ಅಮೆರಿಕದಲ್ಲಿ ಜೊ ಬೈಡನ್ ದರ್ಬಾರು ಆರಂಭ: ಭಾರತ ಏನು ನಿರೀಕ್ಷಿಸಬಹುದು, ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಬಹುದೇ?
ಅಮೆರಿಕದ ನೂತನ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಪರ್ವ ಆರಂಭವಾಗಿದೆ. ಈ ಸಂದರ್ಭದಲ್ಲಿ ಭಾರತದ ಜೊತೆಗೆ ಅಮೆರಿಕ ಸಂಬಂಧ ಹೇಗಿರಬಹುದು, ಯಾವ ರೀತಿ ಸಹಕಾರ ಸಿಗಬಹುದು, ಬದಲಾವಣೆ ಆಗಬಹುದು ಎಂಬ ಕುತೂಹಲ ದೇಶ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತದೆ.
Published: 21st January 2021 11:05 AM | Last Updated: 21st January 2021 12:42 PM | A+A A-

ಅಮೆರಿಕ ಅಧ್ಯಕ್ಷ ಜೊ ಬೈಡನ್, ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ನವದೆಹಲಿ: ಅಮೆರಿಕದ ನೂತನ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಪರ್ವ ಆರಂಭವಾಗಿದೆ. ಈ ಸಂದರ್ಭದಲ್ಲಿ ಭಾರತದ ಜೊತೆಗೆ ಅಮೆರಿಕ ಸಂಬಂಧ ಹೇಗಿರಬಹುದು, ಯಾವ ರೀತಿ ಸಹಕಾರ ಸಿಗಬಹುದು, ಬದಲಾವಣೆ ಆಗಬಹುದು ಎಂಬ ಕುತೂಹಲ ದೇಶ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತದೆ.
ಚೀನಾ ದೇಶದಿಂದ ಸದ್ಯ ಅಮೆರಿಕ-ಭಾರತ ಎರಡೂ ದೇಶಗಳಿಗೂ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಈ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ಮತ್ತಷ್ಟು ಹತ್ತಿರವಾಗಬಹುದು ಎಂದು ಮಾಜಿ ರಾಯಭಾರಿಗಳು, ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅಮೆರಿಕದ ನೂತನ ಕಾರ್ಯದರ್ಶಿಯಾಗಿ ಬೈಡನ್ ಅವರು ಸೂಚಿಸುತ್ತಿರುವ ಆಂಟೊನಿ ಬ್ಲಿಂಕನ್, ಅವರು ಕಳೆದ ಮಂಗಳವಾರ ಚೀನಾದ ಜೊತೆಗೆ ಇನ್ನಷ್ಟು ಕಠಿಣ ಕ್ರಮವನ್ನು ನಮ್ಮ ಸರ್ಕಾರ ಹೇರಲಿದ್ದು, ಉಭಯಪಕ್ಷೀಯ ಯಶಸ್ಸಿನ ಕಥೆಯಾಗಿ ಭಾರತವಿದೆ ಎಂದು ಹೇಳಿದ್ದಾರೆ.
ಮಾಜಿ ರಾಯಭಾರಿ ಅರುಣ್ ಸಿಂಗ್ ಅವರು 2015-16ರಲ್ಲಿ ಅಮೆರಿಕದ ಭಾರತೀಯ ರಾಯಭಾರಿಯಾಗಿದ್ದರು. ಚೀನಾದಿಂದ ಭಾರತ ಎದುರಿಸುತ್ತಿರುವ ಸವಾಲುಗಳು ಮತ್ತು ಕಮ್ಯುನಿಸ್ಟ್ ರಾಷ್ಟ್ರದ ಆರ್ಥಿಕ, ತಾಂತ್ರಿಕ ಮತ್ತು ಮಿಲಿಟರಿ ಏರಿಕೆಯಿಂದ ಅಮೆರಿಕ ನೋಡುವ ಬೆದರಿಕೆ ಖಂಡಿತವಾಗಿಯೂ ಉಭಯ ದೇಶಗಳಿಗೆ ಹೆಚ್ಚು ಒಟ್ಟಾಗಿ ಕೆಲಸ ಮಾಡಲು ಇನ್ನಷ್ಟು ಹತ್ತಿರ ಬರಲು ಸಹಾಯವಾಗುತ್ತದೆ ಎಂದಿದ್ದಾರೆ.
ವಿವಿಧ ಪ್ರದೇಶಗಳಲ್ಲಿ, ವಿಶೇಷವಾಗಿ ಇಂಡೋ-ಪೆಸಿಫಿಕ್ ನಲ್ಲಿ ಉಭಯ ದೇಶಗಳ ನಡುವಿನ ಆಸಕ್ತಿಯ ಒಮ್ಮುಖದೊಂದಿಗೆ, ಸಹಕಾರವು ಬಲಗೊಳ್ಳುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಅರುಣ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಮುಖ ಥಿಂಕ್-ಟ್ಯಾಂಕ್ ಗೇಟ್ವೇ ಹೌಸ್ನ ವಿಶೇಷ ಸಹವರ್ತಿ ರಾಯಭಾರಿ ರಾಜೀವ್ ಭಾಟಿಯಾ, ಕಳೆದ 20 ವರ್ಷಗಳಲ್ಲಿ ಸಾಕ್ಷಿಯಾದ ಒಟ್ಟಾರೆ ಸಂಬಂಧಗಳಲ್ಲಿ ಮುಂದೆ ಸಾಗುವ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆ ಜೊ ಬೈಡನ್ ಆಡಳಿತದಲ್ಲಿ ನಿರೀಕ್ಷಿಸಹುದು ಎಂದಿದ್ದಾರೆ.
ಆದರೆ ಮುಂಬರುವ ತಿಂಗಳುಗಳಲ್ಲಿ ಅಮೆರಿಕದ ಏಷ್ಯಾ ನೀತಿ ಮತ್ತು ಚೀನಾ ನೀತಿ ನಿಜವಾಗಿ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ನಾವು ನೋಡಬೇಕಾಗಿದೆ. ಏಕೆಂದರೆ ಈ ಎರಡು ನಿರ್ದಿಷ್ಟ ನೀತಿಗಳ ಬಗ್ಗೆ ಸಾಕಷ್ಟು ಅನಿಶ್ಚಿತತೆ ಇದೆ ಮತ್ತು ಅವುಗಳ ಪರಸ್ಪರ ಕ್ರಿಯೆಯು ಭಾರತ-ಅಮೆರಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಕಾದು ನೋಡಬೇಕು, ರಕ್ಷಣಾ ಮತ್ತು ಭದ್ರತಾ ಸಹಕಾರ ಹೆಚ್ಚಾಗುತ್ತದೆ ಎಂದು ನಾವು ಖಂಡಿತವಾಗಿ ನಿರೀಕ್ಷಿಸಬಹುದು ಎಂದು ರಾಜೀವ್ ಭಾಟಿಯಾ ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಚೀನಾ ಹಲವು ದೇಶಗಳ ಬಗ್ಗೆ ಹೊಂದಿರುವ ಧೋರಣೆ, ಕ್ರಮಗಳ ಬಗ್ಗೆ ಜೊ ಬೈಡನ್ ಕಳವಳ, ಆತಂಕ ವ್ಯಕ್ತಪಡಿಸಿದ್ದರು. ಭಾರತ ಮತ್ತು ಅಮೆರಿಕ ತಮ್ಮ ಹಿತಾಸಕ್ತಿಗಳಿಗೆ ತಕ್ಕಂತೆ ವರ್ತಿಸುತ್ತವೆ. ಏಷ್ಯಾದ ಹಲವಾರು ದೇಶಗಳು ಚೀನಾದ ಒತ್ತಡವನ್ನು ಎದುರಿಸುತ್ತಿವೆ. ಕ್ಸಿ ಜಿನ್ಪಿಂಗ್ ಯುಗದಲ್ಲಿ ಇದು ವಿಚಿತ್ರ ವಿದ್ಯಮಾನವಾಗಿದೆ. ಸತ್ಯವೆಂದರೆ ಭಾರತ ಅಥವಾ ಯುಎಸ್ ಎರಡೂ ನನ್ನ ದೃಷ್ಟಿಯಲ್ಲಿ ಚೀನಾದೊಂದಿಗೆ ಉದ್ವಿಗ್ನ ಸಂಬಂಧವನ್ನು ಬಯಸುವುದಿಲ್ಲ ಆದರೆ ಅವರು ತಮ್ಮ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಕಾರ್ಯತಂತ್ರ ವ್ಯವಹಾರಗಳ ತಜ್ಞ ಜಿ ಪಾರ್ಥಸಾರಥಿ ಹೇಳುತ್ತಾರೆ.
ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಂಬಂಧಗಳ ವಿಶಾಲ ದಿಕ್ಕು ಒಂದೇ ಆಗಿರುತ್ತದೆ ಮತ್ತು ಅವರ ಸಹಕಾರವು ಮತ್ತಷ್ಟು ವೇಗವನ್ನು ಪಡೆಯುತ್ತದೆ ಎಂದು ಸೇನೆಯ ಮಾಜಿ ಲೆಫ್ಟಿನೆಂಟ್ ಜನರಲ್ ಸುಬ್ರತ ಸಹ ಹೇಳುತ್ತಾರೆ.