ವಾಷಿಂಗ್ಟನ್ ನಲ್ಲಿ ಇಂದು ಬೈಡನ್-ಕಮಲಾ ಪದಗ್ರಹಣ ಸಮಾರಂಭ: ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ನೂತನ ಅಧ್ಯಕ್ಷರ ಆಯ್ಕೆಗೆ ತೀವ್ರ ಆಕ್ರೋಶ, ಕಾನೂನು ಹೋರಾಟದ ಜಟಾಪಟಿ ನಂತರ ಕೊನೆಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ಅಧ್ಯಕ್ಷ ಜೊ ಬೈಡನ್ ಅವರ ಪದಗ್ರಹಣ ಸಮಾರಂಭಕ್ಕೆ ಶುಭ ಕೋರಿದ್ದಾರೆ.

Published: 20th January 2021 09:05 AM  |   Last Updated: 20th January 2021 12:38 PM   |  A+A-


Donald Trump and Joe Biden

ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನೂತನ ಅಧ್ಯಕ್ಷ ಜೊ ಬೈಡನ್

Posted By : Sumana Upadhyaya
Source : AFP

ವಾಷಿಂಗ್ಟನ್: ನೂತನ ಅಧ್ಯಕ್ಷರ ಆಯ್ಕೆಗೆ ತೀವ್ರ ಆಕ್ರೋಶ, ಕಾನೂನು ಹೋರಾಟದ ಜಟಾಪಟಿ ನಂತರ ಕೊನೆಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ಅಧ್ಯಕ್ಷ ಜೊ ಬೈಡನ್ ಅವರ ಪದಗ್ರಹಣ ಸಮಾರಂಭಕ್ಕೆ ಶುಭ ಕೋರಿದ್ದಾರೆ.

ಕಳೆದೊಂದು ವಾರದಿಂದ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸದೆ, ಮೌನವಾಗಿ ಉಳಿದಿದ್ದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಯ ಬಾರಿಗೆ ನಿನ್ನೆ ವಿದಾಯದ ಮಾತುಗಳನ್ನಾಡಿದ್ದಾರೆ. ಅದನ್ನು ಇಂದು ಶ್ವೇತಭವನ ಪ್ರಸಾರ ಮಾಡಲಿದೆ.

ಹೊಸದಾಗಿ ಆಡಳಿತ ನಡೆಸುತ್ತಿರುವ ಜೊ ಬೈಡನ್ ಅವರಿಗೆ ಒಳ್ಳೆಯದಾಗಲಿ, ಉತ್ತಮ ಆಡಳಿತ ನೀಡಲಿ ಎಂದು ಅಮೆರಿಕನ್ನರು ಪ್ರಾರ್ಥಿಸಿ ಎಂದು ಹೇಳಿದ್ದಾರೆಂದು ಶ್ವೇತಭವನ ಮೂಲಗಳು ತಿಳಿಸಿವೆ. ಡೊನಾಲ್ಡ್ ಟ್ರಂಪ್ ಅವರು ಇನ್ನೂ ಜೊ ಬೈಡನ್ ಅವರಿಗೆ ವೈಯಕ್ತಿಕವಾಗಿ ಅಭಿನಂದಿಸಬೇಕಷ್ಟೆ ಮತ್ತು ತಾವು ನಿರ್ಗಮಿಸುತ್ತಿರುವ ಸಂದರ್ಭದಲ್ಲಿ ಸಾಂಪ್ರದಾಯಿಕ ಚಹಾ ಕೂಟಕ್ಕೆ ಬೈಡನ್ ಅವರನ್ನು ಆಹ್ವಾನಿಸಬೇಕಿದೆ.

ಇಂದು ಡೊನಾಲ್ಡ್ ಟ್ರಂಪ್ ಅವರು ಜಂಟಿ ಬೇಸ್ ಆಂಡ್ರ್ಯೂಸ್‌ನಿಂದ ಫ್ಲೋರಿಡಾಕ್ಕೆ ಹೋಗುವ ಮೊದಲು ಕ್ಷಮೆಯಾಚಿಸುವ ನಿರೀಕ್ಷೆಯಿದೆ, ಶ್ವೇತಭವನದ ಭದ್ರ ಕೋಟೆಯ ಹೊರಗೆ, ಮಧ್ಯ ವಾಷಿಂಗ್ಟನ್ ಬೈಡನ್ ಉದ್ಘಾಟನೆಗೆ ಮುಂಚಿತವಾಗಿ ಭೀತಿಯ, ಆತಂಕದ ವಾತಾವರಣ, ನೋಟವನ್ನು ಪಡೆದುಕೊಂಡಿದೆ, ಸೇನಾಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ನಿನ್ನೆ ತಮ್ಮ ತವರೂರು ವಿಲ್ಮಿಂಗ್ಟನ್ ನ ಡೆಲವರೆಗೆ ತೆರಳಿದ್ದ ಜೊ ಬೈಡನ್ ಅವರು ತವರು ನೆಲ ಕಂಡಾಗ ಭಾವಪರವಶರಾದರು. ಅಲ್ಲಿ ತಮ್ಮ ನಿಧನ ಹೊಂದಿದ ಪುತ್ರನ ಸಮಾಧಿಗೆ ಗೌರವ ನಮನ ಸಲ್ಲಿಸಿದ ಬೈಡನ್ ಕಣ್ಣುಗಳಿಂದ ಅವರಿಗೆ ಅರಿವಿಲ್ಲದಂತೆ ಕಣ್ಣೀರು ಹರಿದುಬಂತು. ಅಲ್ಲಿಂದ ನೇರವಾಗಿ ವಾಷಿಂಗ್ಟನ್ ಗೆ ವಿಮಾನ ಹತ್ತಿದರು.

