ಅಮೆರಿಕ ಪ್ರವೇಶಿಸುವವರು ಕೋವಿಡ್ ಪರೀಕ್ಷೆ ನಡೆಸಿ ಕ್ವಾರಂಟೈನ್ ಗೆ ಒಳಪಡುವುದು ಕಡ್ಡಾಯ: ಕೊರೋನಾಗೆ '100 ದಿನಗಳ ಮಾಸ್ಕ್ ಚಾಲೆಂಜ್'!
ಕೋವಿಡ್-19 ಸವಾಲುಗಳಿಗೆ ಅಮೆರಿಕ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜೊ ಬೈಡನ್ ಕೋವಿಡ್-19ಗೆ ಸಂಬಂಧಪಟ್ಟ ಹಲವು ಆಡಳಿತಾತ್ಮಕ ಆದೇಶಗಳಿಗೆ ಸಹಿ ಹಾಕಿದ್ದಾರೆ.
Published: 22nd January 2021 08:59 AM | Last Updated: 22nd January 2021 12:41 PM | A+A A-

ನಿನ್ನೆ ಶ್ವೇತಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಜೊ ಬೈಡನ್
ವಾಷಿಂಗ್ಟನ್: ಕೋವಿಡ್-19 ಸವಾಲುಗಳಿಗೆ ಅಮೆರಿಕ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜೊ ಬೈಡನ್ ಕೋವಿಡ್-19ಗೆ ಸಂಬಂಧಪಟ್ಟ ಹಲವು ಆಡಳಿತಾತ್ಮಕ ಆದೇಶಗಳಿಗೆ ಸಹಿ ಹಾಕಿದ್ದಾರೆ. ವಿದೇಶಗಳಿಂದ ಅಮೆರಿಕಕ್ಕೆ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡುವ ಮೊದಲು ಕೋವಿಡ್ ಪರೀಕ್ಷೆಯನ್ನು ಮಾಡಿಸಲೇಬೇಕು ಎಂದು ಹೇಳಿದೆ.
ಮಾಸ್ಕ್ ಧರಿಸುವುದು ಮಾತ್ರವಲ್ಲದೆ, ಹೊರದೇಶಗಳಿಂದ ಬರುವ ಪ್ರತಿಯೊಬ್ಬರೂ ವಿಮಾನ ನಿಲ್ದಾಣದಿಂದ ಹೊರಬರುವ ಮುನ್ನ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ನಂತರ ಇಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ಆದೇಶಕ್ಕೆ ಸಹಿ ಹಾಕಿ ಹೇಳಿದರು.
ಕೋವಿಡ್-19 ಸಾಂಕ್ರಾಮಿಕದ ಈ ಸಮಯದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಎಲ್ಲರಿಗೂ ಆರೋಗ್ಯ ಸೇವೆ ದೊರಕಲು, ಔಷಧಿಗಳು, ಲಸಿಕೆಗಳು, ರಕ್ಷಣಾತ್ಮಕ ಸಲಕರಣೆಗಾಗಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ಸರ್ಕಾರ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಯೋಜನೆಯನ್ನು ಆರಂಭಿಸಲಾಗಿದೆ. ಅಮೆರಿಕದಲ್ಲಿ ಇಂದು ಯುದ್ಧದ ವಾತಾವರಣ ನಿರ್ಮಾಣವಾಗಿದೆ, ಅಂದರೆ 4 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್-19ನಿಂದ ಮೃತಪಟ್ಟಿದ್ದಾರೆ, ಇದರ ಸಂಖ್ಯೆ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಮೃತಪಟ್ಟವರಿಗಿಂತ ಅಧಿಕವಾಗಿದೆ, ಹೀಗಾಗಿ ಯುದ್ಧದ ಸನ್ನಿವೇಶ ಎಂದು ಹೇಳಿದೆ ಎಂದು ಜೊ ಬೈಡನ್ ನಿನ್ನೆ ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಮುಂದಿನ ತಿಂಗಳು ಕೋವಿಡ್-19ನಿಂದ ಮೃತಪಟ್ಟವರ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಬಹುದು. ಇದಕ್ಕೆ ಕ್ಷಿಪ್ರವಾಗಿ ಪರಿಹಾರ ಹುಡುಕಲೇ ಬೇಕಾಗಿದೆ. ಅದು ರಾತ್ರಿ ಬೆಳಗಾಗುವುದರೊಳಗೆ ಸಾಧ್ಯವಿಲ್ಲ. ತಿಂಗಳುಗಟ್ಟಲೆ ಬೇಕು. ಈ ಸಾಂಕ್ರಾಮಿಕದ ಸವಾಲಿನಿಂದ ಹೊರಬರುವ ವಿಶ್ವಾಸ ಖಂಡಿತ ಇದೆ ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ತಡೆಯಲು ರಾಷ್ಟ್ರೀಯ ಕಾರ್ಯತಂತ್ರವನ್ನು ವಿಸ್ತಾರವಾಗಿ ಮತ್ತು ವಿಸ್ತೃತವಾಗಿ ರೂಪಿಸಲಾಗಿದ್ದು, ಅದು ವಿಜ್ಞಾನ ಮತ್ತು ಸತ್ಯದ ಆಧಾರವಾಗಿದೆಯೇ ಹೊರತು ರಾಜಕೀಯವಾಗಿಲ್ಲ. ಕಚೇರಿಯಲ್ಲಿ ಮೊದಲ 100 ದಿನಗಳಲ್ಲಿ 100 ಮಿಲಿಯನ್ ಹೊಡೆತಗಳನ್ನು ನೀಡುವ ಗುರಿಯನ್ನು ಪೂರೈಸಲು ಆಕ್ರಮಣಕಾರಿ, ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕಾ ಅಭಿಯಾನವನ್ನು ಹೆಚ್ಚಿಸಲಾಗುವುದು ಎಂದು ಬೈಡನ್ ಹೇಳಿದರು.
ಜನರನ್ನು ರಕ್ಷಿಸಲು, ಪರೀಕ್ಷಿಸಲು, ಲಸಿಕೆ ಹಾಕಲು ಮತ್ತು ಆರೈಕೆ ಮಾಡಲು ಅಗತ್ಯವಿರುವ ಎಲ್ಲವನ್ನೂ ತಯಾರಿಸಲು ವೇಗವನ್ನು ನೀಡಲು ಎಲ್ಲಾ ಫೆಡರಲ್ ಏಜೆನ್ಸಿಗಳು ಮತ್ತು ಖಾಸಗಿ ಉದ್ಯಮಗಳನ್ನು ನಿರ್ದೇಶಿಸಲು ರಕ್ಷಣಾ ಉತ್ಪಾದನಾ ಕಾಯ್ದೆ ಮತ್ತು ಲಭ್ಯವಿರುವ ಎಲ್ಲ ಅಧಿಕಾರಿಗಳನ್ನು ಬಳಸಲು ಬಿಡೆನ್ ಕಾರ್ಯನಿರ್ವಾಹಕ ಕ್ರಮಕ್ಕೆ ಇದೇ ಸಂದರ್ಭದಲ್ಲಿ ಸಹಿ ಹಾಕಿದರು.