ವಿಮಾನ ಅಪಘಾತ: ಕ್ಲಬ್ ಅಧ್ಯಕ್ಷ ಸೇರಿದಂತೆ 4 ಫುಟ್‌ಬಾಲ್ ಆಟಗಾರರ ದುರಂತ ಸಾವು

ಲಘು ವಿಮಾನವೊಂದು ಟೇಕ್ ಆಫ್ ವೇಳೆ ಅಪಘಾತಗೀಡಾಗಿದ್ದು, ವಿಮಾನದಲ್ಲಿದ್ದ ಫುಟ್ ಬಾಲ್ ಆಟಗಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Published: 25th January 2021 12:34 AM  |   Last Updated: 25th January 2021 12:34 PM   |  A+A-


Brazilian Flight Accident

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : Reuters

ಸಾವೊ ಪೋಲೊ: ಲಘು ವಿಮಾನವೊಂದು ಟೇಕ್ ಆಫ್ ವೇಳೆ ಅಪಘಾತಗೀಡಾಗಿದ್ದು, ವಿಮಾನದಲ್ಲಿದ್ದ ಫುಟ್ ಬಾಲ್ ಆಟಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತಂಡವನ್ನು ಕರೆದೊಯ್ಯಲು ಸಜ್ಜಾಗಿದ್ದ ಲಘು ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಅಪಘಾತಕ್ಕೆ ಈಡಾಗಿದೆ. ಈ ವೇಳೆ ಪಲ್ಮಾಸ್ ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷ ಮತ್ತು ನಾಲ್ವರು ಆಟಗಾರರು ಸಾವನ್ನಪ್ಪಿದ್ದಾರೆ.  ಮೂಲಗಳ ಪ್ರಕಾರ ಕ್ಲಬ್ ಅಧ್ಯಕ್ಷ ಲೂಕಾಸ್‌ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್‌, ಗುಲೆರ್ಮೆ ನೊಯೆ, ರಣುಲ್‌ ಮತ್ತು ಮಾರ್ಕಸ್ ಮೋಲಿನರಿ ಸಾವಿಗೀಡಾಗಿದ್ದಾರೆ ಎಂದು ಕ್ಲಬ್ ತಿಳಿಸಿದೆ. ದುರಂತದಲ್ಲಿ ಲಘು ವಿಮಾನದ ಪೈಲಟ್‌ ಕೂಡ ಸಾವಿಗೀಡಾಗಿದ್ದಾರೆ.

ಪಲ್ಮಾಸ್‌ನಿಂದ 800 ಕಿಲೋಮೀಟರ್ ದೂರದ ಗೊಯಾನಿಯಾದಲ್ಲಿ ಸೋಮವಾರ ನಡೆಯಲಿದ್ದ ವಿಲಾ ನೋವಾ ತಂಡದ ಎದುರಿನ ಪಂದ್ಯದಲ್ಲಿ ಪಾಲ್ಗೊಳ್ಳಲು ಆಟಗಾರರು ತೆರಳುತ್ತಿದ್ದರು. ಪಲ್ಮಾಸ್‌ ಬಳಿಯ ಕಿರು ವಾಯುನೆಲೆ ಟೆಕಾಟಿನೆನ್ಸ್‌ ಏವಿಯೇಷನ್ ಅಸೋಸಿಯೇಷನ್‌ನಿಂದ ಟೇಕ್ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತು.

ಈ ಹಿಂದೆ 2016ರಲ್ಲಿ ಮೆಡಿಲಿನ್‌ ಹೊರವಲಯದ ಗುಡ್ಡದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ತಂಡವೊಂದರ ಎಲ್ಲ ಆಟಗಾರರು ಅಸುನೀಗಿದ್ದರು. ಗೊಯಾಸ್‌ನಲ್ಲಿ ಎರಡು ವರ್ಷಗಳ ಹಿಂದೆ ಹೆಲಿಕಾಪ್ಟರ್ ಪತನಗೊಂಡ ಕಾರಣ ಬ್ರೆಜಿಲ್ ತಂಡದ ಮಾಜಿ ಫರ್ನಾಂಡೊ ನಿಧನರಾಗಿದ್ದರು.
 

Stay up to date on all the latest ಅಂತಾರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp