ಅಮೆರಿಕ ಪ್ರಯಾಣಕ್ಕೆ ಕೋವಿಡ್-19 ನೆಗಟಿವ್ ವರದಿ ಕಡ್ಡಾಯ
ಅಮೆರಿಕಕ್ಕೆ ಹಾರುವ ಎಲ್ಲಾ ಪ್ರಯಾಣಿಕರು ಕೋವಿಡ್-19 ನೆಗಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ನಿರ್ಗಮನಕ್ಕೆ ಕನಿಷ್ಠ ಮೂರು ದಿನಗಳ ಮೊದಲು ಕೊರೋನಾ ಪರೀಕ್ಷೆಯ ವರದಿ ಪಡೆದುಕೊಂಡಿರಬೇಕು ಅಮೆರಿಕ ಸರ್ಕಾರ ಹೇಳಿದೆ.
Published: 26th January 2021 04:12 PM | Last Updated: 26th January 2021 04:12 PM | A+A A-

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಅಮೆರಿಕಕ್ಕೆ ಹಾರುವ ಎಲ್ಲಾ ಪ್ರಯಾಣಿಕರು ಕೋವಿಡ್-19 ನೆಗಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ನಿರ್ಗಮನಕ್ಕೆ ಕನಿಷ್ಠ ಮೂರು ದಿನಗಳ ಮೊದಲು ಕೊರೋನಾ ಪರೀಕ್ಷೆಯ ವರದಿ ಪಡೆದುಕೊಂಡಿರಬೇಕು ಅಮೆರಿಕ ಸರ್ಕಾರ ಹೇಳಿದೆ.
ಬೋರ್ಡಿಂಗ್ ಗೂ ಮೊದಲು ಕೋವಿಡ್ ನಿಂದ ಚೇತರಿಸಿಕೊಂಡ ಪುರಾವೆ ತೋರಿಸಬೇಕು. ಈ ಆದೇಶವು ವಿದೇಶಿ ಪ್ರಜೆಗಳು ಮತ್ತು ಯುಎಸ್ ನಾಗರಿಕರಿಗೆ ಅನ್ವಯಿಸುತ್ತದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ತಿಳಿಸಿದೆ.
ಜನವರಿ 26 ರಿಂದ ಅಮೆರಿಕಕ್ಕೆ ಬರುವ ಎರಡು ವರ್ಷಕ್ಕೂ ಮೇಲ್ಪಟ್ಟ ಎಲ್ಲಾ ವಾಯು ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗಟಿಲವ್ ವರದಿ ಒದಗಿಸಬೇಕು ಅಥವಾ ಬೋರ್ಡಿಂಗ್ ಮೊದಲು ಕೋವಿಡ್ ನಿಂದ ಚೇತರಿಸಿಕೊಂಡ ಪುರಾವೆ ನೀಡಬೇಕು ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ನೆಗಟಿವ್ ವರದಿ ಹೊಂದಿರದ ಪ್ರಯಾಣಿಕರಿಗೆ ಬೋರ್ಡಿಂಗ್ ಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.