ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಬ್ರೇಕ್: ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅಮೆರಿಕ ಮರು ಸೇರ್ಪಡೆ, ಅಧ್ಯಕ್ಷರಾದ ತಕ್ಷಣ ಜೊ ಬೈಡನ್ ಸಹಿ!

ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಹೊತ್ತಿನ ನಂತರ ಜೊ ಬೈಡನ್ ಅವರು ಮಾಡಿರುವ ಮೊದಲ ಕೆಲಸ ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ್ದು. ಈ ಕುರಿತು ಆಡಳಿತಾತ್ಮಕ ಆದೇಶವನ್ನು ಹೊರಡಿಸಿದರು.

Published: 21st January 2021 09:29 AM  |   Last Updated: 21st January 2021 12:43 PM   |  A+A-


President Joe Biden signs his first executive order in the Oval Office of the White House.

ಅಧಿಕಾರ ವಹಿಸಿಕೊಂಡ ನಂತರ ಶ್ವೇತಭವನದಲ್ಲಿ ಹವಾಮಾನ ಬದಲಾವಣೆ ಆದೇಶಕ್ಕೆ ಸಹಿ ಹಾಕಿರುವುದು

Posted By : Sumana Upadhyaya
Source : ANI

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಹೊತ್ತಿನ ನಂತರ ಜೊ ಬೈಡನ್ ಅವರು ಮಾಡಿರುವ ಮೊದಲ ಕೆಲಸ ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ್ದು. ಈ ಕುರಿತು ಆಡಳಿತಾತ್ಮಕ ಆದೇಶವನ್ನು ಹೊರಡಿಸಿದರು.

ನಿನ್ನೆ ಶ್ವೇತಭವನದಲ್ಲಿ ಈ ಕುರಿತು ಸಹಿ ಹಾಕಿದ ಜೊ ಬೈಡನ್, ಜಾಗತಿಕ ಹವಾಮಾನ ತಾಪಮಾನ ಏರಿಕೆಯನ್ನು ತಡೆಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳು ನಡೆಸುತ್ತಿರುವ ಪ್ರಯತ್ನಗಳಿಗೆ ಅಮೆರಿಕದ ನೆರವು, ಸಹಕಾರವಿದೆ ಎಂದು ಜೊ ಬೈಡನ್ ಘೋಷಿಸಿದರು. ಇದು ಜಾರಿಗೆ ಬರಲು ಒಂದು ತಿಂಗಳು ಬೇಕು. 

 ಹವಾಮಾನ ಬದಲಾವಣೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದವನ್ನು ಹೊಂದಿರುವ ಕಾನೂನುಬದ್ಧ ಒಪ್ಪಂದ ಪ್ಯಾರಿಸ್ ಒಪ್ಪಂದವಾಗಿದ್ದು 2015ರ ಡಿಸೆಂಬರ್ ನಲ್ಲಿ 196 ದೇಶಗಳು ಅಳವಡಿಸಿಕೊಂಡು ಮರುವರ್ಷ 2016ರ ನವೆಂಬರ್ 4ರಂದು ಒಪ್ಪಂದಕ್ಕೆ ಒಳಪಟ್ಟವು. 

ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನದ ಮಟ್ಟವನ್ನು 2 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಅಂದರೆ 1.5 ಡಿಗ್ರಿ ಸೆಲ್ಸಿಯಸ್ ವರೆಗೆ ಮಿತಿಗೊಳಿಸುವುದು, ಹಸಿರುಮನೆ ಅನಿಲ ಹೊರಹಾಕುವ ಗುರಿಯನ್ನು ತಲುಪುವುದು ಇದರ ಉದ್ದೇಶವಾಗಿದೆ.

ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಜೊ ಬೈಡನ್ ನಂತರ ಟ್ವೀಟ್ ಮಾಡಿ, ಇಂದು ಮಧ್ಯಾಹ್ನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸುವುದು, ಆರ್ಥಿಕ ಪರಿಹಾರ ನೀಡುವುದು, ಹವಾಮಾನ ಬದಲಾವಣೆಯನ್ನು ನಿಭಾಯಿಸುವ, ಲಿಂಗ ಸಮಾನತೆ ತರುವ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ ಎಂದು ತಿಳಿಸಿದ್ದಾರೆ.

ವಿವಾದಾತ್ಮಕ ಕೀಸ್ಟೋನ್ ಎಕ್ಸ್‌ಎಲ್ ಪೈಪ್‌ಲೈನ್ ನಿರ್ಮಾಣವನ್ನು ನಿಲ್ಲಿಸುವ ಕಾರ್ಯಕಾರಿ ಆದೇಶಕ್ಕೆ ಸಹ ಅಧ್ಯಕ್ಷರು ಸಹಿ ಹಾಕಿದರು, ಇದು ಆಲ್ಬರ್ಟಾದಿಂದ ಟೆಕ್ಸಾಸ್ ಗಲ್ಫ್ ಕರಾವಳಿಗೆ ದಿನಕ್ಕೆ ಸುಮಾರು 800,000 ಬ್ಯಾರೆಲ್ ತೈಲವನ್ನು ಸಾಗಿಸುವ ಯೋಜನೆಯಾಗಿತ್ತು. ಇದು ಮೊಂಟಾನಾ, ದಕ್ಷಿಣ ಡಕೋಟಾ, ನೆಬ್ರಸ್ಕಾ, ಕಾನ್ಸಾಸ್ ಮತ್ತು ಒಕ್ಲಹೋಮ ಮೂಲಕ ಹಾದುಹೋಗುತ್ತದೆ.

ಹಿಂದಿನ ನಿಕಟವರ್ತಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಹೊರಡಿಸಿದ್ದ ಪ್ರಮುಖ ಈ ಎರಡು ಆದೇಶಗಳಿಗೆ ಜೊ ಬೈಡನ್ ತಡೆಯೊಡ್ಡಿದಂತಾಗಿದೆ. 

Stay up to date on all the latest ಅಂತಾರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp