ಶ್ವೇತ ಭವನದಿಂದ ನಿರ್ಗಮಿಸಿದ ನಂತರ ಮಾರ್-ಎ-ಲಾಗೊ ಎಸ್ಟೇಟ್ ನಲ್ಲಿ ಡೊನಾಲ್ಡ್ ಟ್ರಂಪ್ ಖಾಯಂ ವಾಸ್ತವ್ಯ
ಅಮೆರಿಕಾದಲ್ಲಿ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅಧ್ಯಕ್ಷ-ಉಪಾಧ್ಯಕ್ಷರಾಗಿ ಜ.20 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಹೊಸ ಆಡಳಿತ ಅಸ್ತಿತ್ವಕ್ಕೆ ಬರಲಿದೆ.
Published: 20th January 2021 06:21 PM | Last Updated: 20th January 2021 07:07 PM | A+A A-

ಮಾರ್-ಎ-ಲಾಗೊ ಎಸ್ಟೇಟ್
ಫ್ಲೋರಿಡಾ: ಅಮೆರಿಕಾದಲ್ಲಿ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅಧ್ಯಕ್ಷ-ಉಪಾಧ್ಯಕ್ಷರಾಗಿ ಜ.20 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಹೊಸ ಆಡಳಿತ ಅಸ್ತಿತ್ವಕ್ಕೆ ಬರಲಿದೆ.
ಈ ನಡುವೆ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತ ಭವನದಿಂದ ನಿರ್ಗಮಿಸಿದ ನಂತರ ಫ್ಲೋರಿಡಾದ ಪಾಮ್ ಬೀಚ್ ಬಳಿ ಇರುವ ಮಾರ್-ಎ-ಲಾಗೊ ಎಸ್ಟೇಟ್ ನಲ್ಲಿ ಖಾಯಂ ವಾಸ್ತವ್ಯ ಹೂಡಲಿದ್ದಾರೆ.
ಶ್ವೇತ ಭವನದಲ್ಲಿ ಅಧಿಕಾರಾವಧಿಯ ಕೊನೆಯ ದಿನವನ್ನು ಕಳೆಯಲಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಸಂಬಂಧಿಸಿದ ಟ್ರಕ್ ಗಳು ಶ್ವೇತ ಭವನದಿಂದ ಪಾಮ್ ಬೀಚ್ ಬಳಿ ಬರಲು ಪ್ರಾರಂಭಿಸಿವೆ.
ಜೋ ಬೈಡನ್ ಪದಗ್ರಹಣಕ್ಕೂ ಕೆಲವೇ ಗಂಟೆಗಳ ಮುನ್ನ ಡೊನಾಲ್ಡ್ ಟ್ರಂಪ್ ಮಾರ್-ಎ-ಲಾಗೊ ಗೆ ಪ್ರಯಾಣ ಬೆಳೆಸಲಿದ್ದಾರೆ.
ಚಳಿಗಾಳದ ಶ್ವೇತ ಭವನವೆಂದೇ ಬಿಂಬಿತವಾಗಿದ್ದ ಈ ಎಸ್ಟೇಟ್ ನಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗಲೂ ಹಲವು ದಿನಗಳನ್ನು ಕಳೆದಿದ್ದರು. ಡೊನಾಲ್ಡ್ ಟ್ರಂಪ್ ತಮ್ಮ ಅಧಿಕೃತ ನಿವಾಸವನ್ನು 2019 ರಲ್ಲಿ ನ್ಯೂಯಾರ್ಕ್ ನಗರದ ಟ್ರಂಪ್ ಟವರ್ ನಿಂದ ಮಾರ್-ಎ-ಲಾಗೊ ಗೆ ಸ್ಥಳಾಂತರಿಸಿದ್ದರು.
1985 ರಲ್ಲಿ ಡೊನಾಲ್ಡ್ ಟ್ರಂಪ್ ಈ ಮ್ಯಾನ್ಷನ್ ನ್ನು 10 ಮಿಲಿಯನ್ ಡಾಲರ್ ಗೆ ಖರೀದಿಸಿದ್ದರು. ಸುಮಾರು 20 ಎಕರೆ ಪ್ರದೇಶದಲ್ಲಿ ಈ ಎಸ್ಟೇಟ್ ಇದ್ದು 128 ಕೊಠಡಿಗಳನ್ನು ಹೊಂದಿದೆ.