳಿದು ಇನ್ನೇನು ಶ್ವೇತಭವನದ ಕಚೇರಿಯನ್ನು ತೊರೆಯುವ ಕೆಲವೇ ಹೊತ್ತಿಗೆ ಮೊದಲು ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಾಜಿ ಸಹಚರ ಸ್ಟೀವ್ ಬ್ಯಾನನ್ ಸೇರಿದಂತೆ 73 ಮಂದಿಯನ್ನು ಕ್ಷಮಿಸಿದ್ದಾರೆ.
Published: 20th January 2021 01:58 PM | Last Updated: 20th January 2021 02:20 PM | A+A A-

ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಧ್ಯಕ್ಷೀಯ ಪದವಿ ಹುದ್ದೆಯಿಂದ ಕೆಳಗಿಳಿದು ಇನ್ನೇನು ಶ್ವೇತಭವನದ ಕಚೇರಿಯನ್ನು ತೊರೆಯುವ ಕೆಲವೇ ಹೊತ್ತಿಗೆ ಮೊದಲು ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಾಜಿ ಸಹಚರ ಸ್ಟೀವ್ ಬ್ಯಾನನ್ ಸೇರಿದಂತೆ 73 ಮಂದಿಯನ್ನು ಕ್ಷಮಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 73 ಮಂದಿಗೆ ಕ್ಷಮಾದಾನ ನೀಡಿದ್ದಲ್ಲದೆ 70 ಮಂದಿಯ ಶಿಕ್ಷೆಯನ್ನು ರದ್ದುಪಡಿಸಿದ್ದಾರೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.ಪಟ್ಟಿಯಲ್ಲಿ ಅಧ್ಯಕ್ಷರು ಮತ್ತು ಅವರ ಮಕ್ಕಳ ಹೆಸರು ಇಲ್ಲ.
ಡೊನಾಲ್ಡ್ ಟ್ರಂಪ್ ಸರ್ಕಾರದ ಪ್ರಮುಖ ನೀತಿಯಾಗಿದ್ದ ಮೆಕ್ಸಿಕೊ ಗಡಿ ಗೋಡೆಯನ್ನು ನಿರ್ಮಿಸಲು ಸಂಗ್ರಹಿಸಿದ ಹಣದಲ್ಲಿ ಜನರಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದ ಬ್ಯಾನನ್ಗೆ ಟ್ರಂಪ್ ಕ್ಷಮಾದಾನ ನೀಡಿದ್ದಾರೆ.
ಬ್ಯಾನನ್ ಸಂಪ್ರದಾಯವಾದಿ ಚಳವಳಿಯಲ್ಲಿ ಪ್ರಮುಖ ನಾಯಕರಾಗಿದ್ದು, ರಾಜಕೀಯ ಕುಶಾಗ್ರಮತಿಗೆ ಹೆಸರುವಾಸಿಯಾಗಿದ್ದಾರೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. ವಿದೇಶಿ ಲಾಬಿ ಕಾನೂನುಗಳನ್ನು ಉಲ್ಲಂಘಿಸಲು ಸಂಚು ರೂಪಿಸಿದ್ದಾಗಿ ಕಳೆದ ವರ್ಷ ತಪ್ಪೊಪ್ಪಿಕೊಂಡ ನಂತರ ಟ್ರಂಪ್ನ ಮಾಜಿ ನಿಧಿ ಸಂಗ್ರಹಗಾರ ಎಲಿಯಟ್ ಬ್ರಾಯ್ಡಿಯನ್ನು ಇದೇ ರೀತಿ ಕ್ಷಮಿಸಲಾಯಿತು.