ಶ್ವೇತ ಭವನದಲ್ಲಿ ಕೇಳುತ್ತಿದೆ ನಾಯಿ ಬೊಗಳುವ ಸದ್ದು: ಮಾಲೀಕ ಜೊ ಬೈಡನ್ ಜೊತೆಗೆ ಎರಡು ಸಾಕು ನಾಯಿಗಳ ಆಗಮನ!

ಅಮೆರಿಕದ ಅಧಿಕಾರದ ಶಕ್ತಿ ಕೇಂದ್ರ ಶ್ವೇತಭವನದಲ್ಲಿ ನಾಯಿಗಳ ಬೊಗಳುವಿಕೆಯ ಸಪ್ಪಳ ಕೇಳುತ್ತಿದೆ. ನೂತನ ಅಧ್ಯಕ್ಷ ಜೊ ಬೈಡನ್ ಶ್ವಾನಪ್ರಿಯರು. ಹೀಗಾಗಿ ಶ್ವೇತಭವನಕ್ಕೆ ತಮ್ಮ ಮುದ್ದಿನ ಸಾಕು ನಾಯಿಗಳಾದ ಚ್ಯಾಂಪ್ ಮತ್ತು ಮೇಜರ್ ನನ್ನು ಕರೆತಂದು ಸಾಕುತ್ತಿದ್ದಾರೆ.

Published: 26th January 2021 01:20 PM  |   Last Updated: 26th January 2021 01:20 PM   |  A+A-


Joe Biden with his pet dog.

ತಮ್ಮ ನಾಯಿಯೊಂದಿಗೆ ಜೊ ಬೈಡನ್

Posted By : Sumana Upadhyaya
Source : Associated Press

ವಾಷಿಂಗ್ಟನ್: ಅಮೆರಿಕದ ಅಧಿಕಾರದ ಶಕ್ತಿ ಕೇಂದ್ರ ಶ್ವೇತಭವನದಲ್ಲಿ ನಾಯಿಗಳ ಬೊಗಳುವಿಕೆಯ ಸಪ್ಪಳ ಕೇಳುತ್ತಿದೆ. ನೂತನ ಅಧ್ಯಕ್ಷ ಜೊ ಬೈಡನ್ ಶ್ವಾನಪ್ರಿಯರು. ಹೀಗಾಗಿ ಶ್ವೇತಭವನಕ್ಕೆ ತಮ್ಮ ಮುದ್ದಿನ ಸಾಕು ನಾಯಿಗಳಾದ ಚ್ಯಾಂಪ್ ಮತ್ತು ಮೇಜರ್ ನನ್ನು ಕರೆತಂದು ಸಾಕುತ್ತಿದ್ದಾರೆ.

ಕಳೆದ ಬಾರಿ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ವೇಳೆ ಜೊ ಬೈಡನ್ ಉಪಾಧ್ಯಕ್ಷರಾಗಿದ್ದರು. ಆಗ ಸಹ ಅವರ ಪ್ರಿಯವಾದ ಸಾಕುನಾಯಿಯನ್ನು ಶ್ವೇತಭವನಕ್ಕೆ ಕರೆತಂದು ನೋಡಿಕೊಳ್ಳುತ್ತಿದ್ದರು. ಇದೀಗ ಮತ್ತೆ ಎರಡು ಜರ್ಮನ್ ಶೆಫರ್ಡ್ ನಾಯಿಗಳಾದ ಚ್ಯಾಂಪ್ ಮತ್ತು ಮೇಜರ್ ಶ್ವೇತಭವನದಲ್ಲಿ ವಾಸವಾಗಿದೆ.

ಕಳೆದ ವರ್ಷ ಜೊ ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡೆಲವರೆಯ ವಿಲ್ಮಿಂಗ್ಟನ್ ನಲ್ಲಿರುವ ತಮ್ಮ ನಿವಾಸದಲ್ಲಿ ಮೇಜರ್ ಜೊತೆಗೆ ಆಟವಾಡುತ್ತಿದ್ದಾಗ ಬಿದ್ದು ಬಲಗಾಲು ಮುರಿದುಕೊಂಡಿದ್ದರು. ಮೇಜರ್ ನಾಯಿಯನ್ನು ಜೊ ಬೈಡನ್ ಅವರು 2018ರಲ್ಲಿ ಡೆಲವರೆ ಹ್ಯೂಮನ್ ಅಸೋಸಿಯೇಷನ್ ನಿಂದ ದತ್ತು ಪಡೆದುಕೊಂಡಿದ್ದರು. ಚ್ಯಾಂಪ್ ಜೊ ಬೈಡನ್ ಅವರ ಮನೆಗೆ 2008ರಲ್ಲಿಯೇ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾಗ ಬಂದಿತ್ತು.

ಮೊನ್ನೆ ಭಾನುವಾರ ಎರಡೂ ನಾಯಿಗಳನ್ನು ಶ್ವೇತಭವನಕ್ಕೆ ಕರೆತಂದಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಜೊ ಬೈಡನ್ ಮತ್ತು ಅವರ ಪತ್ನಿ ಬಂದ ಮೇಲೆಯೇ ಅವರು ತಮ್ಮ ನಾಯಿಗಳನ್ನು ಕರೆತಂದಿದ್ದಾರೆ. ಎರಡೂ ನಾಯಿಗಳು ಹೊಸ ಮನೆ, ಹೊಸ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದಾರೆ ಎಂದು ಜೊ ಬೈಡನ್ ಅವರ ಪತ್ನಿ ಅಮೆರಿಕದ ಫಸ್ಟ್ ಲೇಡಿ ಎಂದು ಕರೆಸಿಕೊಳ್ಳುವ ಜಿಲ್ಲ್ ಬೈಡನ್ ಅವರ ವಕ್ತಾರೆ ಮೈಖೆಲ್ ಲಾ ರೊಸಾ ಹೇಳಿದ್ದಾರೆ.

ನಿನ್ನೆ ಬೈಡನ್ ಅವರು ಹಿಂದಿನ ಡೊನಾಲ್ಡ್ ಟ್ರಂಪ್ ಸರ್ಕಾರ, ಮಿಲಿಟರಿಯಲ್ಲಿ ತೃತೀಯ ಲಿಂಗಿಗಳು ಸೇವೆ ಸಲ್ಲಿಸುವುದಕ್ಕೆ ಹೇರಿದ್ದ ನಿಷೇಧವನ್ನು ತೆಗೆದುಹಾಕುವ ಆಡಳಿತಾತ್ಮಕ ಆದೇಶಕ್ಕೆ ಸಹಿ ಹಾಕುತ್ತಿದ್ದ ವೇಳೆ ಶ್ವೇತ ಭವನದ ಒವಲ್ ಆಫೀಸ್ ಹತ್ತಿರ ನಾಯಿ ಬೊಗಳುವ ಸದ್ದು ಕೇಳಿಸಿತು.

ಇಲ್ಲಿ ಮತ್ತೊಂದು ಆಸಕ್ತಿಕರ ವಿಷಯವೆಂದರೆ ನಿರಾಶ್ರಿತ ಕೇಂದ್ರದಲ್ಲಿದ್ದ ಮೇಜರ್ ನಾಯಿ ಅಧ್ಯಕ್ಷರ ಅಧಿಕಾರ ಕೇಂದ್ರ ಶ್ವೇತಭವನಕ್ಕೆ ಬಂದು ನೆಲೆಸಿರುವುದು. ಇಲ್ಲಿ ನಾಯಿಯ ಬೊಗಳುವಿಕೆ ಪ್ರತಿ ನಾಯಿಯು ಅಮೆರಿಕನ್ನರ ಕನಸನ್ನು ನನಸು ಮಾಡಬಹುದು ಎಂದು ಸಂಕೇತಿಸುತ್ತದೆ ಎಂದು ನಾಯಿಯನ್ನು ನೀಡಿದ ಹ್ಯೂಮನ್ ಅಸೋಸಿಯೇಷನ್ ಹೇಳಿದೆ. ನಾಯಿಯ ಮೂಲಕ ವರ್ಚುವಲ್ ಫಂಡ್ ರೈಸ್ ಮಾಡಿರುವ ಸಂಸ್ಥೆ 2 ಲಕ್ಷ ಡಾಲರ್ ಗೂ ಅಧಿಕ ಹಣ ಸಂಗ್ರಹಿಸಿದೆ.

ಮೂಲತಃ ಪ್ರಾಣಿಪ್ರಿಯರಾಗಿರುವ ಜೊ ಬೈಡನ್ ಅವರು ಶ್ವೇತ ಭವನದಲ್ಲಿ ಬೆಕ್ಕುಗಳನ್ನು ಸಹ ಸಾಕಲು ಮುಂದಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp