
ಪ್ರಧಾನಿ ನರೇಂದ್ರ ಮೋದಿ, ಜೋ-ಬೈಡೆನ್
ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷ ಜೋ- ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಭಾರತ- ಅಮೆರಿಕ ಸಹಭಾಗಿತ್ವವು ಮೌಲ್ಯಗಳ ವಿನಿಮಯನ್ನು ಆಧರಿಸಿದೆ. ಗಣನೀಯ ಹಾಗೂ ಬಹುಪಕ್ಷೀಯ ದ್ವಿಪಕ್ಷೀಯ ಕಾರ್ಯಸೂಚಿ ಹೊಂದಿದ್ದು, ಜೋ - ಬೈಡೆನ್ ಅವರೊಂದಿಗೆ ಕಾರ್ಯ ನಿರ್ವಹಿಸಲು ಬದ್ಧವಾಗಿರುವುದರೊಂದಿಗೆ ಉಭಯ ದೇಶಗಳ ಸಹಭಾಗಿತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಾಗುವುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
The India-US partnership is based on shared values. We have a substantial and multifaceted bilateral agenda, growing economic engagement and vibrant people to people linkages. Committed to working with President @JoeBiden to take the India-US partnership to even greater heights.
— Narendra Modi (@narendramodi) January 20, 2021
ಸಾಮಾನ್ಯ ಸವಾಲುಗಳನ್ನು ಎದುರಿಸಲು ಮತ್ತು ಜಾಗತಿಕ ಶಾಂತಿ ಮತ್ತು ಸುರಕ್ಷತೆಯನ್ನು ಮುನ್ನಡೆಸುವಲ್ಲಿ ನಾವು ಒಗ್ಗಟ್ಟಿನಿಂದ ನಿಂತಿದ್ದು, ಅಮೆರಿಕವನ್ನು ಯಶಸ್ವಿಯಾಗಿ ಮುನ್ನಡೆಸಲಿ ಎಂದು ಹಾರೈಸುವುದಾಗಿ ಹೇಳಿರುವ ಪ್ರಧಾನಿ ಮೋದಿ, ಜೋ- ಬೈಡೆನ್ ಅವರೊಂದಿಗೆ ಕಾರ್ಯ ನಿರ್ವಹಿಸುವುದರೊಂದಿಗೆ ಉಭಯ ದೇಶಗಳ ಕಾರ್ಯತಂತ್ರ ಪಾಲುದಾರಿಕೆಯನ್ನು ಸದೃಢಗೊಳಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಕಮಲ್ಯಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದದ್ದು ಐತಿಹಾಸಿಕ ಸಮಾರಂಭವಾಗಿದೆ. ಅವರೊಂದಿಗೆ ಸಂವಾದಿಸುವ ಮೂಲಕ ಭಾರತ- ಅಮೆರಿಕಾ ಸಂಬಂಧವನ್ನು ಬಲಪಡಿಸಲಾಗುವುದು, ಭಾರತ- ಅಮೆರಿಕ ಸಹಭಾಗಿತ್ವವು ವಿಶ್ವಕ್ಕೆ ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.
Congratulations to @KamalaHarris on being sworn-in as @VP. It is a historic occasion. Looking forward to interacting with her to make India-USA relations more robust. The India-USA partnership is beneficial for our planet.
— Narendra Modi (@narendramodi) January 20, 2021