'ನಾನಿಂದು ಅತ್ಯಂತ ಭಾವುಕನಾಗಿದ್ದೇನೆ. ನಾನು ಸತ್ತಾಗ ಡೆಲವರೆ ನನ್ನ ಹೃದಯದಲ್ಲಿ ಬರೆದಿರುತ್ತದೆ. ನನಗೆ ಇರುವುದು ಒಂದೇ ಒಂದು ವಿಷಾದ, ನನ್ನ ಮಗ ಇಂದು ಇಲ್ಲ ಎನ್ನುವುದು, ಅವನನ್ನು ನಾವಿಂದು ಅಮೆರಿಕ ಅಧ್ಯಕ್ಷ ಎಂದು ಪರಿಚಯಿಸಬೇಕಾಗಿತ್ತು' ಎಂದು ಜೊ ಬೈಡನ್ ಭಾವಪರವಶರಾಗಿ ನಿನ್ನೆ ನುಡಿದಿದ್ದರು.

ಕೋವಿಡ್-19 ನಿರ್ಬಂಧದ ನಡುವೆ ಇಂದು ಜೊ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರ ಪದಗ್ರಹಣ ಸ್ವೀಕಾರ ಸಮಾರಂಭ ನಡೆಯಲಿದೆ. ಕಳೆದ ಜನವರಿ 6ರಂದು ಟ್ರಂಪ್ ಪರ ಬೆಂಬಲಿಗರು ರಾಜಧಾನಿ ವಾಷಿಂಗ್ಟನ್ ನಲ್ಲಿ ನಡೆಸಿರುವ ಗಲಭೆಯಿಂದ ತೀವ್ರ ಭಯದ ವಾತಾವರಣ ನಿರ್ಮಾಣವಾಗಿದೆ. ಬಲಪಂಥೀಯರು ದಾಳಿ ನಡೆಸುವ ಭೀತಿಯಿಂದ ಸೇನಾಪಡೆಗಳನ್ನು ನಿಯೋಜಿಸಲಾಗಿದ್ದು, ಕಾಂಕ್ರೀಟ್ ತಡೆಗೋಡೆಗಳನ್ನು ರಚಿಸಲಾಗಿದೆ. ಭದ್ರತೆಯ ಪ್ರದೇಶಗಳನ್ನು ಹಸಿರು ಮತ್ತು ಕೆಂಪು ವಲಯಗಳೆಂದು ಗುರುತಿಸಲಾಗಿದೆ.

ಈ ಎಲ್ಲಾ ಗೊಂದಲಗಳ ಮಧ್ಯೆ, ಸೆನೆಟ್ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಸದ್ಯದಲ್ಲಿಯೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ರಾಜಧಾನಿಯಲ್ಲಿನ ಗಲಭೆಗೆ ಸಂಬಂಧಿಸಿದಂತೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡನೆ ಬಾರಿ ದೋಷಾರೋಪಣೆ ಸಲ್ಲಿಸಿದ್ದು ಇದಕ್ಕೆ ಕಾರಣವಾಗಿದೆ.

ಬೈಡನ್-ಕಮಲಾ ಪ್ರಮಾಣವಚನ: ಡೆಮಾಕ್ರಟಿಕ್ ಪಕ್ಷದ ಹಿರಿಯ ಸೆನೆಟರ್ ಆದ ಜೊ ಬೈಡನ್ ಹಿಂದೆ ಬರಾಕ್ ಒಬಾಮಾ ಆಡಳಿತದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಈಗಾಗಲೇ ವಾಷಿಂಗ್ಟನ್ ಗೆ ತಮ್ಮ ಪತ್ನಿ ಜಿಲ್ಲ್ ಬೈಡನ್ ಜೊತೆ ಆಗಮಿಸಿದ್ದಾರೆ.

ಭಾರತ ಮೂಲದ ಪ್ರಪ್ರಥಮ ಮಹಿಳಾ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp