ಅಮೆರಿಕದ ನೂತನ ಅಧ್ಯಕ್ಷರಾಗಿ ಜೊ ಬೈಡನ್ ಅಧಿಕಾರ ಸ್ವೀಕಾರ: ಪ್ರಮಾಣ ವಚನ ದಿನದ ಹೈಲೈಟ್ಸ್
ಜನವರಿ 20, 2021ನೇ ಇಸವಿ, ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ರೊಬಿನೆಟ್ಟ್(ಜೊ) ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ನಾಲ್ಕು ವರ್ಷಗಳ ಡೊನಾಲ್ಡ್ ಟ್ರಂಪ್ ಆಡಳಿತ ಕೊನೆಗೊಂಡಿದೆ.
Published: 21st January 2021 08:52 AM | Last Updated: 21st January 2021 09:01 AM | A+A A-

ಜೊ ಬೈಡನ್
ವಾಷಿಂಗ್ಟನ್: ಜನವರಿ 20, 2021ನೇ ಇಸವಿ, ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ರೊಬಿನೆಟ್ಟ್(ಜೊ) ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ನಾಲ್ಕು ವರ್ಷಗಳ ಡೊನಾಲ್ಡ್ ಟ್ರಂಪ್ ಆಡಳಿತ ಕೊನೆಗೊಂಡಿದೆ.
ನಿನ್ನೆ ಜೊ ಬೈಡನ್ ಅವರು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದಲು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ಅಧ್ಯಕ್ಷರಿಗೆ ಯಶಸ್ಸು ಕಾಣಿ ಎಂದು ಹಾರೈಸಿ ಹೊರನಡೆದಿದ್ದಾರೆ. ಅಮೆರಿಕ ಅಧ್ಯಕ್ಷೀಯ ಇತಿಹಾಸದಲ್ಲಿ ಮತ್ತೊಬ್ಬ ದೋಷಾರೋಪ ಹೊತ್ತಿದ್ದ ಅಧ್ಯಕ್ಷ ಆಂಡ್ರ್ಯೂ ಜಾನ್ಸನ್ 1869ರಲ್ಲಿ ನೂತನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದರು. ಅದಾದ ಬಳಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾದ ಎರಡನೇ ನಿರ್ಗಮಿತ ಅಧ್ಯಕ್ಷರೇ ಡೊನಾಲ್ಡ್ ಟ್ರಂಪ್.
ಮೊನ್ನೆ ಮಂಗಳವಾರ ಹೊತ್ತಿಗೆ ಅಮೆರಿಕದಲ್ಲಿ ಕೋವಿಡ್-19ಗೆ 4 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಈ ಮಧ್ಯೆಯೇ ನೂತನ ಅಧ್ಯಕ್ಷರ ಪ್ರಮಾಣ ವಚನ ನಡೆದಿದೆ. ನೂತನ ಅಧ್ಯಕ್ಷರು ಶ್ವೇತಭವನದ ಆಡಳಿತಕ್ಕೆ ಹೊಸ ದಿಕ್ಕು ಕಲ್ಪಿಸುವ ನಿರೀಕ್ಷೆಯಿದೆ.ಡೊನಾಲ್ಡ್ ಟ್ರಂಪ್ ನಿರ್ಗಮನದೊಂದಿಗೆ ಅವರು ನೇಮಿಸಿಕೊಂಡಿದ್ದ ಸುಮಾರು 4 ಸಾವಿರ ರಾಜಕೀಯ ಸಹಾಯಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರ ಸ್ಥಾನಕ್ಕೆ ಇದೀಗ ಜೊ ಬೈಡನ್ ಅವರು ನೇಮಿಸುವ ತಂಡ ಬರಲಿದೆ. ಇಡೀ ಪ್ರಕ್ರಿಯೆ ಮುಗಿಯಲು ಕೆಲ ಸಮಯ ಹಿಡಿಯಬಹುದು.
ನಿನ್ನೆ ಜೊ ಬೈಡನ್ ಅವರ ಅಧ್ಯಕ್ಷೀಯ ಪದಗ್ರಹಣ ದಿನ ಏನಾಯಿತು ಎಂದು ನೋಡುವುದಾದರೆ:
ಬೈಡನ್ ಬಗ್ಗೆ ಬರಹ: ಸಾಮಾನ್ಯವಾಗಿ ನಿರ್ಗಮಿತ ಅಧ್ಯಕ್ಷರು ಶ್ವೇತ ಭವನ ತೊರೆದು ಹೋಗುವಾಗ ನೂತನ ಅಧ್ಯಕ್ಷರನ್ನುದ್ದೇಶಿಸಿ ಏನಾದರೂ ಬರಹವೊಂದನ್ನು ಬರೆಯುತ್ತಾರೆ. ನಿನ್ನೆ ಡೊನಾಲ್ಡ್ ಟ್ರಂಪ್ ಅವರು ಸಹ ಜೊ ಬೈಡನ್ ಬಗ್ಗೆ ಬರೆದು ಹೋಗಿದ್ದರು. ಆದರೆ ಅದು ಏನು ಎಂದು ಬಹಿರಂಗಪಡಿಸಲು ಶ್ವೇತಭವನದ ಪತ್ರಿಕಾ ಉಪ ಕಾರ್ಯದರ್ಶಿ ನಿರಾಕರಿಸಿದ್ದಾರೆ.
ಬೈಡನ್ ಕೊನೆಯ ಟ್ವೀಟ್: ಅಧ್ಯಕ್ಷ ಹುದ್ದೆ ಸ್ವೀಕರಿಸುವುದಕ್ಕೆ ಮುನ್ನ ಜೊ ಬೈಡನ್ ಹೇಳಿದ ಮಾತು, ಅಮೆರಿಕದಲ್ಲಿ ಇದು ಹೊಸ ದಿನ.
ಮಾಜಿ ಅಧ್ಯಕ್ಷರು ಆಗಮನ: ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಒಬಾಮಾ ನಿನ್ನೆ ವಾಷಿಂಗ್ಟನ್ ಗೆ ಸಮಾರಂಭಕ್ಕೆ ಆಗಮಿಸಿದ್ದರು. ಅವರ ಜೊತೆ ಕ್ಲಿಂಟನ್ ಮತ್ತು ಬುಷ್ ಕುಟುಂಬ ಕೂಡ ಸೇರಿತ್ತು.
ಜೊ ಬೈಡನ್ ಆಗಮನ: ಉದ್ಘಾಟನಾ ಕಾರ್ಯಕ್ರಮಕ್ಕೆ ನೂತನ ಅಧ್ಯಕ್ಷ ಜೊ ಬೈಡನ್ ತಮ್ಮ ಪತ್ನಿ ಜತೆ ಆಗಮನ.
ಸುಪ್ರೀಂ ಕೋರ್ಟ್ ಗೆ ಬಾಂಬ್ ಬೆದರಿಕೆ: ಜೊ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕಾರಕ್ಕೆ ಕೆಲ ನಿಮಿಷಗಳು ಬಾಕಿ ಇರುವಂತೆಯೇ ಅಮೆರಿಕದ ಸುಪ್ರೀಂಕೋರ್ಟ್ಗೆ ಬಾಂಬ್ ಬೆದರಿಕೆ ಕರೆ ಬಂದು ಆಂತಕ ಸೃಷ್ಟಿ.
ಕಮಲಾ ಹ್ಯಾರಿಸ್ ಆಗಮನ: ಪತಿ ಡೌಗ್ ಎಮ್ಹಾಫ್ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಪಾಪ್ ಗಾಯಕಿ ಲೇಡಿ ಗಾಗಾರಿಂದ ರಾಷ್ಟ್ರಗೀತೆ ಪಠಣ.